ಈ ವಿಚಿತ್ರ ಮದುವೆಯ ಆಚರಣೆಯಲ್ಲಿ ವರನಿಗೆ ಕಲ್ಲನ್ನು ತಿನ್ನೋಕೆ ಕೊಡ್ತಾರಂತೆ!

First Published | Sep 17, 2023, 6:21 PM IST

ಪ್ರತಿಯೊಬ್ಬರ ಜಾತಿ, ಧರ್ಮ, ಉಪಭಾಷೆ ಮತ್ತು ಜೀವನ ಶೈಲಿ ವಿಭಿನ್ನವಾಗಿರುವಂತೆ, ಅವರ ಮದುವೆಯ ಸಂಸ್ಕೃತಿ ಮತ್ತು ಆಚರಣೆಯೂ ವಿಭಿನ್ನವಾಗಿರುತ್ತದೆ. ಇಂದು ನಾವು ಛತ್ತೀಸ್ಗಢದ ವಿಚಿತ್ರ ಮದುವೆಯ ಆಚರಣೆಯ ಬಗ್ಗೆ ತಿಳಿಯೋಣ. 
 

ವಿವಾಹವು (Wedding) ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಬೆಸುಗೆ ಅಲ್ಲ., ಆದರೆ ಎರಡು ಕುಟುಂಬಗಳು ಮತ್ತು ಸಮಾಜದ ನಡುವಿನ ಸಂಬಂಧವಾಗಿದೆ. ಭಾರತದಲ್ಲಿ ಮದುವೆಯನ್ನು ಬಹಳ ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಜನರು ತಮ್ಮ ಇಡೀ ಜೀವನದ ಗಳಿಕೆಯನ್ನು ಒಂದು ದಿನದ ಮದುವೆಗಾಗಿ ಬಳಕೆ ಮಾಡ್ತಾರೆ.. ಈ ಒಂದು ದಿನದ ಕಾರ್ಯಕ್ರಮಕ್ಕೆ ಜನರು ವರ್ಷಗಳಿಂದ ತಯಾರಿ ನಡೆಸುತ್ತಿದ್ದಾರೆ.  ಎಲ್ಲಾ ಧರ್ಮಗಳು ಮತ್ತು ಜಾತಿಗಳ ವಿವಾಹದ ಪದ್ಧತಿಗಳು ಮತ್ತು ಆಚರಣೆಗಳು ಭಿನ್ನವಾಗಿವೆ. 
 

ಇಂದು ನಾವು ಛತ್ತೀಸ್ಗಢದ ವಿಶಿಷ್ಟ ವಿವಾಹ ಪದ್ಧತಿಯ (unique wedding ritual) ಬಗ್ಗೆ ನಿಮಗೆ ಹೇಳುತ್ತೇವೆ. ಈ ವಿವಾಹ ಸಂಪ್ರದಾಯದಲ್ಲಿ, ವಧುವಿನ ತಂಗಿ, ತನ್ನ ಭಾವನಿಗೆ ಅಂದರೆ ನವ ವರನಿಗೆ ಕಲ್ಲು ಮತ್ತು ಕಲ್ಲಿನಿಂದ ಮಾಡಿದ ತಿಂಡಿಯನ್ನು ತಿನ್ನಿಸುತ್ತಾಳೆ. ಈ ವಿಶಿಷ್ಟ ಆಚರಣೆ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 
 

Tap to resize

ಏನಿದು ರಾತಿ ಭಾಜಿ?: ಹೆಸರೇ ಸೂಚಿಸುವಂತೆ ರಾತಿ ಎಂದರೆ ರಾತ್ರಿ ಮತ್ತು ಭಾಜಿ ಎಂದರೆ ಆಹಾರ ಅಥವಾ ಸೊಪ್ಪುಗಳು. ಈ ಆಚರಣೆಯಲ್ಲಿ, ವರನು ಮದುವೆಯ ಮೆರವಣಿಗೆಯನ್ನು ತಂದಾಗ, ಅವನನ್ನು ಅವನ ಅತ್ತೆ ಮತ್ತು ಮಾವ ಸ್ವಾಗತಿಸುತ್ತಾರೆ, ನಂತರ ಪತ್ನಿಯಾಗುವವಳ ತಂಗಿ ತನ್ನ ಭಾವನನ್ನು ಸ್ವಾಗತಿಸುತ್ತಾಳೆ. ಜೀಜೂ ಮತ್ತು ಸಾಲಿ ಅಂದರೆ ಭಾವ ಮತ್ತು ನಾದಿನಿ ಸಂಬಂಧದ ಈ ಆಚರಣೆ ಇಂಟ್ರೆಸ್ಟಿಂಗ್ ಆಗಿದೆ.. ಈ ಆಚರಣೆಯು ವಿನೋದದಿಂದ ಕೂಡಿದೆ. ನಾದಿನಿಯು ತನ್ನ ಭಾವನನ್ನು ಸ್ವಾಗತಿಸುವ ಈ ಆಚರಣೆಯನ್ನು ರಾತಿ ಭಾಜಿ ಎಂದು ಕರೆಯಲಾಗುತ್ತದೆ. 

ರಾತಿ ಭಾಜಿಯ ಆಚರಣೆಯನ್ನು ಹೇಗೆ ನಡೆಸಲಾಗುತ್ತದೆ? : ತನ್ನ ಭಾವನ ಅಂದರೆ ನೂತನ ವರನ ಸ್ವಾಗತಕ್ಕಾಗಿ, ಸಾಲಿ ಅಂದರೆ ವಧುವಿನ ತಂಗಿ ದೊಡ್ಡ ತಟ್ಟೆಯಲ್ಲಿ (thali) ಆಹಾರವನ್ನು ತರುತ್ತಾರೆ, ಇದು ತಿನ್ನಲು ಮತ್ತು ಕುಡಿಯಲು ವಿವಿಧ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಖಾದ್ಯದ ಹೊರತಾಗಿ, 10 ರಿಂದ 12 ರೀತಿಯ ಎಲೆಗಳು, ಪಾನ್, ದಾತುನ್, ಪೆಬಲ್ ಸ್ಟೋನ್ (pebble stone) ಮಿಶ್ರಿತ ಭಕ್ಷ್ಯಗಳು, ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಮಾಡಿದ ಶರ್ಬತ್ತು ಎಲ್ಲವೂ ಇರುತ್ತದೆ. 

ನಾದಿನಿ ತನ್ನ ಭಾವನಿಗೆ ಈ ಎಲ್ಲಾ ವಸ್ತುಗಳನ್ನು ತಿನ್ನಲು ಹೇಳುತ್ತಾಳೆ. ಈ ಆಚರಣೆ ಬಗ್ಗೆ ತಿಳಿಯದೇ ಇರುವ ವರ ಅಲ್ಲಿರೋದು, ಕಲ್ಲು ಎಂದು ತಿಳಿಯದೇ ತಿನ್ನುತ್ತಾರೆ. ಆದರೆ ಈ ಪದ್ಧತಿ ಆಚರಣೆ ಬಗ್ಗೆ ತಿಳಿದಿರುವ ವರ ಮಾತ್ರ ಅಲ್ಲಿರೋದನ್ನು ತಿನ್ನೋದೆ ಇಲ್ಲ. ಆದರೆ ತಿಂದ್ರೂ ತಿನ್ನದೇ ಇದ್ರೂ ವರನಿಗೆ ನಷ್ಟವಾಗೋದು ಖಚಿತಾ. 
 

ರಾತಿಭಾಜಿಗೆ ಆಹಾರ ನೀಡಲು ಉತ್ತಮ ತಿಂಡಿಗಳು ಲಭ್ಯವಿದೆ: ಈ ಆಚರಣೆಯಲ್ಲಿ ವಧುವಿನ ತಂಗಿಗೆ ಹೆಚ್ಚಿನ ಹಣವೂ ಕೂಡ ಸಿಗುತ್ತೆ. ಭಾವ ತಟ್ಟೆಯಲ್ಲಿದ್ದ ತಿಂಡಿಗಳನ್ನು ತಿಂತಾರೋ ಇಲ್ವೋ ಗೊತ್ತಿಲ್ಲ, ಆದರೆ ಅವನು ತನ್ನ ನಾದಿನಿ ಎಷ್ಟು ಹಣ ಕೇಳುತ್ತಾಳೋ, ಅಷ್ಟನ್ನು ನೀಡಲೇಬೇಕಾಗುತ್ತೆ. ನಗು ಮತ್ತು ವಿನೋದದಿಂದ ತುಂಬಿದ ಈ ಆಚರಣೆಯನ್ನು ಎಲ್ಲರೂ ಎಂಜಾಯ್ ಮಾಡ್ತಾರೆ. 
 

Latest Videos

click me!