ಸಾಕಾಯ್ತು ಪಾಕಿಸ್ತಾನ ಸಹವಾಸ, ಅಕ್ಟೋಬರ್‌ನಲ್ಲಿ ಅಂಜು ಭಾರತಕ್ಕೆ ವಾಪಸ್!

First Published | Sep 18, 2023, 4:08 PM IST

ಸೀಮಾ ಹೈದರ್ ಬೆನ್ನಲ್ಲೇ ಭಾರತದಿಂದ ಪ್ರೀತಿ ಅರಸಿ ಪಾಕಿಸ್ತಾನಕ್ಕೆ ತೆರಳಿ ಮದುವೆಯಾಗಿದ್ದ ಅಂಜು ಇದೀಗ ಪಾಕಿಸ್ತಾನ ಸಹಸವಾಸ ಸಾಕಾಯ್ತು ಎಂದಿದ್ದಾಳೆ. ಇಷ್ಟೇ ಅಲ್ಲ ಭಾರತಕ್ಕೆ ಮರಳುತ್ತಿದ್ದಾಳೆ. ಅಕ್ಟೋಬರ್ ಮೊದಲ ವಾರದಲ್ಲಿ ಅಂಜು ರಾಜಸ್ಥಾನಕ್ಕೆ ಮರಳುತ್ತಿದ್ದಾಳೆ. ಈ ಕುರಿತು ಅಂಜು 2ನೇ ಪತಿ ನಸ್ರುಲ್ಲಾ ಪ್ರತಿಕ್ರಿಯ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ಮೂಲಕ ಪ್ರೀತಿ ಶುರುವಾಗಿ ಇಬ್ಬರು ಮಕ್ಕಳು, ಪತಿಯನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದ ರಾಜಸ್ಥಾನದ ಅಂಜು, ಬಳಿಕ ಖೈಬರ್ ಪಖ್ತುಂಕ್ವಾದ ನಸ್ರುಲ್ಲಾ ಮದುವೆಯಾದ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು.

ಒಂದು ವಾರದಲ್ಲಿ ಭಾರತಕ್ಕ ಮರಳುತ್ತೇನೆ ಎಂದು ತೆರಳಿದ ಅಂಜು ಬಳಿಕ ನಸ್ರುಲ್ಲಾ ಮದುವೆಯಾಗಿದ್ದು ಮಾತ್ರವಲ್ಲ, ಇಸ್ಲಾಂಗೆ ಮತಾಂತರಗೊಂಡಿದ್ದಳು. ಇದೀಗ ಅಂಜು ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್. ಅಂಜುಗೆ ಪಾಕಿಸ್ತಾನ ಸಹವವಾಸ ಸಾಕಾಗಿದೆ.

Tap to resize

ಹೆಜ್ಜೆ ಹೆಜ್ಜೆಗೂ ಸಂಪ್ರದಾಯ, ಭಾರತದಲ್ಲಿರುವಂತೆ ಸ್ವಚ್ಚಂದವಾಗಿ ಪಾಕಿಸ್ತಾನದಲ್ಲಿ ಇರಲು ಸಾಧ್ಯವಿಲ್ಲ ಅನ್ನೋದು ಮನದಟ್ಟಾಗಿದೆ. ಇತ್ತ ತನ್ನ ಇಬ್ಬರು ಮಕ್ಕಳನ್ನು ತೊರೆದು ಪಾಕಿಸ್ತಾನಕ್ಕೆ ತೆರಳಿದ ಕಾರಣ ಅಂಜು ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ.

ಪಾಕಿಸ್ತಾನದಲ್ಲಿ ಹೆಣ್ಣಿಗಿರುವ ಸ್ವಾತಂತ್ರ್ಯ, ಅಧಿಕಾರ ಸಿಮೀತವಾಗಿದೆ. ಇಸ್ಲಾಂ ಕಟ್ಟುಪಾಡು ಸೇರಿದಂತೆ ಹಲವು ಕಾರಣಗಳಿಂದ ಅಂಜು ಮಾನಸಿಕವಾಗಿ ನೊಂದಿದ್ದಾಳೆ. ಇದರ ಜೊತೆ ಮಕ್ಕಳನ್ನು ಬಿಟ್ಟು ಬಂದಿರುವುದು ಮತ್ತಷ್ಟು ನೋವು ತರಿಸಿದೆ.

ಅಂಜು ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ಅಂಜು ಅಕ್ಟೋಬರ್ ಮೊದಲ ವಾರದಲ್ಲಿ ಭಾರತಕ್ಕೆ ಮರಳುತ್ತಿದ್ದಾಳೆ.  ಈಗಾಗಲೇ ವಿಮಾನ ಟಿಕೆಟ್ ಬುಕ್ ಮಾಡಲಾಗಿದೆ. ತಾಯಿ ಆಗಮನಕ್ಕಾಗಿ ರಾಜಸ್ಥಾನದಲ್ಲಿರುವ ಮಕ್ಕಳು ಕಾಯುತ್ತಿದ್ದಾರೆ.

ಅಂಜು ಮರಳಿ ಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅಂಜು ತಂದೆ, ಆಕೆಯ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದೇವೆ. ಯಾವಾಗ ಆಕೆ ಪಾಕಿಸ್ತಾನಕ್ಕೆ ತೆರಳಿ ಮದುವೆಯಾದಳೋ ಅಂದೇ ನಮ್ಮ ಪಾಲಿಗೆ ಮಗಳು ಸತ್ತಿದ್ದಾಳೆ ಎಂದಿದ್ದಾರೆ.

ಇತ್ತ ಭಾರತದಲ್ಲಿರುವ ಅಂಜು ಮೊದಲ ಪತಿ ಕೂಡ ಆಕ್ರೋಶ ಹೊರಹಾಕಿದ್ದಾರೆ. ಗೆಳೆಯನ ನೋಡಲು ಜೈಪುರಕ್ಕೆ ತೆರಳುವುದಾಗಿ ಸುಳ್ಳು ಹೇಳಿದ್ದಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ಹೋಗಲು ಮನಸ್ಸು ಹೇಗೆ ಬಂತು? ಎಂದು ಪ್ರಶ್ನಿಸಿದ್ದಾರೆ.

ಇಷ್ಟು ದಿನ ಮಕ್ಕಳು ಹೇಗಿದ್ದಾರೆ? . ಅವರ ಆರೋಗ್ಯ ಹೇಗಿದೆ?  ಯಾರು ನೋಡಿಕೊಳ್ಳುತ್ತಿದ್ದಾರೆ ಅನ್ನೋ ಕುರಿತು ಫೋನ್ ಮಾಡಿ ವಿಚಾರಿಸಿಲ್ಲ. ಇದೀಗ ಮಕ್ಕಳ ನೆಪ ಹೇಳುತ್ತಿದ್ದಾಳೆ. ಪಾಕಿಸ್ತಾನದ ನರಕ ಅರ್ಥವಾಗಿದೆ. ಅದಕ್ಕೆ ವಾಪಾಸ್ ಬರುತ್ತಿದ್ದಾಳೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Latest Videos

click me!