ಅನಂತ್ ಅಂಬಾನಿ-ರಾಧಿಕಾ ಗ್ರ್ಯಾಂಡ್ ವೆಡ್ಡಿಂಗ್‌; ಅತಿಥಿಗಳಿಗೆ ನೀತಾ ಅಂಬಾನಿ ಕೊಡ್ತಿರೋ ಸ್ಪೆಷಲ್ ಗಿಫ್ಟ್ ಏನು?

Published : Feb 16, 2024, 09:29 AM ISTUpdated : Feb 16, 2024, 09:44 AM IST

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೀತಿದೆ. ಮದುವೆಗೆ ಆಗಮಿಸೋ ಅತಿಥಿಗಳಿಗೆ ವಿಶೇಷ ಉಡುಗೊರೆ ನೀಡಲು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪ್ಲಾನ್ ಮಾಡಿದ್ದಾರೆ. ಏನು ಆ ಸ್ಪೆಷಲ್ ಗಿಫ್ಟ್‌?

PREV
111
ಅನಂತ್ ಅಂಬಾನಿ-ರಾಧಿಕಾ ಗ್ರ್ಯಾಂಡ್ ವೆಡ್ಡಿಂಗ್‌; ಅತಿಥಿಗಳಿಗೆ ನೀತಾ ಅಂಬಾನಿ ಕೊಡ್ತಿರೋ ಸ್ಪೆಷಲ್ ಗಿಫ್ಟ್ ಏನು?

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಮುಂಬರುವ ತಿಂಗಳಲ್ಲಿ ನಡೆಯಲಿದೆ. ಗ್ರ್ಯಾಂಡ್‌ ವೆಡ್ಡಿಂಗ್‌ಗೆ ಅಂಬಾನಿ ಕುಟುಂಬದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.

211

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮೂವರು ಮಕ್ಕಳಲ್ಲಿ ಹಿರಿ ಮಗ ಆಕಾಶ್ ಹಾಗೂ ಪುತ್ರಿ ಇಶಾ ಮದ್ವೆ ಈಗಾಗಲೇ ನಡೆದಿರುವುದರಿಂದ ಈ ಮನೆಯಲ್ಲಿ ನಡೆಯುವ ಕೊನೆ ಮದ್ವೆ ಇದಾಗಿದೆ. ಹೀಗಾಗಿ ಹಿಂದೆಂದಿಗಿಂತಲೂ ಬಹಳ ಅದ್ದೂರಿಯಾಗಿ ಈ ಮದ್ವೆ ನಡೆಸಲು ಕುಟುಂಬ ಪ್ಲಾನ್ ಮಾಡಿದೆ.

311

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್  ವಿವಾಹ ಪೂರ್ವ ಕಾರ್ಯಕ್ರಮಗಳಿಗಾಗಿ ಗುಜರಾತ್‌ನ ಜಮಾನಗರ್ ಸಜ್ಜಾಗಿದೆ.  ಭಾರತದ ಈ ಅದ್ದೂರಿ ವಿವಾಹಕ್ಕೆ 1200ಕ್ಕೂ ಅಧಿಕ ಅತಿಥಿಗಳನ್ನು ಅಂಬಾನಿ ಕುಟುಂಬ ಆಹ್ವಾನಿಸಿದೆ.  

411

ಅದ್ಧೂರಿ ವಿವಾಹದಲ್ಲಿ ಅತಿಥಿಗಳಿಗೆ ಮಹಾಬಲೇಶ್ವರದಿಂದ ದೃಷ್ಟಿಹೀನ ಕುಶಲಕರ್ಮಿಗಳು ವಿನ್ಯಾಸಗೊಳಿಸಿದ ವಿಶೇಷ ಮೇಣದಬತ್ತಿಗಳನ್ನು ಉಡುಗೊರೆಯಾಗಿ ನೀಡಲು ಪ್ಲಾನ್ ರೂಪಿಸಲಾಗಿದೆ. ಇಶಾ ಅಂಬಾನಿ ಸ್ವದೇಶ್ ಹಳೆಯ ಕರಕುಶಲತೆಯ ಅಮೂಲ್ಯ ಪರಂಪರೆಯನ್ನು ಬೆಂಬಲಿಸಲು ಈ ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.

511

ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಸೇರಿದಂತೆ ಖ್ಯಾತ ಗಾಯಕರು ಪ್ರದರ್ಶನ ನೀಡಲಿದ್ದಾರೆ. ಇನ್ನು ಮದುವೆ ಮನೆಯ ಒಳಾಂಗಣದ ಅದ್ದೂರಿ ಅಲಂಕಾರ ಹಾಗೂ ಊಟದ ಕೆಟರಿಂಗ್ಸ್‌ಗಾಗಿ ದೇಶದ ವಿವಿಧೆಡೆಯ ಖ್ಯಾತ ಪ್ರತಿಭಾವಂತ ಕಲಾಕರರನ್ನು ಕರೆಸಲಾಗಿದೆ ಎಂಬ ಮಾಹಿತಿ ಇದೆ. 

611

ಹಾಗೆಯೇ ಸೆಲೆಬ್ರಿಟಿಗಳ ಇಷ್ಟದ ವಸ್ತ್ರ ವಿನ್ಯಾಸಕರರಾಗಿರುವ ಮನೀಶ್ ಮಲ್ಹೋತ್ರಾ ಅವರ ಕ್ರಿಯೇಟಿವ್ ನಿರ್ದೇಶನದಲ್ಲಿ ಈ ಇಡೀ ಮದುವೆ ಮಹೋತ್ಸವ ನಡೆಯಲಿದೆ ಎಂಬ ಮಾಹಿತಿ ಇದೆ. ಕೆಲ ಮಾಹಿತಿಯ ಪ್ರಕಾರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್, ಮದುವೆ ಎಪ್ರಿಲ್‌ನಿಂದ ಜುಲೈ ವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

711

ಮದುವೆಯಲ್ಲಿ ವಧುವರರಾದ ಅನಂತ್ ಹಾಗೂ ರಾಧಿಕಾ ಡಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಡಾನ್ಸ್‌ ಪ್ರಾಕ್ಟಿಸ್‌ಗೆ ಬಂದಿರುವ ಗಣ್ಯ ಅತಿಥಿಗಳಿಗೂ ಕೂಡ ಅದ್ದೂರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಹುತೇಕ ಎಲ್ಲ ಗುಜರಾತಿ ಚಾಟ್ಸ್‌, ಹಾಗೂ ಸ್ನ್ಯಾಕ್ಸ್‌ಗಳನ್ನು ವಿಶೇಷವಾಗಿ ಅತಿಥಿಗಳಿಗಾಗಿ ತಯಾರಿಸಲಾಗಿದೆ. 

811

ಅನಂತ್ ಅಂಬಾನಿ ತಮ್ಮ ಅತಿರಂಜಿತ ಜೀವನಶೈಲಿ, ದುಬಾರಿ ವಾಚ್‌ಗಳು ಮತ್ತು ವಿದೇಶಿ ಕಾರುಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಟ್ರೆಂಡಿಂಗ್‌ನಲ್ಲಿರುತ್ತಾರೆ. 18 ತಿಂಗಳ ಅವಧಿಯಲ್ಲಿ 108 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದರು. 

911

ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಿಂದ ತಮ್ಮ ಅಧ್ಯಯನವನ್ನು ಮುಗಿಸಿದರು ಮತ್ತು ಈಗ ರಿಲಯನ್ಸ್ ನ್ಯೂ ಎನರ್ಜಿ ಬಿಸಿನೆಸ್ ಅನ್ನು ನಿರ್ವಹಿಸುತ್ತಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜನವರಿ 19, 2023 ರಂದು ಅದ್ದೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. 

1011

ಭಾರತದ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರೂ, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ತಮ್ಮ ವಿನಮ್ರ ನಡವಳಿಕೆ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದ್ದಾರೆ.

1111

ಅನಂತ್ ಅಂಬಾನಿ ರಿಲಯನ್ಸ್ 02ಸಿ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿಯ ನಿರ್ದೇಶಕರ ಹುದ್ದೆಯಲ್ಲಿದ್ದಾರೆ. ವರದಿಗಳನ್ನು ನಂಬುವುದಾದರೆ, ಅವರ ನಿವ್ವಳ ಮೌಲ್ಯವು 40 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು.

Read more Photos on
click me!

Recommended Stories