'ಬಿಗ್ಬಾಸ್ ಅಗ್ನಿಪರೀಕ್ಷೆ'ಯಲ್ಲಿ ತನ್ನ ಮುಗ್ಧತೆಯಿಂದ ಎಲ್ಲರ ಮನಗೆದ್ದಿದ್ದ ಕುಮಾರಿ, ಆರೋಗ್ಯ ಸಮಸ್ಯೆಯಿಂದಾಗಿ ವೇದಿಕೆಯಲ್ಲೇ ಕುಸಿದು ಸ್ಪರ್ಧೆಯಿಂದ ಹೊರನಡೆದರು. ಆದರೆ, ಅವರ ಬದುಕಿಗೆ ತಿರುವು ಸಿಕ್ಕಿದ್ದು, ವಿನಯ್ ಗೌಡ ರಕ್ಷಣೆ ನೀಡಿದರೆ, ಪ್ರಾಯೋಜಕರು 5 ಲಕ್ಷ ನಗದು, ಉದ್ಯೋಗದ ಭರವಸೆ ನೀಡಿದ್ದಾರೆ.
ಬಿಗ್ಬಾಸ್ ಅಗ್ನಿಪರೀಕ್ಷೆ (Bigg Boss Agni Pareekshe)ಯಲ್ಲಿ ಬಿಗ್‌ಬಾಸ್‌ಗೆ ಹೋಗುವ ಆಸೆಯಿಂದ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ 60 ಮಂದಿ ಫೈನಲ್ ಆಗಿ ಆಯ್ಕೆಯಾಗಿದ್ದರು. ಮೂವರನ್ನು ಮಾತ್ರ ಬಿಗ್ಬಾಸ್ ಮನೆಯೊಳಕ್ಕೆ ಕಳುಹಿಸುವುದಾಗಿ ಹೇಳಲಾಗಿದೆ.
26
ಕುಮಾರಿಗೆ ಒಲಿದಿತ್ತು ಅದೃಷ್ಟ
ಅವರ ಪೈಕಿ ಕುಮಾರಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಎಂಟ್ರಿ ಕೊಟ್ಟಿದ್ದರು ಲಾವಣ್ಯ ಕುಮಾರಿ. ರಕ್ಷಿತಾ ಶೆಟ್ಟಿ ಅವರನ್ನು ನೆನಪಿಸುವಂತೆ ಸಕತ್ ಜೋಕ್ ಮಾಡುತ್ತಿದ್ದರು ಕುಮಾರಿ. ಮುಗ್ಧವಾಗಿ ಮಾತನಾಡಿ ನಾಲ್ಕೂ ಜಡ್ಜಸ್ ಮನೆ ಗೆದ್ದಿದ್ದರು. ‘ಸ್ಟಾರ್ ಕಂಟೆಂಡರ್’ ಆಗಿ ಸೆಲೆಕ್ಟ್ ಕೂಡ ಆಗಿದ್ದರು.
36
ವೇದಿಕೆ ಮೇಲೆಯೇ ಕುಸಿದಿದ್ದ ಕುಮಾರಿ
ತಮ್ಮ ಮಾತಿನ ಶೈಲಿಯಿಂದಲೇ ಎಲ್ಲರ ಮನ ಗೆದ್ದಿದ್ದ ಯುವತಿ ಇನ್ನೇನು ಬಿಗ್‌ಬಾಸ್‌ಗೆ ಸೆಲೆಕ್ಟ್ ಆಗುತ್ತಾಳೆ ಎನ್ನುವಾಗಲೇ, ವೇದಿಕೆ ಮೇಲೆ ಕುಸಿದು ಬಿದ್ದಿದ್ದರು. ಕುಮಾರಿ ಅವರು ಬಿಗ್ಬಾಸ್ ಆಟ ಮುಂದುವರೆಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಇದೇ ಕಾರಣಕ್ಕೆ, ವೈದ್ಯರ ಸಲಹೆ ಮೇರೆಗೆ ಬಿಗ್ಬಾಸ್ನಿಂದ ಹೊರಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಅಪ್ಪನಿಲ್ಲದೇ, ಅನಾರೋಗ್ಯಪೀಡಿತ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಬದುಕುತ್ತಿರುವ ಕುಮಾರಿಗೂ ಆರೋಗ್ಯ ಸರಿಯಿಲ್ಲ. ಟಾಸ್ಕ್ ಆಡುವಾಗ ಕುಸಿದಿದ್ದ ಕುಮಾರಿಯನ್ನು ಕಲರ್ಸ್ ತಂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಇದೀಗ ತೀರ್ಪುಗಾರರಲ್ಲಿ ಒಬ್ಬರಾಗಿರುವ ವಿನಯ್ ಗೌಡ ಅವರಿಗೆ ಕುಮಾರಿ ರಾಖಿ ಕಟ್ಟಿದ್ದರು. ಇದರಿಂದ ಭಾವುಕರಾಗಿರುವ ವಿನಯ್ ಗೌಡ ಅವರು ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, "ಲೋ ಪುಟ್ಟಿ, ನೀನು ಕಟ್ಟಿರುವ ಈ ರಾಖಿ ನಂಗೆ ಸಖತ್ ಸ್ಪೆಷಲ್, ತುಂಬಾ ಮೌಲ್ಯದಿಂದ ಕೂಡಿದೆ. ನಾನು ನಿನಗೆ ಪ್ರಾಮಿಸ್ ಮಾಡ್ತೀನಿ, ಉಸಿರು ಇರುವವರೆಗೂ ನಿನ್ನ ರಕ್ಷಣೆಗೆ ನಾನು ಸದಾ ಇರುತ್ತೇನೆ. ಯಾರಿಗೂ ಹೆದರಬೇಡ, ನಿನ್ನ ಹಿಂದೆ ಈ ಅಣ್ಣ ಯಾವಾಗ್ಲೂ ಇರ್ತಾನೆ ಎಂದಿದ್ದಾರೆ. ಜೊತೆಗೆ ಕುಮಾರಿ ಜೊತೆಗಿನ ಫೋಟೋ ಹಂಚಿಕೊಂಡು, ಭಾವುಕ ಮಾತುಗಳನ್ನ ಹೇಳಿದ್ದಾರೆ ವಿನಯ್ ಗೌಡ.
56
5 ಲಕ್ಷದ ಆಫರ್
ಇದೇ ವೇಳೆ, ಅದೃಷ್ಟ ಎನ್ನುವುದು ಹೇಗೆ ಬೇಕಾದರೂ ಬರುತ್ತದೆ ಎನ್ನುವುದಕ್ಕೆ ಕುಮಾರಿ ಸಾಕ್ಷಿಯಾಗಿದ್ದಾರೆ. ಅವರ ಮುಗ್ಧತೆಗೆ ಈಗ ಭರ್ಜರಿ ಆಫರ್ ಸಿಕ್ಕಿದೆ. ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿಗೆ 5 ಲಕ್ಷ ನಗದನ್ನು ಸಹಾಯವಾಗಿ ನೀಡಿದೆ.
66
ಕುಮಾರಿಗೆ ಶಿಕ್ಷಣ
ಇಷ್ಟೇ ಅಲ್ಲದೆ, ಕುಮಾರಿಯ ಶಿಕ್ಷಣ ಪೂರ್ಣಗೊಂಡ ಬಳಿಕ ಸಂಸ್ಥೆಯ ವತಿಯಿಂದ ಮತ್ತೊಂದು ದೊಡ್ಡ ಅವಕಾಶವನ್ನೂ ಘೋಷಿಸಲಾಗಿದೆ. ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಸಂಸ್ಥೆಯ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಕುಮಾರಿಗೆ ನೀಡಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.