ಪುಟ್ಟ ಬ್ಯಾಗ್‌ಗೆ ಎರಡೂವರೆ ಲಕ್ಷ ಕೊಟ್ಟ ಮಗಳು: ಉಸಿರು ನಿಲ್ಲೋದೊಂದು ಬಾಕಿ ಎಂದ ನಟ

First Published | Feb 15, 2024, 12:53 PM IST

ಪೋಷಕರೆಲ್ಲರೂ ತಮ್ಮ ಕರುಳ ಕುಡಿಗಳನ್ನು ತಮ್ಮೂಸಿರಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಅದರಲ್ಲೂ ಕೆಲವು ಪೋಷಕರು ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದೇ ರೀತಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಖಿ  ಕೂಡ ತಮ್ಮ ಮುದ್ದಿನ ಮಗಳಿಗಾಗಿ ಏನು ಮಾಡಲು ಸಿದ್ಧರಿರುವ ಈ ನಟ ಮಗಳಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಿದಾಗ ನಡೆದ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿದ್ದಾರೆ. 

ನವಾಜುದ್ದೀನ್ ಸಿದ್ದಿಖಿ ಬಾಲಿವುಡ್‌ನ ಪ್ರತಿಭಾವಂತ ನಟ, ಆಮೀರ್ ಖಾನ್ ನಟನೆಯ ಸರ್‌ಫಾರೊಶ್ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟ  ನಂತ ಗ್ಯಾಂಗ್ಸ್‌ ಆಫ್ ವಾಸ್ಸೈಪುರ್‌, ದ ಲಂಚ್‌ಬಾಕ್ಸ್, ರಾಮನ್ ರಾಘವ್ 2.0 ಮಂಟೊ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಈಗ ಬಾಲಿವುಡ್‌ನ ಅತ್ಯಾಧ್ಬುತ ನಟ ಎನಿಸಿದ್ದಾರೆ. ಇಂತಹ ನವಾಜುದ್ದೀನ್ ಸಿದ್ದಿಕಿಗೆ ಮಗಳು  ಶೋರಾ ಸಿದ್ಧಿಕಿ ಎಂದರೆ ಎಲ್ಲಿಲ್ಲದ ಪ್ರೀತಿ. 

ಈ ಅತೀಯಾದ ಪ್ರೀತಿಯಿಂದಲೇ ಕೆಲವೊಮ್ಮೆ ದೊಡ್ಡ ಎಡವಟ್ಟಾಗುತ್ತೆ ನೋಡಿ..!, ಮಕ್ಕಳ ಮೇಲಿನ ಅತೀಯಾದ ಪ್ರೀತಿಯಿಂದ ಪೋಷಕರ ಜೋಬಿಗೆ ಕೆಲವೊಮ್ಮೆ ದೊಡ್ಡ ಕತ್ತರಿ ಬೀಳುತ್ತೆ.

Tap to resize

ನವಾಜುದ್ದೀನ್ ಸಿದ್ಧಿಖಿ ಅವರಿಗೂ ಇದೇ ಆಗಿದೆ. ಅನ್‌ಫಿಲ್ಟರ್ಡ್‌ ಬೈ ಸಮ್‌ದೀಶ್ ಜೊತೆ ನಡೆಸಿದ ಸಂದರ್ಶನೊಂದರಲ್ಲಿ ನಟ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

ಅಲ್ಲದೇ ಮಗಳಿಗಾಗಿ ತಾನು ಏನು ಮಾಡುವುದಕ್ಕೂ ಸಿದ್ಧನಿದ್ದೇನೆ, ನಾನು ಮಡಿಲಲ್ಲಿ ತಲೆಇಟ್ಟು ಮಲಗಿದ ಕೊನೆ ವ್ಯಕ್ತಿ ಎಂದರೆ ನನ್ನ ಮಗಳೇ ಎಂದು ಅವರು ಹೇಳಿಕೊಂಡಿದ್ದಾರೆ. 


ಹೀಗೆ ದುಬೈಗೆ ಜೊತೆಯಾಗಿ ಈ ಅಪ್ಪ ಮಗಳು ಜೊತೆಯಾಗಿ ಭೇಟಿ ನೀಡಿದ್ದು, ಅಲ್ಲಿ ಶಾಪಿಂಗ್ ತೆರಳಿದ್ದಾರೆ. ಈ ವೇಳೆ ಅಲ್ಲಿ ಮಗಳು ಶೋರಾ ತನಗೆ ಸಣ್ಣದೊಂದು ಬ್ಯಾಗ್ ಬೇಕು ಎಂದು ಅಪ್ಪನ ಬಳಿ ಕೇಳಿದ್ದಾಳೆ. ಇದಕ್ಕೆ ಅಪ್ಪನೂ ಎಂದಿನಂತೆ ಓಕೆ ಎಂದಿದ್ದಾರೆ. ಆದರೆ  ಆ ಸಣ್ಣ ಬ್ಯಾಗ್‌ನ ಬೆಲೆ ಕೇಳಿ ಅಪ್ಪ ಶಾಕ್ ಆಗಿದ್ದು, ಒಮ್ಮೆಗೆ ಉಸಿರು ನಿಂತತಾಯ್ತು ಎಂದು ಹೇಳಿದ್ದಾರೆ. 

ಮಗಳು ದುಬೈನ ಶಾಪಿಂಗ್ ಮಾಲ್‌ನಲ್ಲಿ ಐಷಾರಾಮಿ ಬ್ರಾಂಡ್ ಆದ ಲೂಯಿ ವಿಟಾನ್ ಬ್ಯಾಗ್‌ಗೆ ಕೈ ಹಾಕಿದ್ದು, ಬ್ಯಾಗ್‌ನ ಸೈಜ್ ನೋಡಿದ ಅಪ್ಪ ನವಾಜುದ್ದೀನ್ ಈ ಬ್ಯಾಗ್‌ಗೆ 20 ರಿಂದ 25 ರೂಪಾಯಿ ಇರಬಹುದು ಎಂದು ಭಾವಿಸಿದ್ದರಂತೆ  ಆದರೆ ಅದರ ಬೆಲೆ ಎರಡೂವರೆ ಲಕ್ಷ ರೂಪಾಯಿಗಳು, ಬ್ಯಾಗ್‌ನ ಪ್ರೈಸ್ ಟ್ಯಾಗ್ ನೋಡಿ ತಾನು ಶಾಕ್ ಆಗಿದ್ದಾಗಿ ಅವರು ಹೇಳಿದ್ದಾರೆ. 


ಇದೊಂದು ಸಣ್ಣ ಬ್ಯಾಗ್ ಎಂದು ನಾನು ಭಾವಿಸಿದ್ದೆ ಆದರೆ ಆಕೆ ನನ್ನನ್ನು ಲೂಯಿಸಾ ವಿಟಾನ್ ಶೋರೂಮ್‌ಗೆ ಎಳೆದೊಯ್ದಳು, ಅಲ್ಲಿ ರೇಟ್ ಕೇಳಿ ನನ್ನ ಉಸಿರು ನಿಲ್ಲೋದೊಂದು ಬಾಕಿ ಅಷ್ಟೊಂದು ದುಬಾರಿ ಆಗಿತ್ತು ಅದರ ಬೆಲೆ ಎಂದು ಹೇಳಿಕೊಂಡಿದ್ದಾರೆ.  ನಟ ನವಾಜುದ್ದೀನ್ ಸಿದ್ದಿಕ್ಕಿ ಹಾಗೂ ಆಲಿಯಾ ಸಿದ್ಧಿಕಿ 2009ರಲ್ಲಿ ಮದ್ವೆಯಾಗಿದ್ದರು. ಇವರ ದಾಂಪತ್ಯದಲ್ಲಿ ಶೋರಾ ಹಾಗೂ ಯಾನಿ ಎಂಬ ಒಂದು ಗಂಡು ಹೆಣ್ಣು ಮಕ್ಕಳಿದ್ದಾರೆ. ಪ್ರಸ್ತುತ ದಾಂಪತ್ಯದಿಂದಾಗಿ ಈ ಜೋಡಿ ಪರಸ್ಪರ ದೂರಾಗಿದ್ದರೂ ಇಬ್ಬರೂ ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುತ್ತಿರುತ್ತಾರೆ. ಇವರ ಪತ್ನಿಯೂ ಇತ್ತೀಚೆಗೆ ಸಿದ್ಧಿಖಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. 

Latest Videos

click me!