ಸಾನ್ವಿಯ ಮದುವೆ ಮಾಡಲ್ಲ: ಬಹುದೊಡ್ಡ ಗುಟ್ಟು ರಿವೀಲ್‌ ಮಾಡಿದ ಅಮ್ಮ ಪ್ರಿಯಾ ಸುದೀಪ್‌ ಹೇಳಿದ್ದೇನು

Published : Jun 02, 2026, 07:40 PM IST

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ 'ಜಿಮ್ಮಿ' ಚಿತ್ರದ ಮೂಲಕ ಗಾಯಕಿಯಾಗಿ ಮತ್ತು ಸಹಾಯಕ ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ನಟನೆ ಮತ್ತು ಸಿನಿಮಾ ಮೇಕಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸಾನ್ವಿ,  , ತಮಗೆ ಪುಷ್ಪರಾಜ್‌ನಂತಹ ಗಂಡ ಬೇಕು ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

PREV
15
ಬಹುಮುಖ ಪ್ರತಿಭೆ ಸಾನ್ವಿ ಸುದೀಪ್‌

ಕಿಚ್ಚ ಸುದೀಪ್‌ ಅವರ ಪುತ್ರಿ ಸಾನ್ವಿ ಸುದೀಪ್‌ ಅವರನ್ನು ನಟಿಯಾಗಿ ನೋಡಲು ಅವರ ಫ್ಯಾನ್ಸ್‌ ಕಾತರರಾಗಿದ್ದಾರೆ. ಆದರೆ ಸದ್ಯ ಸಾನ್ವಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿ, ನಿರ್ದೇಶನ ಮಾಡುತ್ತಿರುವ 'ಜಿಮ್ಮಿ' ಸಿನಿಮಾಗೆ ಹಾಡೊಂದನ್ನು ಬರೆದು ಹಾಡುವ ಮೂಲಕ ಸಿಂಗರ್ ಆಗಿ ಸಾನ್ವಿ ಸುದೀಪ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ ವಿಕ್ರಾಂತ್ ರೋಣ ಚಿತ್ರದ 'ರಾ ರಾ ರಕ್ಕಮ್ಮ' ಹಾಡಿನ ಟ್ರ್ಯಾಕ್ ಸಾಂಗ್ ಹಾಡಿದ್ದರು.

25
ಸಹಾಯಕ ನಿರ್ದೇಶಕಿಯಾಗಿ ಕೆಲಸ

ಗಾಯಕಿ ಮಾತ್ರವಲ್ಲದೇ, ಜಿಮ್ಮಿ ಸಿನಿಮಾಗೆ ಸಹಾಯಕ ನಿರ್ದೇಶಕಿ ಆಗಿ ಕೂಡ ಸಾನ್ವಿ ಕೆಲಸ ಮಾಡ್ತಿದ್ದಾರೆ. ಸಿನಿಮಾ ಮೇಕಿಂಗ್ ಬಗ್ಗೆ ಕಲಿಯಲು ಇದು ಸಹಾಯಕವಾಗುತ್ತೆ. ನನಗೆ ಸಿನಿಮಾ ಮೇಕಿಂಗ್, ನಟನೆ ಬಗ್ಗೆಯೂ ಹೆಚ್ಚು ಆಸಕ್ತಿಯಿದೆ ಅಂತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಂದೆ ಚಿತ್ರಕ್ಕೆ ಕಥೆ ಬರೆಯುವ ಪ್ರಯತ್ನ ಕೂಡ ಮಾಡುತ್ತೀನಿ ಅಂತ ಹೇಳಿದ್ದರು.

35
ಮದುವೆ ಮಾಡಲ್ಲ

ಅಂದಹಾಗೆ, ಇವರ ವಯಸ್ಸೀಗ 22 ವರ್ಷ ವಯಸ್ಸು. 2004ರ ಮೇ 20ರಂದು ಜನಿಸಿರುವ ಸಾನ್ವಿ ಅವರ ಮದುವೆಯ ಬಗ್ಗೆ ಅವರಿಗೆ ಕೇಳಿದ ಪ್ರಶ್ನೆಗೆ ಅವರ ಅಮ್ಮ ಪ್ರಿಯಾ ಸುದೀಪ್‌ ತಮಾಷೆಯ ಉತ್ತರ ಕೊಟ್ಟಿದ್ದಾರೆ. ನಾವು ಅವಳ ಮದುವೆ ಮಾಡಲ್ಲ, ಯಾರನ್ನಾದರೂ ಮನೆಗೆ ಕರೆಸುತ್ತೇವೆ ಅಷ್ಟೇ ಎಂದು ತಮಾಷೆ ಮಾಡಿದ್ದಾರೆ. ಅವಳೆಂದರೆ ನಮಗೆ ತುಂಬಾ ಇಷ್ಟ. ಅವಳು ನಮ್ಮ ಜೀವನದಲ್ಲಿ ಬಹಳ ದೊಡ್ಡ ರೋಲ್‌ ಮಾಡೆಲ್‌ ಎಂದಿರೋ ಪ್ರಿಯಾ ಅವರು, ಮಗಳು ಯಾರನ್ನಾದರೂ ಇಷ್ಟಪಟ್ಟರೆ ನಾವು ಮದುವೆ ಮಾಡುತ್ತೇವೆ. ಅವಳು ಚೆನ್ನಾಗಿ ಇರಬೇಕು ಅಷ್ಟೇ ಎಂದಿದ್ದಾರೆ.

45
ಹುಡುಗನ ಬಗ್ಗೆ ಫ್ಯಾನ್‌ ಪ್ರಶ್ನೆ

ಅಷ್ಟಕ್ಕೂ ಈ ಹಿಂದೆ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ ಸಾನ್ವಿ ಅವರಿಗೆ ನಿಮಗೆ ಎಂಥ ಹುಡುಗ ಬೇಕು ಎಂದು ಪ್ರಶ್ನೆ ಕೇಳಲಾಗಿತ್ತು. ವಾಟ್ಸ್‌ ಬೀನ್‌ ಅಪ್‌ ಎಂದು ಸಾನ್ವಿ ಸುದೀಪ್‌ ಪ್ರಶ್ನೋತ್ತರ ಸೆಷನ್‌ ನಡೆಸಿದ್ದು, ಆಗ ಫ್ಯಾನ್‌ ಒಬ್ಬರು, ಒಂದು ದಿನದ ಮಟ್ಟಿಗೆ ನೀವು ಯಾವುದಾದರೂ ಕಾಲ್ಪನಿಕ ಪಾತ್ರವಾಗಿ ಬದಲಾಗಬೇಕು ಎಂದು ಬಯಸಿದರೆ, ಯಾವ ಪಾತ್ರದಲ್ಲಿ ಬದಲಾಗ್ತೀರಿ ಎಂದು ಪ್ರಶ್ನೆ ಮಾಡಿದ್ದರು.

55
ಎಂಥ ಗಂಡ ಬೇಕು

ಆಗ, ಸಾನ್ವಿ ಸುದೀಪ್‌, ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ ಮಾಡಿರುವ ಶ್ರೀವಲ್ಲಿ ಪಾತ್ರದಲ್ಲಿರಲು ಬಯಸುತ್ತೇನೆ ಎಂದು ಹೇಳಿರುವುದು ಮಾತ್ರವಲ್ಲ ಅದಕ್ಕೆ ಕಾರಣವನ್ನೂ ಅವರು ನೀಡಿದ್ದರು. ಶ್ರೀವಲ್ಲಿ ಆಗಲು ಬಯಸುವ ಕಾರಣ ಪುಷ್ಪರಾಜ್‌ ಎಂದು ಹೇಳಿದ್ದರು. ಪುಷ್ಪನಂತಹ ಗಂಡ ಸಿಕ್ಕಿದರೆ ಇದಕ್ಕಿಂತ ಹೆಚ್ಚು ಇನ್ನು ಏನು ಕೇಳುವುದು ಎಂದು ತಮಾಷೆ ಮಾಡಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories