Rakshit Shetty ಫೇಸ್​ಬುಕ್​ ಕವರ್​ ಫೋಟೋ 3 ವರ್ಷದ ಬಳಿಕ ಚೇಂಜ್! ಒಂದು ಚಿತ್ರ, ನೂರೆಂಟು ಅರ್ಥ

Published : Mar 06, 2026, 07:42 PM IST

ರಶ್ಮಿಕಾ ಮಂದಣ್ಣ ಮದುವೆ ಸುದ್ದಿಯ ನಡುವೆ, ನಟ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ನಂತರ ತಮ್ಮ ಫೇಸ್‌ಬುಕ್ ಕವರ್ ಫೋಟೋ ಬದಲಿಸಿದ್ದಾರೆ. '777 ಚಾರ್ಲಿ' ಸಿನಿಮಾದ ಫೋಟೋವನ್ನು ಹಂಚಿಕೊಂಡಿದ್ದು, ಇದು ಅವರ ಮುರಿದುಬಿದ್ದ ಮದುವೆಯ ಬಗ್ಗೆ ಪರೋಕ್ಷ ಸಂದೇಶವೇ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

PREV
16
ರಕ್ಷಿತ್​ ಶೆಟ್ಟಿ ವಿಷಯ ಮುನ್ನೆಲೆಗೆ

ಅತ್ತ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Madanna and Vijaya Devarakonda marriage) ಆಗುತ್ತಿದ್ದಂತೆಯೇ ಕನ್ನಡಿಗರಿಗೆ ತುಂಬಾ ನೋವು ಕೊಟ್ಟ ಸಂಗತಿ ಎಂದರೆ, ರಕ್ಷಿತ್​ ಶೆಟ್ಟಿ ಅವರ ಹಳೆಯ ಘಟನೆ. ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ಅವರ ಎಂಗೇಜ್​ಮೆಂಟ್​ ನಡೆದಿತ್ತು. ಆದರೆ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ. ಮದುವೆ ಮುರಿದು ಬಿತ್ತು. ಸ್ಯಾಂಡಲ್​ವುಡ್​ನಲ್ಲಿ ತಳವೂರಲು ರಶ್ಮಿಕಾ ಅವರು ರಕ್ಷಿತ್​ ಶೆಟ್ಟಿ (Rakshit Shetty) ಅವರನ್ನು ಏಣಿಯಾಗಿ ಬಳಸಿಕೊಂಡು ಕೈಬಿಟ್ಟರು ಎನ್ನುವ ಮಾತನ್ನು ಕೆಲವರು ಹೇಳುತ್ತಿದ್ದಾರೆಯಾದರೂ, ಅವರ ನಡುವೆ ಏನಾಗಿದೆ ಅವರಿಗೆ ಅಷ್ಟೇ ಗೊತ್ತು. ಉಳಿದವು ಎಲ್ಲವೂ ಊಹಾಪೋಹಗಳು, ಗಾಳಿ ಸುದ್ದಿಗಳು ಅಷ್ಟೇ.

26
ರಕ್ಷಿತ್​ ಶೆಟ್ಟಿ ಮೇಲೆ ಕಣ್ಣು

ಆದರೆ ರಶ್ಮಿಕಾ ಅವರ ಮದುವೆಯಾದಾಗಿನಿಂದಲೂ ರಕ್ಷಿತ್​ ಶೆಟ್ಟಿ ಅವರ ಮೇಲೆ, ಅವರ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟೇ ಇದೆ. ಅಷ್ಟಕ್ಕೂ ರಕ್ಷಿತ್​ ಶೆಟ್ಟಿ ಅವರು ಸೋಷಿಯಲ್​ ಮೀಡಿಯಾದಿಂದ ಬಹಳ ದೂರ. ಆದ್ದರಿಂದ ರಶ್ಮಿಕಾ ಮದುವೆಯ ಬಗ್ಗೆ ಅವರ ನಿಲುವು ಏನು ಎನ್ನುವುದು ಸ್ಪಷ್ಟವಾಗಿರಲಿಲ್ಲ.

36
ಫೇಸ್​ಬುಕ್​ ಕವರ್​ ಫೋಟೋ ಬದಲು

ಆದರೆ, ಇದೀಗ ಮೂರು ವರ್ಷಗಳ ಬಳಿಕ ಫೇಸ್​ಬುಕ್​ ಕವರ್​ ಫೋಟೋ ಬದಲಾಗಿಸಿದ್ದಾರೆ ರಕ್ಷಿತ್​ ಶೆಟ್ಟಿ. 2023ರ ಅಕ್ಟೋಬರ್​ 3ರಂದು ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಕವರ್​ ಫೋಟೋ ಹಾಕಿದ ಮೇಲೆ ಅದನ್ನು ಬದಲಾಯಿಸಿರಲಿಲ್ಲ. ಆದರೆ ಈಗ ಹಾಕಿರುವ ಫೋಟೋ ಹಲವರ ಕಣ್ಣಿನಲ್ಲಿ ಹಲವು ರೀತಿಯಲ್ಲಿ ಕಾಣಿಸುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಕಮೆಂಟ್​, ನಟ ಏನು ಹೇಳದೇ ಈ ಒಂದು ಫೋಟೋ ಹಾಕಿದ್ದರೂ, ಒಂದು ಫೋಟೋ- ನೂರೆಂಟು ಭಾವ ಎನ್ನುವಂತೆ ಇದು ಭಾಸವಾಗುತ್ತಿದೆ.

46
ʻ777 ಚಾರ್ಲಿʼ

ಅಷ್ಟಕ್ಕೂ ರಕ್ಷಿತ್‌ ಶೆಟ್ಟಿ ಅವರನ್ನು ಇಡೀ ದೇಶ ನೋಡುವಂತೆ ಮಾಡಿದ ಚಿತ್ರ ಎಂದರೆ, ಅದು ʻ777 ಚಾರ್ಲಿʼ. ಚಾರ್ಲಿ ನಾಯಿಯ ಜೊತೆ ಇರುವ ಅದೇ ಸಿನಿಮಾದ ಫೋಟೋ ಒಂದನ್ನು ಶೇರ್​ ಮಾಡಿದ್ದಾರೆ ಅಷ್ಟೇ ನಟ! ಆದರೆ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವೇ ಇಲ್ಲದ ನಟ, ಈ ಸಂದರ್ಭದಲ್ಲಿ ಈ ಒಂದು ಫೋಟೋ ಹಾಕಿರಲು ಕಾರಣವಂತೂ ಇಲ್ಲವೇ ಇಲ್ಲ ಬಿಡಿ!

56
ಥಹರೇವಾರಿ ಕಮೆಂಟ್ಸ್​

ಈ ಫೋಟೋ ಹಾಕಿರುವ ಹಿಂದೆ ಅವರ ಉದ್ದೇಶ ಏನಿದ್ಯೋ ಗೊತ್ತಿಲ್ಲ. ಆದರೆ ಅಭಿಮಾನಿಗಳಂತೂ ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. ತಮ್ಮದೇ ಯೋಚನಾ ಲಹರಿ ಹರಿದು ಬಿಡುತ್ತಿದ್ದಾರೆ. ನಾಯಿಗೆ ಇರುವ ನಿಯತ್ತು, ಮನುಷ್ಯರಿಗೆ ಇಲ್ಲಾ ಸರ್​, ನೀವು ಹೇಳ್ತಿರೋದು ನಿಜ ಎಂದು ಹಲವರು ಇದನ್ನು ಅರ್ಥೈಸಿಕೊಂಡಿದ್ದು, ಇದನ್ನು ಮುರಿದು ಹೋದ ಮದುವೆಗೆ ಲಿಂಕ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು, ನಿಮ್ಮ ಉದ್ದೇಶ ಏನು ಎಂದು ಅರ್ಥವಾಯಿತು ಎನ್ನುತ್ತಿದ್ದಾರೆ.

66
ನಟನಿಗೆ ಸಮಾಧಾನ

ಮತ್ತೆ ಕೆಲವರು ರಕ್ಷಿತ್​ ಶೆಟ್ಟಿ ಅವರಿಗೆ ಸಮಾಧಾನ ಮಾಡುತ್ತಿದ್ದಾರೆ. ಆಗಿದ್ದು ಆಗಿಹೋಯ್ತು ಸರ್​, ನಿಮ್ಮ ಜೀವನ ಇನ್ನೂ ಉಜ್ವಲವಾಗಿದೆ. ಆಗಿದ್ದನ್ನೇ ನೆನಪಿಸಿಕೊಂಡು ಕೂತರೆ ಪ್ರಯೋಜನ ಇಲ್ಲ ಎನ್ನುತ್ತಿದ್ದಾರೆ. ಏಕೆಂದರೆ ಈ ಪೋಸ್ಟ್​ ಅತ್ಯಂತ ನೋವಿನ ಪೋಸ್ಟ್​ ಎನ್ನುವುದು ತಿಳಿಯುತ್ತದೆ. ರಕ್ಷಿತ್‌ ಶೆಟ್ಟಿ ಈಸ್‌ ಬ್ಯಾಕ್. ರಿಚರ್ಡ್ ಆಂಟನಿಯ ಆಗಮನಕ್ಕೆ ಕೌಂಟ್‌ಡೌನ್‌ ಶುರು ಎಂದೂ ಫ್ಯಾನ್ಸ್​ ಹೇಳುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories