Anant Ambani-Radhika Merchant, ಸೆಕೆಂಡ್‌ ಗ್ರ್ಯಾಂಡ್ ಪ್ರಿ-ವೆಡ್ಡಿಂಗ್‌ಗೆ ಅಂಬಾನಿ ಫ್ಯಾಮಿಲಿ ಭರ್ಜರಿ ತಯಾರಿ!

Published : Apr 28, 2024, 10:26 AM ISTUpdated : Apr 28, 2024, 01:31 PM IST

ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.  ತಮ್ಮ ಮನೆಯಲ್ಲಿ ನಡೆಯುವ ಪಾರ್ಟಿ, ಸಮಾರಂಭಗಳಿಗಾಗಿ ಕೋಟಿ ಕೋಟಿ ವ್ಯಯಿಸುತ್ತಾರೆ.  ಮಾರ್ಚ್ 1ರಿಂದ 3ರ ವರೆಗೆ ಗುಜರಾತ್‌ನ ಜಾಮ್ನಾ ನಗರದಲ್ಲಿ ಪ್ರಿ ವೆಡ್ಡಿಂಗ್ ಇವೆಂಟ್‌ ಆಯೋಜಿಸಿದ್ದ ಅಂಬಾನಿ ಫ್ಯಾಮಿಲಿ ಈಗ ಮತ್ತೊಂದು ಪ್ರಿ ವೆಡ್ಡಿಂಗ್ ಇವೆಂಟ್ ಆಯೋಜಿಸಲು ಸಜ್ಜಾಗಿದೆ.

PREV
110
Anant Ambani-Radhika Merchant, ಸೆಕೆಂಡ್‌ ಗ್ರ್ಯಾಂಡ್ ಪ್ರಿ-ವೆಡ್ಡಿಂಗ್‌ಗೆ ಅಂಬಾನಿ ಫ್ಯಾಮಿಲಿ ಭರ್ಜರಿ ತಯಾರಿ!

ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ತಮ್ಮ ಮನೆಯಲ್ಲಿ ನಡೆಯುವ ಪಾರ್ಟಿ, ಸಮಾರಂಭಗಳಿಗಾಗಿ ಕೋಟಿ ಕೋಟಿ ವ್ಯಯಿಸುತ್ತಾರೆ.  ಸದ್ಯ ಅಂಬಾನಿ ಕುಟುಂಬ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹಕ್ಕೆ ತಯಾರಿ ನಡೆಸುತ್ತಿದೆ.

210

ಮಾರ್ಚ್ 1ರಿಂದ 3ರ ವರೆಗೆ ಗುಜರಾತ್‌ನ ಜಾಮ್ನಾ ನಗರದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಅತ್ಯಂತ ಅದ್ಧೂರಿಯಾಗಿ ನಡೆದಿತ್ತು. ಬರೋಬ್ಬರಿ  1259 ಕೋಟಿ ರೂ. ವ್ಯಯಿಸಿ ಮಾಡಿದ್ದ ಈ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ಸಹ ಭಾಗಿಯಾಗಿದ್ದರು.

310

ಇತ್ತೀಚಿನ ವರದಿಗಳ ಪ್ರಕಾರ, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಮೇ 28 ಮತ್ತು 30ರ ನಡುವೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪೂರ್ವ ವಿವಾಹ ಸಮಾರಂಭವನ್ನು ಆಯೋಜಿಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಕಾರ್ಯಕ್ರಮದಲ್ಲಿ ಕೇವಲ ಆಪ್ತ ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಲಿದ್ದಾರೆ.
 

410

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಲಂಡನ್‌ನಲ್ಲಿ ನಡೆಯುತ್ತಿದೆ ಎಂಬ ಸುದ್ದಿ ಈಗಾಗಲೇ ಕೇಳಿ ಬರ್ತಿದೆ. ಆದ್ರೆ ಇದು ಸುಳ್ಳು ಎಂದು ವರದಿಗಳು ಹೇಳುತ್ತವೆ. ಬಿಲಿಯನೇರ್ ಕುಟುಂಬದ ಜೋಡಿ ಮುಂಬೈನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗ್ತಿದೆ..

510

ಅಂಬಾನಿ ಕುಟುಂಬವು ಆಯೋಜಿಸಿರುವ ಎರಡನೇ ವಿವಾಹ ಪೂರ್ವ ಸಂಭ್ರಮಾಚರಣೆಯಲ್ಲಿ ಅವರ ಕುಟುಂಬದವರು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಪಾಲ್ಗೊಳ್ಳುತ್ತಾರೆ.

610

ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರೊಂದಿಗೆ ಆತ್ಮೀಯ ಸ್ನೇಹಿತರಾಗಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರೊಂದಿಗೆ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

710

ಫ್ರಾನ್ಸ್‌ನ ದಕ್ಷಿಣವು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿನ ಸುಂದರವಾದ ಕರಾವಳಿ, ನೀಲಿ ಸಮುದ್ರ ಮತ್ತು ಆಕರ್ಷಕ ನಗರಗಳಿಗೆ ಹೆಸರುವಾಸಿಯಾಗಿದೆ. ಒಬ್ಬ ವ್ಯಕ್ತಿಯು ಇಲ್ಲಿ ಸಾಮಾನ್ಯ ಕ್ರೂಸ್ ಹಡಗಿನಲ್ಲಿ ಪಾರ್ಟಿಯನ್ನು ಆಯೋಜಿಸಲು ಬಯಸಿದರೆ, ಅವರು 500ರಿಂದ 1000 ವರೆಗೆ ಡಾಲರ್ ಪಾವತಿಸಬೇಕಾಗುತ್ತದೆ.

810

ಪ್ರಸಿದ್ಧ ಕ್ಯಾನೆಸ್ ನಗರವು ದಕ್ಷಿಣ ಫ್ರಾನ್ಸ್‌ನಲ್ಲಿದೆ, ಅಲ್ಲಿ ಪ್ರತಿ ವರ್ಷ ಕ್ಯಾನೆಸ್ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತದೆ. ಇಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವಡ್ಡಿಂಗ್ ಇವೆಂಟ್ ಆಯೋಜಿಸಲಿದ್ದಾರೆ ಅನ್ನೋ ಮಾತು ಸಹ ಕೇಳಿ ಬರ್ತಿದೆ.

910

ಎರಡು ದಿನಗಳ ಹಿಂದೆ ವರದಿಯಾದಂತೆ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭ ಲಂಡನ್‌ನ ಸ್ಟೋಕ್‌ಪಾರ್ಕ್‌ನಲ್ಲಿ ನಡೆಯಲಿದೆ ಎನ್ನಲಾಗಿತ್ತು.

1010

ಆದರೆ, ಮುಂಬೈನ ಪ್ರಸಿದ್ಧ ಪಾಪರಾಜಿ ಇನ್ಸ್‌ಟಾಗ್ರಾಮ್‌ ಖಾತೆ ಅಂಬಾನಿ ಕುಟುಂಬದ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಮದುವೆ ಸಮಾರಂಭ ಜುಲೈ 12 ರಂದು ಮುಂಬೈನಲ್ಲಿಯೇ ನಡೆಯಲಿದೆ ಎಂದು ತಿಳಿಸಿದೆ. ಆದರೆ, ಅಂಬಾನಿ ಕುಟುಂಬ ಮಾತ್ರ ಅಧಿಕೃತವಾಗಿ ಈ ಸುದ್ದಿ ತಿಳಿಸಿಲ್ಲ.
 

Read more Photos on
click me!

Recommended Stories