Published : Apr 30, 2024, 03:43 PM ISTUpdated : Apr 30, 2024, 03:46 PM IST
ಅವನಿಗೆ ಈಗಾಗಲೇ ಮದ್ವೆಯಾಗಿದೆಯೋ ಮಕ್ಕಳಿದ್ದಾರೋ ಅವನ ವಯಸ್ಸು ಎಷ್ಟಿರಬಹುದು ಇದ್ಯಾವುದರ ಬಗ್ಗೆಯೂ ನನಗೆ ತಿಳಿದಿರಲಿಲ್ಲ, ಆತ ನನ್ನ ಮುಂದೆ ಉಪಹಾರ ಸೇವಿಸುತ್ತಾ ಕುಳಿತಿದ್ದರೆ ನಾನು ಆ ಮನುಷ್ಯನನ್ನೇ ನೋಡುತ್ತಾ ಕುಳಿತಿದ್ದೆ ಎಂದು ಸಂದರ್ಶನವೊಂದರಲ್ಲಿ ಪರಿಣಿತಿ ಚೋಪ್ರಾ ಹೇಳಿದ್ದಾರೆ.
ನಟಿ ಪರಿಣಿತಿ ಚೋಪ್ರಾ ಅವರು ಸದ್ಯಕ್ಕೆ ತಮ್ಮ ಅಮರ್ ಸಿಂಗ್ ಚಮ್ಕಿಲಾ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. 2023ರಲ್ಲಿ ಇವರು ರಾಜಕಾರಣಿ ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾದಾಗ ದೊಡ್ಡ ಸುದ್ದಿಯಾಗಿತ್ತು.
210
ಹೀಗಿರುವಾಗ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮಿಬ್ಬರ ನಡುವಿನ ಲವ್ ಸ್ಟೋರಿಯನ್ನು ಹೇಳುವ ವೇಳೆ ಶಾಕಿಂಗ್ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ರಾಜ್ ಶಮಾನಿ ಜೊತೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಪರಿಣಿತಿ ತಾವು ರಾಘವ್ ಚಡ್ಡಾ ಅವರನ್ನು ಭೇಟಿಯಾಗಿದ್ದು, ಹಾಗೂ ತಮ್ಮಿಬ್ಬರ ನಡುವಣ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
310
ನಾವಿಬ್ಬರು ಲಂಡನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿ ಭೇಟಿಯಾದೆವು, ಸಾಮಾನ್ಯವಾಗಿ ನಾನು ಜಸ್ಟ್ ಹಾಯ್ ಹೇಳಿ ಮುಂದುವರಿಯುತ್ತೇನೆ. ಆದರೆ ರಾಘವ್ ವಿಚಾರದಲ್ಲಿ ಹಾಗಾಗಲಿಲ್ಲ, ನಾನು ಅವರಲ್ಲಿ ಉಪಾಹಾರಕ್ಕಾಗಿ ಭೇಟಿಯಾಗೋಣ ಎಂದು ಹೇಳಿದೆ.
410
ಜೊತೆಗೆ ನಮ್ಮ ಗ್ಯಾಂಗ್ ಕೂಡ ಇತ್ತು, ನಮ್ಮ ಈ ಟೀಮ್‌ನಲ್ಲಿ 8 ರಿಂದ 10 ಜನರಿದ್ದರು. ಹಾಗೂ ಮರುದಿನ ನಾವು ಭೇಟಿಯಾದೆವು. ನನಗೆ ಆತನ ಬಗ್ಗೆ ಯಾವುದೇ ಐಡಿಯಾಗಳಿರಲಿಲ್ಲ, ಆತ ಯಾರು ಏನು ಮಾಡುತ್ತಿದ್ದಾನೆ ಎಂಬ ಬಗ್ಗೆ ನನಗೆ ತಿಳಿದಿರಲಿಲ್ಲ,
510
ಬ್ರೇಕ್‌ಫಾಸ್ಟ್ ನಂತರ ನಾನು ಆತನನ್ನು ಗಮನಿಸಿದೆ. ಹಾಗೂ ಆತನ ಬಗ್ಗೆ ಸ್ವಲ್ಪ ಸಮಯದಲ್ಲೇ ಎಲ್ಲಾ ತಿಳಿದುಕೊಂಡೆ ಹಾಗೂ ನಾವು ಒಂದು ವಾರದಲ್ಲೇ ಒಂದೇ ದಿನದಲ್ಲೇ ಮುಂದೆ ಪರಸ್ಪರ ಮದುವೆಯಾಗುತ್ತೇವೆ ಎಂಬುದರ ಅರಿವು ನಮಗೆ ಆಗಿತ್ತು.
610
ಭೇಟಿಯಾದ ಐದೇ ನಿಮಿಷದಲ್ಲಿ ನಾನು ಈ ವ್ಯಕ್ತಿಯನ್ನು ಮದುವೆಯಾಗಲಿದ್ದೇನೆ ಎಂಬುದು ನನಗೆ ತಿಳಿದಿತ್ತು. ಅವನಿಗೆ ಈಗಾಗಲೇ ಮದ್ವೆಯಾಗಿದೆಯೋ ಮಕ್ಕಳಿದ್ದಾರೋ ಅವನ ವಯಸ್ಸು ಎಷ್ಟಿರಬಹುದು ಇದ್ಯಾವುದರ ಬಗ್ಗೆಯೂ ನನಗೆ ತಿಳಿದಿರಲಿಲ್ಲ,
710
ಆತ ನನ್ನ ಮುಂದೆ ಉಪಹಾರ ಸೇವಿಸುತ್ತಾ ಕುಳಿತಿದ್ದರೆ ನಾನು ಆ ಮನುಷ್ಯನನ್ನೇ ನೋಡುತ್ತಾ ಕುಳಿತಿದ್ದೆ. ನಾನು ಇವನನ್ನೇ ಮದುವೆಯಾಗುತ್ತೇನೆ ಎಂದು ಯೋಚಿಸುತ್ತಿದೆ. ಬಹುಶಃ ಅದು ನನ್ನೊಳಗಿನ ದೇವರ ಧ್ವನಿಯಾಗಿತ್ತು ಎಂದು ಪರಿಣಿತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
810
ಕಳೆದ ವರ್ಷ ಸೆಪ್ಟೆಂಬರ್ 24 ರಂದು ಪರಿಣಿತಿ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಮದ್ವೆಯಾಗಿದ್ದರು. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಇವರಿಬ್ಬರ ವಿವಾಹ ಬಹಳ ಅದ್ದೂರಿಯಾಗಿ ನಡೆದಿತ್ತು.
910
ಪರಿಣಿತಿ ಅವರ ಚಿಕ್ಕಮ್ಮ ಮತ್ತು ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆದಿತ್ಯ ಠಾಕ್ರೆ, ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್, ಮನೀಶ್ ಮಲ್ಹೋತ್ರಾ, ಹರ್ಭಜನ್ ಸಿಂಗ್ ಮತ್ತು ಸಾನಿಯಾ ಮಿರ್ಜಾ ಕೂಡ ಈ ಮದುವೆಯಲ್ಲಿ ಭಾಗವಹಿಸಿದ್ದರು.
1010
ಪ್ರಿಯಾಂಕಾ ಚೋಪ್ರಾ ಸೋದರಿಯಾಗಿರುವ ಪರಿಣಿತಿ ಚೋಪ್ರಾ ಇತ್ತೀಚೆಗೆ ಇಮ್ತಿಯಾಜ್ ಅಲಿ ಅವರ ಅಮರ್ ಸಿಂಗ್ ಚಮ್ಕಿಲಾದಲ್ಲಿ ದಿಲ್ಜಿತ್ ದೋಸಾಂಜ್ ಅವರ ಪತ್ನಿ ಅಮರಜೋತ್ ಕೌರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.