ಮದುವೆಯ ಮೊದಲನೇ ದಿನ ಅತ್ತೆ ಮನೆಯಲ್ಲಿರೋ ಹುಡುಗಿ ಮನಸಲ್ಲಿ ಏನೆಲ್ಲಾ ಯೋಚನೆ ಬರುತ್ತೆ?

Published : Sep 17, 2023, 06:18 PM IST

ಮೊದಲಿಗೆ ಹೋಲಿಸಿದರೆ ಮದುವೆಯ ಬಗ್ಗೆ ಜನರ ಆಲೋಚನೆ ಸಾಕಷ್ಟು ಬದಲಾಗಿದೆ ಎಂದು ಹೇಳಿದ್ರೆ ತಪ್ಪಾಗಲಾರದು. ಆದರೆ ಮದುವೆಯಾಗಿ ಗಂಡನ ಮನೆಗೆ ಹೋದಾಗ, ಮೊದಲ ದಿನ ವಧುವಿನ ತಲೆಯಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಬಗ್ಗೆ ತಿಳಿಯೋಣ.   

PREV
18
ಮದುವೆಯ ಮೊದಲನೇ ದಿನ ಅತ್ತೆ ಮನೆಯಲ್ಲಿರೋ ಹುಡುಗಿ ಮನಸಲ್ಲಿ ಏನೆಲ್ಲಾ ಯೋಚನೆ ಬರುತ್ತೆ?

ಮದುವೆ ಸಮಾಜದ ಒಂದು ಭಾಗ: ಉತ್ತಮ ಸಮಾಜಕ್ಕೆ ಮದುವೆ ಬಹಳ ಮುಖ್ಯ ಅನ್ನೋದನ್ನು ಇನ್ನೂ ಸಹ ಭಾರತೀಯ ಸಮಾಜದಲ್ಲಿ  (Indian Society) ಪ್ರತಿಯೊಬ್ಬರೂ ನಂಬುತ್ತಾರೆ. ಮದುವೆ ಇಬ್ಬರು ವ್ಯಕ್ತಿಗಳ ನಡುವೆ ಆದರೂ ಸಹ, ಅದು ಎರಡು ಕುಟುಂಬಗಳನ್ನು ಒಂದು ಮಾಡುವಂತಹ ಸಂಗತಿಯಾಗಿದೆ. 
 

28

ಮದುವೆ: ಜೀವನದಲ್ಲಿ ಒಂದು ದೊಡ್ಡ ಬದಲಾವಣೆ: ಮದುವೆ (marriage) ಫಿಕ್ಸ್ ಆದ ಕೂಡಲೇ ವಧು ಮತ್ತು ವರನ ಜೀವನವು ಬದಲಾಗುತ್ತದೆ. ಏಕೆಂದರೆ ಹುಡುಗನ ಮನಸ್ಸಿನಲ್ಲಿ ಜವಾಬ್ದಾರಿಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತವೆ. ಅದೇ ಸಮಯದಲ್ಲಿ, ಹುಡುಗಿ ತನ್ನ ಹೊಸ ಜೀವನದ ಬಗ್ಗೆ ಯೋಚನೆ ಮಾಡಲು ಆರಂಭಿಸುತ್ತಾಳೆ. ಏನೆಲ್ಲಾ ಯೋಚನೆ ಮೂಡುತ್ತೆ ನೋಡೋಣ.

38

ನಾಳೆ ಹೇಗಿರುತ್ತದೆ?: ಮದುವೆ ಹುಡುಗರು ಮತ್ತು ಹುಡುಗಿಯರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದರ ದೊಡ್ಡ ಪರಿಣಾಮ ಹುಡುಗಿಯ ಮೇಲೆ ಬೀಳುತ್ತೆ. ಏಕೆಂದರೆ ಮದುವೆಯಾದ ಬಳಿಕ, ಆಕೆ ತಾನು ಹುಟ್ಟಿ ಬೆಳೆದ ಮನೆ ಬಿಟ್ಟು, ಅತ್ತೆ ಮನೆಗೆ ಹೋಗುತ್ತಾಳೆ. ಆ ಸಮಯದಲ್ಲಿ ಆಕೆಯ ಮನಸಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ. ನಾಳಿನ ಜೀವನ ಹೇಗಿರಲಿದೆ ಎನ್ನುವ ಭಯ ಹುಟ್ಟಿಕೊಳ್ಳುತ್ತೆ. 

48

ಎಲ್ಲರನ್ನೂ ಹೇಗೆ ಕರೆಯಬೇಕು?: ನನ್ನ ಪತಿ ಕರೆಯುವಂತೆ ನಾನು ಕಿರಿಯ ಸಂಬಂಧಿಕರನ್ನು ಅವರ ಹೆಸರಿನಿಂದ ಕರೆಯಬೇಕೇ ಅಥವಾ ನಾನು ಅವರನ್ನು ಅಣ್ಣ ಅಥವಾ ಅಕ್ಕ ಎಂದು ಕರೆಯಬೇಕೇ? ಹಿರಿಯರನ್ನು ಹೇಗೆ ಕರೆಯೋದು ಎಂದೆಲ್ಲಾ ಸಂಶಯ ಮೂಡುತ್ತೆ. 

58

ನಾನು ಮಲಗಬೇಕೇ?: ಮದುವೆ ಅನ್ನೋದೆ ತುಂಬಾ ಆಯಾಸದಿಂದ ಕೂಡಿದ ಕ್ಷಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹೊಸ ವಧು ತಾನು ನಿದ್ರೆ ಮಾಡುವ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾಳೆ. ಏಕೆಂದರೆ ಅವಳು ಮನೆಯ ಹೊಸ ಸದಸ್ಯೆಯಾಗಿದ್ದಾಳೆ, ಅವರ ಸುತ್ತಲೂ ಯಾವಾಗಲೂ ಜನರು ತುಂಬಿರೋದರಿಂದ ಮಲಗಬೇಕೆ? ಬೇಡವೇ ಅನ್ನೋದೆ ಗೊತ್ತಾಗೋದಿಲ್ಲ. 

68

ಯಾವಾಗ ಮತ್ತೆ ಮನೆಗೆ ಹೋಗ್ತಿನಿ: ಮದುವೆಯ ನಂತರ, ಪ್ರತಿ ಹುಡುಗಿಗೆ ಹೋಮ್ ಸಿಕ್ ನೆಸ್ ಉಂಟಾಗುತ್ತೆ. ಯಾಕಂದ್ರೆ, ಆಕೆ ತನ್ನವರನ್ನು ಬಿಟ್ಟು ಹೊಸ ಮನೆಗೆ ಕಾಲಿಡುತ್ತಾಳೆ. ಹಾಗಾಗಿ ಈ ಸಂದರ್ಭದಲ್ಲಿ ಆಕೆಗೆ ಮತ್ತೆ ಮನೆಗೆ ಹೋಗುವ ಬಯಕೆ ಉಂಟಾಗುತ್ತೆ. 

78

ಮದುವೆಯ ಡ್ರೆಸ್, ಜ್ಯುವೆಲ್ಲರಿ ಯಾವಾಗ ಬಿಚ್ಚೋದು ಅನಿಸುತ್ತೆ
ಮದುವೆಯ ನಂತರವೂ, ಅನೇಕ ಆಚರಣೆಗಳಿವೆ, ಇದರಲ್ಲಿ ನವವಿವಾಹಿತರು (newly wedded) ಭಾಗವಹಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ವಧು ಸೀರೆ, ಎಲ್ಲಾ ರೀತಿಯ ಜ್ಯುವೆಲ್ಲರಿ, ಡಜನ್ ಗಟ್ಟಲೆ ಬಳೆಗಳನ್ನು ಧರಿಸಬೇಕಾಗುತ್ತೆ. ಇದನ್ನೆಲ್ಲಾ ಯಾವಾಗ ಬಿಚ್ಚೋದು ಎಂದೆನಿಸಲು ಆರಂಭವಾಗುತ್ತೆ. 

88

ಈ ಜನರು ನನ್ನನ್ನು ಇಷ್ಟಪಡುತ್ತಾರೆಯೇ?
ಮೊದಲ ದಿನ ಅತ್ತೆ-ಮಾವನ ಮನೆಗೆ ಬಂದ ನಂತರ, ಹೆಚ್ಚಿನ ಹುಡುಗಿಯರು ಈ ಮನೆಯ ಸದಸ್ಯರು ನನ್ನನ್ನು ಇಷ್ಟಪಡುತ್ತಾರೆಯೇ ಎಂದು ಯೋಚನೆ ಮಾಡಲು ಆರಂಭಿಸುತ್ತಾರೆ.  ನಾನಂತೂ ಎಲ್ಲರನ್ನು ಗೌರವಿಸುತ್ತೇನೆ ಎಂದು ಅಂದುಕೊಳ್ಳುತ್ತಾರೆ. 

Read more Photos on
click me!

Recommended Stories