ಲಕ್ಷ್ಮೀ ನಿವಾಸ ಧಾರಾವಾಹಿಯ ಸಿಂಚನಾ ಪಾತ್ರಧಾರಿ ರೂಪಿಕಾ, ಕೆನಡಾ ನಿವಾಸಿ ಅಂಕಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಕಾರಣಕ್ಕೆ ಧಾರಾವಾಹಿಯಿಂದ ಹೊರಬಂದಿದ್ದ ಅವರ ವಿವಾಹ ಸಮಾರಂಭಕ್ಕೆ ಕಿರುತೆರೆ ತಾರ ಬಳಗವೇ ಸಾಕ್ಷಿಯಾಗಿತ್ತು.
ಲಕ್ಷ್ಮೀ ನಿವಾಸ (Lakshmi Nivasa Serial) ಧಾರಾವಾಹಿಯಲ್ಲಿ ಸಿಂಚನಾ ಪಾತ್ರ ಮಾಡುತ್ತಿದ್ದ ರೂಪಿಕಾ ಅವರು ನಿಜ ಜೀವನದಲ್ಲಿ ನಿನ್ನೆ ಮದುವೆಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ಸೀರಿಯಲ್ನಿಂದ ಹೊರಕ್ಕೆ ಬಂದಿದ್ದರು. ಇದೀಗ ಅವರ ಮದುವೆ ಮತ್ತು ರಿಸೆಪ್ಷನ್ನ ವಿವಿಧ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
27
ಪತಿ ಯಾರು?
ಕಳೆದ 5 ವರ್ಷಗಳಿಂದ ಕೆನಡಾದಲ್ಲೇ ನೆಲೆಸಿರುವ ಅಂಕಿತ್ ಎನ್ನುವವರ ಜೊತೆ ರೂಪಿಕಾ ಅವರದ್ದು ಅರೇಂಜ್ಡ್ ಮ್ಯಾರೇಜ್. ಪತಿ ಅಂಕಿತ್ ಕೆನಡಾದಲ್ಲಿ ಇನ್ವೆಸ್ಟ್ ಕೋ ಅಂತ ಫೈನಾನ್ಸ್ ಕಂಪನಿಯಲ್ಲಿ, ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ವರ್ಕ್ ಆಗಿದ್ದಾರೆ. ಮದುವೆಯ ನಂತರ ಕೆನಡಾಗೆ ಹೋಗಿ ಸೆಟಲ್ ಆಗುವ ಪ್ಲ್ಯಾನ್ ಕೂಡ ಇರುವ ಹಿನ್ನೆಲೆಯಲ್ಲಿ, ಅವರು ಧಾರಾವಾಹಿಯನ್ನು ತೊರೆದಿದ್ದಾರೆ.
37
ತಾರಾ ಬಳಗದಿಂದ ಶುಭಾಶಯ
ಅವರ ಮದುವೆಗೆ ವಿವಿಧ ನಟ-ನಟಿಯರು ಬಂದು ಶುಭ ಹಾರೈಸಿದ್ದಾರೆ. ಅವರಲ್ಲಿ ಹೆಚ್ಚಿನವರು ಸೀರಿಯಲ್ ತಾರೆಯರು. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮದುವೆಯ ದಿನ ಪತಿಯ ಜೊತೆ ಡಾನ್ಸ್ ಮಾಡುತ್ತಾ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ ರೂಪಿಕಾ. ಬಳಿಕವೂ ರಿಸೆಪ್ಷನ್ನಲ್ಲಿ ಡಾನ್ಸ್ ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಗಿಸಿದರು.
ಮದುವೆ ಸಂದರ್ಭದಲ್ಲಿ ತವರು ಮನೆ ಬಿಟ್ಟು ಹೊರಡುವಾಗ ಬಹುತೇಕ ಹೆಣ್ಣುಮಕ್ಕಳು ಕಣ್ಣೀರಾಗುವುದು ಇದೆ. ಅದೇ ರೀತಿ ರೂಪಿಕಾ ಕೂಡ ಕಣ್ಣೀರು ಹರಿಸಿದ್ದರು. ಇದರಿಂದ ಅವರ ಅಣ್ಣನೂ ಅತ್ತಿದ್ದು, ಒಂದು ಹಂತದಲ್ಲಿ ಮಂಟಪದಲ್ಲಿ ಇದ್ದ ಎಲ್ಲರ ಕಣ್ಣುಗಳೂ ತೇವಗೊಂಡಿದ್ದವು.
57
ರೂಪಿಕಾ ಕುರಿತು
ಇನ್ನು ನಟಿ ರೂಪಿಕಾ ಕುರಿತು ಹೇಳುವುದಾದರೆ, ಕನ್ನಡದಲ್ಲಿ ಬಾಲ ನಟಿಯಾಗಿ ನಟನೆ ಆರಂಭಿಸಿದ ರೂಪಿಕಾ ಬಳಿಕ ಚೆಲುವಿನ ಚಿಲಿಪಿಲಿ, ಕಾಲ್ಗೆಜ್ಜೆ, ರುದ್ರಾಕ್ಷಿಪುರ, ಮಜ್ಜಿಗೆ ಹುಳಿ ಸಿನಿಮಾದಲ್ಲಿ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ದೊರೆ ಸಾನಿ ಎನ್ನುವ ಸೀರಿಯಲ್ ನಲ್ಲಿ ನಾಯಕಿಯಾಗಿ ಸಹ ರೂಪಿಕಾ ನಟಿಸಿದ್ದರು.
67
ಭರತನಾಟ್ಯ ಕಲಾವಿದೆ
ನಟಿ ರೂಪಿಕಾ ಭರತನಾಟ್ಯ ಕಲಾವಿದೆ. ಇದಾಗಲೇ ಹಲವಾರು ಪ್ರಶಸ್ತಿಗಳು ಬಂದಿವೆ. ಅವರು ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋವನ್ನೂ ನಡೆಸುತ್ತಿದ್ದಾರೆ. ಮದುವೆಯಾದಮೇಲೆ ಕೆನಡಾದಲ್ಲಿಯೂ ಇದನ್ನು ಮುಂದುವರೆಸುವ ಯೋಚನೆ ಇರುವುದಾಗಿ ನಟಿ ಹೇಳಿದ್ದಾರೆ.
77
ನಾಟಕ ರಂಗದಲ್ಲಿಯೂ ಸಕ್ರಿಯ
ಸಿನಿಮಾ ಮತ್ತು ಕಿರುತೆರೆ ಮಾತ್ರವಲ್ಲದೆ ರೂಪಿಕಾ ನಾಟಕ ರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಬೆನಕ, ಸೂರ್ಯ ಹಾಗೂ ಪ್ರಭಾತ್ ನಾಟಕ ತಂಡಗಳೊಂದಿಗೆ ಕೆಲಸ ಮಾಡಿರುವ ಅವರು, ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.