ಏನೋ ಕಾರಣಕ್ಕೆ ಹೆಂಡ್ತಿ ನಿಮ್ಮ ಮೇಲೆ ಕೋಪಮಾಡ್ಕೊಂಡಿದ್ದಾರೆ (angry wife) ಅಂತಿಟ್ಟುಕೊಳ್ಳೋಣ. ಈವಾಗ ಏನೇ ಮಾತನಾಡಿದ್ರೂ ಆಕೆ ನಿಮ್ಮ ಬಳಿ ಮಾತನಾಡ್ತಿಲ್ಲ. ಆಕೆಯನ್ನು ಸಮಾಧಾನ ಮಾಡೋದು ಹೇಗೆ? ಅನ್ನೋದು ನಿಮಗೂ ಹೊಳಿಯುತ್ತಲೇ ಇಲ್ಲ. ಇಂತ ಟೈಮಲ್ಲಿ ನೀವು ಏನ್ ಮಾಡ್ಬೇಕು ಅನ್ನೋದನ್ನು ಹೇಳ್ತೀವಿ ಕೇಳಿ…
ಹೆಂಡತಿಗೆ ಯಾವುದಾದರೂ ವಿಷಯದ ಬಗ್ಗೆ ಕೋಪವಿದ್ದರೆ, ಅವಳನ್ನು ಮನವೊಲಿಸಲು ನೀವು ಉಡುಗೊರೆಯನ್ನು (gift her) ನೀಡಿ. ಯಾಕಂದ್ರೆ ಹೆಚ್ಚಾಗಿ ಎಲ್ಲಾ ಹುಡುಗಿಯರಿಗೆ ಗಿಫ್ಟ್ ಇಷ್ಟ. ಹಾಗಾಗಿ ಗಿಫ್ಟ್ ನೀಡೋ ಮೂಲಕ ನೀವು ಅವರ ಮನ ಒಲಿಸಬಹುದು.
ಸರ್‌ಪ್ರೈಸ್ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ… ಹೆಂಡತಿ ಕೋಪವನ್ನು ಕಡಿಮೆ ಮಾಡಲು ಅವರಿಗೆ ಸರ್‌ಪ್ರೈಸ್ (surprise her) ನೀಡಿ. ಅವರಿಗಿಷ್ಟವಾದುದನ್ನು ನೀಡಿ. ಅವರಿಗೋಸ್ಕರ ನೀವೇ ತಿಂಡಿ ಮಾಡಿ ಸರ್ವ್ ಮಾಡಿ, ಅಥವಾ ಡಿನ್ನರ್ ಡೇಟ್ ಕರೆದುಕೊಂಡು ಹೋಗಿ.
ಇನ್ನು ಹೆಂಡತಿಯ ಕೋಪವನ್ನು ಕಡಿಮೆ ಮಾಡೋದಕ್ಕೆ, ನೀವು ಅವರನ್ನು ಶಾಪಿಂಗ್‌ಗೆ (Shopping) ಕರೆದೊಯ್ಯಬಹುದು. ಅವರಿಗೆ ಬೇಕಾದುದನ್ನೆಲ್ಲಾ ಶಾಪಿಂಗ್ ಮಾಡೋದರಿಂದ ಖಂಡಿತವಾಗಿ ಅವರ ಕೋಪ ಕಡಿಮೆಯಾಗುತ್ತೆ.
ಗುಲಾಬಿ ಹೂವು (Gift her rose) ಕೋಪಗೊಂಡ ಹೆಂಡತಿ ಮುಖದಲ್ಲಿ ನಗುವನ್ನು ತರಬಹುದು. ಹಾಗಾಗಿ ಒಂದು ಅಥವಾ ಒಂದು ಬೊಕ್ಕೆಯನ್ನೇ ನಿಮ್ಮ ಹೆಂಡ್ತಿಗೆ ನೀಡಿ, ಅದರಲ್ಲಿ ಒಂದು ಸಾರಿ ಎನ್ನುವ ನೋಟ್ ಕೂಡ ಬರೆದು ಇಡಿ.
ನಿಮ್ಮ ಕೆಲವು ಮಾತುಗಳು ಅಥವಾ ತಪ್ಪುಗಳಿಂದಾ ನಿಮ್ಮ ಹೆಂಡತಿ ಕೋಪಗೊಂಡರೆ, ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ನಿಮ್ಮಿಂದಲೇ ತಪ್ಪಾದದು, ಅದಕ್ಕಾಗಿ ಕ್ಷಮಿಸಿ ಎಂದು ಮನಸ್ಸು ಬಿಚ್ಚಿ ಕೇಳಿ. ಇದರಿಂದ ಕೋಪ ಕಡಿಮೆಯಾಗುತ್ತೆ.
ಇನ್ನು ರೊಮ್ಯಾಂಟಿಕ್ ವಿಧಾನದಲ್ಲೂ ನಿಮ್ಮ ಪತ್ನಿಯ ಕೋಪವನ್ನು ಕಡಿಮೆ ಮಾಡಬಹುದು. ಪತ್ನಿಗೆ ಹೂಮುತ್ತು (kiss her) ನೀಡುವ ಮೂಲಕ ಆಕೆಗೆ ಸಾರಿ ಹೇಳಿ. ಇದರಿಂದ ಆಕೆಯ ಕೋಪವೂ ಕಡಿಮೆಯಾಗುತ್ತೆ.