ಆ್ಯಂಕರಿಂಗ್ ಕ್ಷೇತ್ರದಲ್ಲಿ 20 ವರ್ಷ ಪೂರೈಸಿರುವ ಅನುಶ್ರೀ, ಇದೀಗ ಪತಿ ರೋಷನ್ ಜೊತೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ. ಗಗನಸಖಿಯಾಗುವ ಕನಸು ಕಂಡಿದ್ದ ಅವರು, ತಮ್ಮ ಹಿಂದಿನ ಕಷ್ಟದ ದಿನಗಳನ್ನು ಮರೆತು, ಪತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್ ಅನುಶ್ರೀ (Anchor Anushree). ಆ್ಯಂಕರಿಂಗ್ ಎನ್ನುವ ಕಲೆ ಬೇಕು ಎಂದರೆ ಕರಗತವಾಗುವಂಥದ್ದಲ್ಲ. ಅದರಲ್ಲಿಯೂ ರಿಯಾಲಿಟಿ ಷೋ ಸಕ್ಸಸ್ ಮಾಡುವಲ್ಲಿ ಆ್ಯಂಕರ್ಸ್ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ಮೊದಲೇ ಸ್ಕ್ರಿಪ್ಟ್ ನೀಡುತ್ತಾರೆಯಾದರೂ, ಎಲ್ಲವೂ ಸ್ಕ್ರಿಪ್ಟ್ನಿಂದಲೇ ನಡೆಯುವಂಥ ಕಲೆ ಆ್ಯಂಕರಿಂಗ್ ಅಲ್ಲ. ಆ ಕ್ಷಣದಲ್ಲಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ, ಜನರನ್ನು ನಗಿಸುವ ಕಲೆ ಸುಲಭವೂ ಅಲ್ಲ. ಅದು ಒಲಿದಿರುವುದು ಆ್ಯಂಕರ್ ಅನುಶ್ರೀ ಅವರಂಥ ಕೆಲವೇ ಕೆಲವು ಆ್ಯಂಕರ್ಗಳಿಗೆ.
26
ಮನ ಮೆಚ್ಚಿದ ಜೋಡಿ
ಆ್ಯಂಕರ್ ಅನುಶ್ರೀ ಅವರು ಸದ್ಯ ತಾವು ಮನಮೆಚ್ಚಿದ ಹುಡುಗ ರೋಷನ್ ಅವರನ್ನು ಮದುವೆಯಾಗಿ ಸುಖಮಯ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅನುಶ್ರೀ ಎಲ್ಲಿಯೇ ಹೋದರೂ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಅದು ಮದುವೆ ಯಾವಾಗ ಎನ್ನುವುದು. ಎರಡು ವರ್ಷಗಳಿಂದ ಅನುಶ್ರೀ ಅವರು ರೋಷನ್ ಅವರ ಜೊತೆ ಫ್ರೆಂಡ್ಷಿಪ್ನಲ್ಲಿ ಇದ್ದರೂ ಈ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಒಂದೇ ಸಲ ಮದುವೆಯ ಬಗ್ಗೆ ಮಾತನಾಡಿ ಸರ್ಪ್ರೈಸ್ ಕೊಟ್ಟಿದ್ದರು.
36
ಮೊದಲ ವಿವಾಹ ವಾರ್ಷಿಕೋತ್ಸವ
ಇದೀಗ ಅನುಶ್ರೀ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವಿದೇಶ ಪ್ರಯಾಣದಲ್ಲಿ ಇರುವಂತೆ ತೋರುತ್ತಿದೆ. ಪತಿ ರೋಷನ್ ಜೊತೆಗೆ ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಅನುಶ್ರೀ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
ಇದೀಗ ಅವರು, ನಾನು ನನ್ನ ಹೆಂಡ್ತೀರು ಚಿತ್ರದ ಅರೆರೆರೆ ಮರೆತು ಮರೆತು ಎಲ್ಲ ಮರೆತು ಹಾಯಾಗಿರುವೆ ಮೂರು ಹೊತ್ತುನಿನ್ನ ಹೊರತು ಬೇರೆ ಏನು ನನ್ ಪ್ರೀತೀಗ್ ಗೊತ್ತು... ಹಾಡಿನ ಹಿನ್ನೆಲೆಯಲ್ಲಿ ಪತಿಯ ಜೊತೆ ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನಿಮಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
56
ಮುಳ್ಳಿನ ಹಾದಿ
18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಈ ಸಂದರ್ಭದಲ್ಲಿ, ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಅನುಶ್ರೀ ಜೀ ಕನ್ನಡ ವೇದಿಕೆಯಲ್ಲಿ ಭಾವುಕರಾಗಿದ್ದರು. ವೇದಿಕೆಯ ಮೇಲೆಯೇ ಕಣ್ಣೀರಾದರು. ಅನುಶ್ರೀ ಅವರು ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಅದನ್ನೇ ನೆನೆದು ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ, ಇದೀಗ ಎಲ್ಲವನ್ನೂ ಮರೆತು ಪತಿಯ ಜೊತೆ ಸಂತಸದ ದಿನಗಳನ್ನು ಅನುಭವಿಸುತ್ತಿದ್ದಾರೆ. ಇವರಿಗೆ ಅಭಿಮಾನಿಗಳ ಪ್ರೀತಿಯ ಹಾರೈಕೆಯೂ ಜೊತೆಗಿದೆ.
66
ಗಗನಸಖಿ ಆಗುವ ಬಯಕೆ
ಅಷ್ಟಕ್ಕೂ ಅನುಶ್ರೀ ಅವರಿಗೆ ಗಗನಸಖಿ ಆಗಬೇಕು ಎನ್ನುವ ಅದಮ್ಯ ಬಯಕೆ ಇತ್ತಂತೆ. ಅದಕ್ಕಾಗಿ ಕಂಡಕಂಡ ಜ್ಯೋತಿಷಿಗಳಿಗೆ ಜಾತಕ ತೋರಿಸುತ್ತಿದ್ದರಂತೆ. ಅವರು ನೀನು ತುಂಬಾ ಎತ್ತರಕ್ಕೆ ಹೋಗುತ್ತೀ ಎಂದಿದ್ದರು. ನಾನು ಎತ್ತರ ಎಂದಾಕ್ಷಣ ಆಕಾಶ ಎಂದುಕೊಂಡಿದ್ದೆ, ಗಗನಸಖಿ ಆಗ್ತೇನೆ ಎಂದು ಅಂದುಕೊಂಡಿದ್ದೆ ಎಂದು ಚಂದನ ವಾಹಿನಿಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ ಹೇಳಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.