Man Shares Marital Issues: ಆಕೆಯ ಹಿಂದಿನ ಸಂಬಂಧದ ಬಗ್ಗೆ ಅವನಿಗೆ ಗೊತ್ತಿತ್ತು. ಆದರೆ ಅದು ಮುಗಿದುಹೋದ ಅಧ್ಯಾಯ ಎಂದು ಅವನು ಭಾವಿಸಿದನು. ಮದುವೆಯ ನಂತರ, ಬಹಳ ಖುಷಿಯಾಗಿದ್ದ ಆತ ಲೈಫಲ್ಲಿ ಗೆದ್ದೇ ಎಂದು ಭಾವಿಸಿದನು. ಏಕೆಂದರೆ ಅವನ ಹೆಂಡತಿಯೂ ಯಾವಾಗಲೂ ವಿಶೇಷವಾದ…
ಭಾರತೀಯ ವಿವಾಹವು ನಂಬಿಕೆ, ಪ್ರೀತಿ, ಗೌರವ ಮತ್ತು ತಿಳುವಳಿಕೆಯನ್ನು ಆಧರಿಸಿದ, ಗಂಡ ಮತ್ತು ಹೆಂಡತಿ ನಡುವಿನ ಪವಿತ್ರ ಮತ್ತು ಶಾಶ್ವತ ಸಂಬಂಧವಾಗಿದೆ. ಆದರೆ ನಾವು ಮಾಡುವ ಕೆಲವು ತಪ್ಪುಗಳು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಬಹಳ ಕಡಿಮೆ ಜನರು ಮಾತ್ರ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ.
26
ವೈವಾಹಿಕ ಜೀವನದ ಕುರಿತು ಬಹಿರಂಗವಾಗಿ ಮಾತನಾಡಿದ ವ್ಯಕ್ತಿ
ಇದೀಗ 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ವೈವಾಹಿಕ ಜೀವನದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ರೆಡ್ಡಿಟ್‌ನ ಇನ್‌ಸೈಡ್ ಇಂಡಿಯನ್ ಮ್ಯಾರೇಜ್ ಸಬ್‌ರೆಡಿಟ್‌ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದು, ಇದನ್ನು ಕೇಳಿದ ಅನೇಕರಿಗೆ ಶಾಕ್ ಆಯ್ತು. ತನ್ನ ಹೆಂಡತಿ ಮಾಜಿ ಗೆಳೆಯನೊಂದಿಗೆ ಇನ್ನೂ ಚೆನ್ನಾಗಿದ್ದೇನೆ ಎಂದು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ ಮದುವೆಯಾದ ಐದು ವರ್ಷಗಳ ನಂತರ ಈ ವಿಷಯ ರಿವೀಲ್ ಆಗಿದೆ.
36
ಕೊನೆಗೆ ದೂರವಾಗುತ್ತಾ ಬಂದಳು
ಇನ್ನು ವಿಶೇಷವೆಂದರೆ ಆ ವ್ಯಕ್ತಿ ತನ್ನ ಪತ್ನಿ (30) ಜೊತೆ ಆರು ತಿಂಗಳ ಕಾಲ ಡೇಟಿಂಗ್ ಮಾಡಿದ ನಂತರ ಪ್ರೇಮ ವಿವಾಹ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಆಕೆಯ ಹಿಂದಿನ ಸಂಬಂಧದ ಬಗ್ಗೆ ಅವನಿಗೆ ಗೊತ್ತಿತ್ತು. ಆದರೆ ಅದು ಮುಗಿದುಹೋದ ಅಧ್ಯಾಯ ಎಂದು ಅವನು ಭಾವಿಸಿದನು. ಮದುವೆಯ ನಂತರ, ಬಹಳ ಖುಷಿಯಾಗಿದ್ದ ಆತ ಲೈಫಲ್ಲಿ ಗೆದ್ದೇ ಎಂದು ಭಾವಿಸಿದನು. ಏಕೆಂದರೆ ಅವನ ಹೆಂಡತಿಯೂ ಯಾವಾಗಲೂ ಅವನಿಗೆ ವಿಶೇಷವಾದ ಪ್ರೀತಿಯ ಭಾವನೆ ಮೂಡಿಸುತ್ತಿದ್ದಳು. ಆದರೆ ಯಾವಾಗ ಆಕೆ ಇದ್ದಕ್ಕಿದ್ದಂತೆ ತನ್ನ ಮಾಜಿ ಗೆಳೆಯನನ್ನು ಭೇಟಿಯಾದಳೋ ಎಲ್ಲವೂ ಬದಲಾಯ್ತು. ಇದಾದ ನಂತರ ಅವಳ ನಡವಳಿಕೆ ಬದಲಾಯಿತು. ಕೊನೆಗೆ ದೂರವಾಗುತ್ತಾ ಬಂದಳು.
ಹಲವಾರು ಸುತ್ತಿನ ಮಾತುಕತೆಯ ನಂತರ ಹೆಂಡತಿ ತನ್ನ ಹಿಂದಿನ ಸಂಬಂಧವನ್ನು ಎಂದಿಗೂ ಮರೆಯಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡಳು. ಅದರ ಬಗ್ಗೆಯೇ ಆಗಾಗ್ಗೆ ಯೋಚಿಸುತ್ತಿದ್ದಳು. ಗಂಡನು ಮಾಜಿ ಗೆಳೆಯನನ್ನು ಹೋಲುತ್ತಾನೆ. ಅದಕ್ಕಾಗಿಯೇ ಮದುವೆಯಾದೆ ಎಂದು ಆಕೆ ಹೇಳಿದಳು. ತನ್ನ ಮಾಜಿ ಗೆಳೆಯನನ್ನು ತಾನು ಇನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೆಂಡತಿ ಒಪ್ಪಿಕೊಂಡಳು.
56
ಕೌನ್ಸಿಲಿಂಗ್ ಪಡೆಯುವಂತೆ ಸೂಚಿಸಿದ ಬಳಕೆದಾರರು
ಆದ್ದರಿಂದಲೇ ರೆಡ್ಡಿಟ್ ಬಳಕೆದಾರರು ಆ ವ್ಯಕ್ತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ, ವಿಚ್ಛೇದನ ಪಡೆಯುವಂತೆ ಸಲಹೆ ನೀಡಿದರು. "ಅವಳು ನೀನು ತನ್ನ ಮಾಜಿ ಗೆಳೆಯನಂತೆಯೇ ಇದ್ದೀಯಾ ಎಂದು ಹೇಳಿದ್ದಾಳೆ. ಆದ್ದರಿಂದಲೇ ಆಕೆ ನಿನ್ನನ್ನು ಆರಿಸಿಕೊಂಡಳು", "ನೀವು ಅವಳ ಮಾಜಿ ಗೆಳೆಯನಿಗೆ ಬದಲಿಯಾಗಿದ್ದೀರಿ, ನಿಮ್ಮನ್ನು ಪ್ರೀತಿಸುವ ಯಾರಾದರೂ ನಿಮಗೆ ಬೇಕು", "ಇದು ತುಂಬಾ ಅನ್ಯಾಯ. ಈ ವಿಷಯ ಬಗೆಹರಿಯುವವರೆಗೆ ಮಕ್ಕಳನ್ನು ಯೋಜಿಸದಿರಿ" ಎಂದೆಲ್ಲಾ ಎಚ್ಚರಿಸಿದ್ದಾರೆ. ಮತ್ತೆ ಕೆಲವರು ಕೌನ್ಸಿಲಿಂಗ್ ಪಡೆಯುವಂತೆ ಸೂಚಿಸಿದ್ದಾರೆ.
66
ಮೂರು ಆಯ್ಕೆಗಳನ್ನು ಸೂಚಿಸಿದ ಓರ್ವ ಬಳಕೆದಾರ
*ಹೆಂಡತಿ ಮಾಜಿ ಗೆಳೆಯನನ್ನು ಮದುವೆಯಾಗಲು ಬಯಸಿದರೆ ಅವನ ಜೊತೆ ಹೋಗಲು ಬಿಡಿ. *ಅವಳು ನಿಮ್ಮೊಂದಿಗೆ ಇರಲು ಬಯಸಿದರೆ ಮಾಜಿ ಗೆಳೆಯನ ಜೊತೆಗಿರುವ ಎಲ್ಲಾ ಸಂಪರ್ಕವನ್ನು ಕಡಿತಗೊಳಿಸಿ. *ವಿಚ್ಛೇದನ ಪಡೆಯಿರಿ. ಏಕೆಂದರೆ ಅವಳು ಸಂಪರ್ಕವನ್ನು ಮುರಿದುಕೊಂಡರೂ, ಅವಳ ಹೃದಯದಲ್ಲಿರುವ ಮಾಜಿ ಗೆಳೆಯನನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.