6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ನಿಮಗೇನಾದ್ರೂ ಗೊತ್ತಾ?

First Published | Feb 14, 2024, 12:11 PM IST

ಪ್ರೇಮಿಗಳ ದಿನ ಬಂದೇ ಬಿಟ್ಟಿದೇ. ಜನರಂತೂ ತಮ್ಮ ಸ್ಪೇಷಲ್ ದಿನವನ್ನು ವಿಶೇಷವಾಗಿಸಲು ತಮ್ಮ ಸಂಗಾತಿಗಾಗಿ ಗಿಫ್ಟ್, ಚಾಕಲೇಟ್, ಡೇಟಿಂಗ್ ಪ್ಲ್ಯಾನ್ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಶೇಷ ದಿನದಂದು ನಾವು ನಿಮಗೆ 6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ಹೇಳ್ತೀವಿ ಕೇಳಿ… 

ಪ್ರೇಮಿಗಳ ವಾರದ (valentine week) ಏಳನೇ ದಿನ ಅಂದರೆ ಫೆಬ್ರವರಿ 13 ಅನ್ನು ಕಿಸ್ ಡೇ (kiss day)ಎಂದು ಆಚರಿಸಲಾಗುತ್ತದೆ. ಜನರು ತಮ್ಮ ಸಂಗಾತಿಯನ್ನು ಚುಂಬಿಸುತ್ತಾರೆ ಮತ್ತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ವಿಶೇಷ ಸಂದರ್ಭದಲ್ಲಿ, 6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ನೀವು ತಿಳಿದುಕೊಳ್ಳದೇ ಇದ್ದರೆ ಹೇಗೇ? 

6 ಸೆಕೆಂಡ್ ಕಿಸ್ ಪರಿಣಾಮ: 6 ಸೆಕೆಂಡ್ ಕಿಸ್ ಥಿಯರಿ (6 second kiss theory) ಅಂದ್ರೆ ಏನು ಅಂತ ನೀವು ಯೋಚನೆ ಮಾಡ್ತಿದ್ರೆ ಕೇಳಿ… ಈ ಥಿಯರಿಯು ಸಂಬಂಧದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ, ಅಲ್ಲದೇ ಇಬ್ಬರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. 

Tap to resize

ಈ ಸಿದ್ಧಾಂತ ಏನು ಹೇಳುತ್ತೆ?: ರಿಲೇಶನ್ ಶಿಪ್ ಎಕ್ಸ್ ಪರ್ಟ್ (Relationship Expert)ಆಗಿರುವ ಡಾ. ಜಾನ್ ಗಾಟ್ಮನ್ ಈ ಸಿದ್ಧಾಂತವನ್ನು ನೀಡಿದ್ದಾರೆ. 6 ಸೆಕೆಂಡುಗಳ ಕಾಲ ಚುಂಬಿಸುವುದರಿಂದ ಸಂಬಂಧದಲ್ಲಿ ಸಕಾರಾತ್ಮಕ ಪರಿಣಾಮ ಹೆಚ್ಚಾಗುತ್ತದೆ ಎಂದು ಅವರು ನಂಬಿದ್ದಾರೆ. ಇದನ್ನೆ ಅವರು ಪ್ರೇಮಿಗಳಿಗೂ ಹೇಳುತ್ತಾರೆ. 

ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆ: ನೀವು 6 ಸೆಕೆಂಡುಗಳ ಕಾಲ ಸಂಗಾತಿಗೆ ಕಿಸ್ ಮಾಡಿದ್ರೆ, ನಿಮ್ಮ ದೇಹದಲ್ಲಿ ಆಕ್ಸಿಟೋಸಿನ್ (oxytocin hormone ) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪ್ರೀತಿಯ ಭಾವನೆ: 6 ಸೆಕೆಂಡ್ ಕಿಸ್ ಥಿಯರಿ ಪ್ರಕಾರ, ನೀವು ಯಾರನ್ನಾದರೂ ಕಿಸ್ ಮಾಡಿದಾಗ, ನೀವು ಆ ವ್ಯಕ್ತಿಯ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸುತ್ತೀರಿ. ಇದರಿಂದ ಸಂಬಂಧವು ಗಟ್ಟಿಯಾಗುತ್ತಾ ಹೋಗುತ್ತದೆ. ಇದರಿಂದ ಪ್ರೀತಿ ಗಟ್ಟಿಯಾಗಲು ಸಹಾಯ ಮಾಡುತ್ತದೆ. 

ಆಯಾಸ ದೂರವಾಗುತ್ತೆ: ಸಂಗಾತಿಗೆ ಮನಸಾದಗಲೆಲ್ಲಾ 6 ಸೆಕೆಂಡ್ ಕಿಸ್ ಮಾಡೋದ್ರಿಂದ ಆಯಾಸವೆಲ್ಲಾ ದೂರವಾಗುತ್ತದೆ, ಅಷ್ಟೇ ಅಲ್ಲ ಒತ್ತಡ (stress) ದೂರವಾಗಿ ಮನಸು ಶಾಂತವಾಗುತ್ತದೆ. ಇದರಿಂದ ನಿಮ್ಮ ದಾಂಪತ್ಯ ಜೀವನವೂ ಸುಂದರವಾಗಿರಲು ಸಹಾಯ ಮಾಡುತ್ತದೆ.

ವಿಶ್ವಾಸ ಹೆಚ್ಚುತ್ತದೆ: ಈ ಥಿಯರಿಯನ್ನು ನೀವು ಅನುಸರಿಸಿದ್ರೆ, ನಿಮ್ಮ ಸಂಗಾತಿಗೆ ಖಂಡಿತವಾಗಿಯೂ ನಿಮ್ಮ ಮೇಲೆ ವಿಶ್ವಾಸ ಹೆಚ್ಚಾಗುತ್ತದೆ, ಅಷ್ಟೇ ಅಲ್ಲ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಹೆಚ್ಚುತ್ತದೆ. ಮಧುರ ದಾಂಪತ್ಯ ಜೀವನದ (married life) ಬುನಾದಿಯೇ ನಂಬಿಕೆ

ರೋಮ್ಯಾನ್ಸ್ ಹೆಚ್ಚುತ್ತೆ: ಕಿಸ್ ಮಾಡೋದ್ರಿಂದ ಖಂಡಿತವಾಗಿಯೂ ರೊಮ್ಯಾನ್ಸ್ ಹೆಚ್ಚಾಗುತ್ತದೆ ಅಲ್ವಾ?. ಖಂಡಿತಾ ಹೌದು. ಈ 6 ಸೆಕೆಂಡ್ ಥಿಯರಿಯ ಪ್ರಕಾರ ನೀವು ನಿಮ್ಮ ಸಂಗಾತಿಗೆ ಕಿಸ್ ಮಾಡುತ್ತಿದ್ದರೆ, ಅಲ್ಲಿ ರೋಮ್ಯಾನ್ಸ್ (romance) ಹೆಚ್ಚುತ್ತದೆ, ಪ್ರೀತಿಯೂ ಹೆಚ್ಚಿ ಇಂಟಿಮೆಟ್ ಕ್ಷಣ ಹುಟ್ಟುತ್ತೆ. 

ಕಾಣೆಯಾದ ಪ್ರೀತಿ ಮತ್ತೆ ಜಾಗೃತವಾಗುತ್ತೆ: ಹೀಗೆ ಸಂಗಾತಿಗೆ 6 ಸೆಕೆಂಡ್ ಕಿಸ್ ಮಾಡೋದ್ರಿಂದ ನಿಮ್ಮಿಬ್ಬರ ನಡುವೆ ಕೆಲಸದ ಜಂಜಾಟದಲ್ಲಿ ಮರೆಯಾಗಿದ್ದ ಪ್ರೀತಿ, ಭರವಸೆ ಮತ್ತೆ ಜಾಗೃತವಾಗುತ್ತದೆ. ಮತ್ತೆ ದಾಂಪತ್ಯ ಜೀವನ ಸುಂದರವಾಗುತ್ತದೆ. 

Latest Videos

click me!