ಕಾರ್ತಿಕ್​ ಸೀರೆ ಕೊಡಿಸಿದ್ರಾ ಎಂದಾಗ ನಮ್ರತಾ ಗೌಡ ಹೀಗೆ ಹೇಳೋದಾ? ಪ್ರಶ್ನೆ ಕೇಳಿದೋರೇ ಕಕ್ಕಾಬಿಕ್ಕಿ

Published : Jun 22, 2026, 06:43 PM IST

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರ ಮದುವೆಯ ವದಂತಿಗಳು ಹರಿದಾಡುತ್ತಲೇ ಇವೆ. ಇತ್ತೀಚೆಗೆ ಸೀರೆ ಅಂಗಡಿಯಲ್ಲಿ 'ಕಾರ್ತಿಕ್ ಸೀರೆ ಕೊಡಿಸಿದ್ರಾ?' ಎಂಬ ಪ್ರಶ್ನೆಗೆ ನಮ್ರತಾ ಚತುರ ಉತ್ತರ ನೀಡಿ, ತಮ್ಮ ಸಂಬಂಧದ ಕುರಿತ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

PREV
16
ನಮ್ರತಾ- ಕಾರ್ತಿಕ್​ ಮದ್ವೆ ಗುಲ್ಲು!

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ನಡುವಿನ ಸಂಬಂಧದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ನಟಿ ನಮ್ರತಾ ಗೌಡ ಅವರು ಆಗಾಗ ಟ್ರಿಪ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ವಿದೇಶಕ್ಕೆ ಹೋಗಿದ್ದರು. ಅಲ್ಲಿ ಅವರು ಭೇಟಿ ನೀಡಿರುವ ಸ್ಥಳಗಳಲ್ಲಿ ಫೋಟೋ, ವಿಡಿಯೋ ಮಾಡಿಕೊಂಡಿದ್ದರು. ಆ ವೇಳೆ ಅವರು ಒಬ್ಬರ ಕೈ ಹಿಡಿದುಕೊಂಡು ತಿರುಗಿದ್ದಾರೆ. ಆ ಕೈಗೆ ಹಾಕಿಕೊಂಡ ಬ್ಲ್ಯಾಕ್‌ ಬಾಂಡ್‌ ಹಾಗೂ ಕಾರ್ತಿಕ್‌ ಮಹೇಶ್‌ ಹಾಕಿಕೊಂಡ ಬ್ಯಾಂಡ್‌ ಎರಡೂ ಸೇಮ್‌ ಇದೆ ಎನ್ನಲಾಗಿತ್ತು.

26
ಏನಂದಿತ್ತು ಜೋಡಿ?

ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ಕಾರ್ತಿಕ್‌ ಮಹೇಶ್‌ ಅವರು, “ಇಲ್ಲ, ಏನಾದರೂ ಇದ್ದಾಗ ನಾವು ಹೇಳುತ್ತೀವಿ. ನಾನು ಕೈಗೆ ಬ್ಯಾಂಡ್‌ ಹಾಕಿಕೊಂಡಿಲ್ಲ. ಈ ರೀತಿ ಜೋಡಿ ಮಾಡಿದ್ದನ್ನು ನಾನು, ನಮ್ರತಾ ಚರ್ಚೆ ಮಾಡಿಕೊಂಡು ನಕ್ಕಿದ್ದೇವೆ. ಅಭಿಮಾನಿಗಳು ಪೋಸ್ಟ್‌ ಹಾಕಿದಾಗ ಖುಷಿ ಆಗುತ್ತದೆ, ಈ ರೀತಿ ಬೇರೆಯವರ ಜೊತೆ ಕೂಡ ಫೋಟೋ ಹಾಕಿದ್ದಾರೆ. ಏನಾದರೂ ಇದ್ದರೆ ತಿಳಿಸುತ್ತೇವೆ” ಎಂದು ಹೇಳಿದ್ದರು.ಆದರೂ ಇವರಿಬ್ಬರ ನಡುವಿನ ಸಂಬಂಧ (Bigg Boss Karthik Mahesh and Namratha Gowda marriage) ಮದುವೆಯವರೆಗೂ ಹೋಗಲಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ.

36
ನುಣುಚಿಕೊಂಡಿದ್ದ ನಟಿ

ಕೆಲವು ದಿನಗಳ ಹಿಂದೆ, ನಟಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ, ನುಣುಚಿಕೊಂಡಿದ್ದ ಅವರು, ನಿಮ್ಮ ಮತ್ತು ಕಾರ್ತಿಕ್​ ಮಹೇಶ್​ ನಡುವೆ ಗಾಸಿಪ್​ ಕೂಡ ಇದೆ, ಅದರ ಬಗ್ಗೆ ಎಂದು ಕೇಳುತ್ತಲೇ ಓಕೆ ಬೈ ಎಂದು ಅಲ್ಲಿಂದ ಹೋಗೇ ಬಿಟ್ಟರು. ಇದು ನಿಜನೂ ಅನ್ನದೇ, ಸುಳ್ಳು ಎಂದೂ ಹೇಳದ ನಟಿ, ನಾನು ಮದುವೆಯಾದರೆ ಖಂಡಿತ ಎಲ್ಲರನ್ನೂ ಕರೆಯುತ್ತೇನೆ. ಎಲ್ಲರಿಗೂ ಹೇಳುತ್ತೇನೆ ಎಂದಿದ್ದರು.

46
ಸೀರೆ ಕೊಡಿಸಿದ್ರಾ?

ಆದರೂ ಏನೇ ಇದ್ದರೂ ಈ ಜೋಡಿಯ ಬಗ್ಗೆ ಮಾತುಕತೆಯಂತೂ ನಿಲ್ಲುವುದೇ ಇಲ್ಲ. ಇದೀಗ ನಮ್ರತಾ ಗೌಡ ಅವರು ಸೀರೆ ಮಳಿಗೆ ಒಂದಕ್ಕೆ ಭೇಟಿ ಕೊಟ್ಟಿದ್ದರು. ಆ ಸಮಯದಲ್ಲಿ ಅಲ್ಲಿ ಹಾಜರಿದ್ದ ಮಾಧ್ಯಮದವರು ನಿಮಗೆ ಕಾರ್ತಿಕ್​ ಅವರು ಸೀರೆ ಕೊಡಿಸಿದ್ರಾ ಎಂದು ಪ್ರಶ್ನಿಸಿದ್ದಾರೆ.

56
ನನಗ್ಯಾಕೆ ಕೊಡಿಸ್ತಾರೆ

ಇಂಥ ಪ್ರಶ್ನೆಗಳು ಹೋದಲೆಲ್ಲಾ ಎದುರಾಗುತ್ತದೆ ಎಂದು ನಮ್ರತಾ ಗೌಡ ಅವರಿಗೆ ಗೊತ್ತಿದ್ದದ್ದೇ. ಅದಕ್ಕಾಗಿ ಅವರು ಯಾವುದೇ ರೀತಿ ಟೆನ್ಷನ್​ ಮಾಡಿಕೊಳ್ಳದೇ, ಕೋಪವೂ ಮಾಡಿಕೊಳ್ಳದೇ ನಗುಮೊಗದಿಂದಲೇ ಅವರು ಮದುವೆಯಾಗುವ ಹುಡುಗಿಗೆ ಕೊಡ್ತಾರೆ, ನನಗ್ಯಾಕೆ ಕೊಡಿಸ್ತಾರೆ ಎಂದು ಪ್ರಶ್ನೆ ಕೇಳಿದವರನ್ನೇ ಕಕ್ಕಾಬಿಕ್ಕಿ ಮಾಡಿದರು.

66
ಸಂಗೀತಾ- ಕಾರ್ತಿಕ್​ ಮನಸ್ತಾಪ

ಈ ಹಿಂದೆ ಸಂಗೀತಾ ಶೃಂಗೇರಿ ಅವರು, ಕಾರ್ತಿಕ್​ ಮತ್ತು ನಮೃತಾ ಅವರ ಜೋಡಿ ತುಂಬಾ ಚೆನ್ನಾಗಿದೆ. ನನಗಂತೂ ತುಂಬಾ ಖುಷಿಯಾಗುತ್ತದೆ ಎನ್ನುವ ಮೂಲಕ ಸಂಗೀತಾ ಶೃಂಗೇರಿ ಅವರ ಮದುವೆಗೆ ಗ್ರೀನ್ ಸಿಗ್ನಲ್​ ಕೊಟ್ಟಿದ್ದರು. ಅಷ್ಟಕ್ಕೂ, ಬಿಗ್ ಬಾಸ್ ಕನ್ನಡ ಸೀಸನ್ 10ನ ಸ್ಪರ್ಧಿಗಳಾದ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್, ಷೋನಲ್ಲಿ ಸಿಕ್ಕಾಪಟ್ಟೆ ಕ್ಲೋಸ್​ ಆಗಿದ್ದರು. ಆದರೆ ಆ ಬಳಿಕ ಅವರ ಮಧ್ಯೆ ಮನಸ್ತಾಪ ಆಗಿತ್ತು. ವರ್ಷಗಳ ನಂತರ ಮತ್ತೆ ಒಟ್ಟಾಗಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories