ಪ್ರಧಾನಿ ಮೋದಿ ಮಾತಿನಿಂದ ನಿರ್ಧಾರ ಬದಲಿಸಿದ್ರಾ ಅಂಬಾನಿ? ಜಿಯೋ ಸೆಂಟರ್‌ನಲ್ಲಿ ಅನಂತ್ ಮದುವೆ!

First Published | Apr 27, 2024, 8:20 PM IST

ಉದ್ಯಮಿ ಮುಕೇಶ್ ಅಂಬಾನಿ ಮದುವೆ ಲಂಡನ್‌ನಲ್ಲಿ ಆಯೋಜಿಸಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಪ್ರಧಾನಿ ಮೋದಿ ಹೇಳಿದಂತೆ ವಿದೇಶಗಳ ಬದಲು ಭಾರತದಲ್ಲೇ ಮದುವೆ ಆಯೋಜಿಸಲು ನಿರ್ಧರಿಸಿದ್ರಾ? ಹೌದು ಎನ್ನುತ್ತಿದೆ ಮೂಲಗಳು.

ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಲಂಡನ್, ಅಬುಧಾಬಿ ಸೇರಿದಂತೆ ಕೆಲವೆಡೆ ಅಂಬಾನಿ ಮದುವೆ ನಡೆಯಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ಮದುವೆ ಭಾರತದಲ್ಲೇ ನಡೆಯಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಅನಂತ್ ಅಂಬಾನಿ ಮದುವೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಈಗಾಗಲೇ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಮದುವೆ ತಯಾರಿಗಳು ನಡೆಯುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
 

Tap to resize

ಲಂಡನ್‌ನಲ್ಲಿ ಮದುವೆಗೆ ತಯಾರಿ ಮಾಡಿದ್ದ ಅಂಬಾನಿ ಕುಟುಂಬ, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶದಲ್ಲಿ ಮದುವೆ ಆಯೋಜಿಸುವ ಬದಲು ಭಾರತದಲ್ಲೇ ಆಯೋಜಿಸಿ ಅನ್ನೋ ಮನವಿಯಂತೆ ಮದುವೆ ಸ್ಥಳ ಬದಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
 

ಜುಲೈ 12ರಂದು ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ನೆರವೇರಲಿದೆ. ಇದೀಗ ನವಿ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕೇಂದ್ರದಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮ ನಡೆಯಲಿದೆ.
 

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಗುಜರಾತ್‌ನ ಜಾಮ್ನಾನಗರದಲ್ಲಿ ಆಯೋಜಿಸಲಾಗಿತ್ತು. ಫೇಸ್‌ಬುಕ್ ಸಹಸಂಸ್ಥಾಪಕ, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಸೇರಿದಂತೆ ಹಲವು ದಿಗ್ಗಜರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಮುಕೇಶ್ ಅಂಬಾನಿ ಬರೋಬ್ಬರಿ 1200 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಬಹುತೇಕ ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಕುಣಿದಿದ್ದರು.
 

ಇದೀಗ ಮದುವೆ ಕಾರ್ಯಕ್ರಮಕ್ಕೆ ದುಪ್ಪಟ್ಟ ಹಣ ಖರ್ಚಾಗಲಿದೆ ಅನ್ನೋ ಮಾಹಿತಿಗಳು ಹೊರಬೀದಿದ್ದಿದೆ. ದೇಶದಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕಮದಲ್ಲಿ ಅನಂತ್ ಮದುವೆ ಅಗ್ರಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.
 

ದೇಶ ವಿದೇಶಗಳಿಂದ ಗಣ್ಯರು ಅನಂತ್ ಮದುವೆಗೆ ಆಗಮಿಸಲಿದ್ದಾರೆ. ಈಗಾಗಲೇ ಭದ್ರತೆ ಸೇರಿದಂತೆ ಹಲವು ತಯಾರಿಗಳು ನಡೆಯುತ್ತಿದೆ. ಅನಂತ್ ಮದುವೆ ಭಾರಿ ಸಂಚಲನ ಸೃಷ್ಟಿಸಲಿದೆ 
 

Latest Videos

click me!