ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ಚಿಕ್ಕಣ್ಣ: ಎಂಗೇಜ್​ಮೆಂಟ್​ ಕ್ಯೂಟ್​ ಫೋಟೋಸ್​ ವೈರಲ್​

Published : Aug 29, 2026, 08:24 PM IST

ಹಾಸ್ಯ ನಟ ಚಿಕ್ಕಣ್ಣ, ಮಂಡ್ಯ ಮೂಲದ ಮೆಕ್ಯಾನಿಕಲ್‌ ಇಂಜಿನಿಯರ್‌ ಹಾಗೂ ಉದ್ಯಮಿ ಪಾವನಾ ಗೌಡ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಯಶಸ್ಸಿನ ನಂತರ 'ಲಕ್ಷ್ಮೀಪುತ್ರ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಚಿಕ್ಕಣ್ಣ, ಅವರ ಎಂಗೇಜ್​ಮೆಂಟ್​ ಫೋಟೋಸ್​ ವೈರಲ್​ ಆಗುತ್ತಿವೆ.

PREV
16
ನಟ ಚಿಕ್ಕಣ್ಣನ ಮದುವೆ

ಸಿನಿಮಾ ಹಾಗೂ ರಿಯಾಲಿಟಿ ಷೋಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ನಟ ಚಿಕ್ಕಣ್ಣ, ಕಳೆದ ವರ್ಷವೇ ಮದುವೆ ಆಗಲು ರೆಡಿಯಾಗಿದ್ದು, ಕಳೆದ ಆಗಸ್ಟ್​ನಲ್ಲಿಯೇ ಎರಡು ಮನೆಯವರು ಹೂ ಮುಡಿಸುವ ಶಾಸ್ತ್ರ ನೆರವೇರಿಸಿಕೊಂಡಿದ್ದರು. ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯ ಜೊತೆ ಚಿಕ್ಕಣ್ಣ ಹಸಮಣೆ ಏರಲಿದ್ದಾರೆ. ಮಹದೇವಪುರ ಗ್ರಾಮದ ಪಾವನಾ ಎಂಬ ಯುವತಿಯ ಜೊತೆ ಚಿಕ್ಕಣ್ಣ ಮದುವೆ ನಡೆಯಲಿದೆ. ಇವರ ಎಂಗೇಜ್​ಮೆಂಟ್​ ನಡೆದಿದ್ದು, ಅವುಗಳ ಕ್ಯೂಟ್​ ವಿಡಿಯೋ, ಫೋಟೋಗಳು ವೈರಲ್​ ಆಗುತ್ತಿವೆ.

26
'ಲಕ್ಷ್ಮೀಪುತ್ರ' ಸಿನಿಮಾ ಬಿಡುಗಡೆಗೆ ಸಜ್ಜು

ಚಿಕ್ಕಣ್ಣ ಅಭಿನಯದ 'ಲಕ್ಷ್ಮೀಪುತ್ರ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಉಪಾಧ್ಯಕ್ಷ ಸಿನಿಮಾದ ಯಶಸ್ಸಿನ ಬಳಿಕ ಚಿಕ್ಕಣ್ಣ ಮತ್ತೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಚಿಕ್ಕಣ್ಣ. ಸಿನಿಮಾ ಬಿಡುಗಡೆಗೂ ಮುನ್ನ ನಟ, ಭಾವಿ ಪತ್ನಿ ಪಾವನಾ ಗೌಡ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ಅದರ ಫೋಟೋಗಳು ವೈರಲ್​ ಆಗಿವೆ. ಮದುವೆ ನಿಶ್ಚಯವಾದ ಬಳಿಕ ಚಿಕ್ಕಣ್ಣ ಹಾಗೂ ಪಾವನಾ ಜೋಡಿ ಆಗಾಗ ಸೋಶಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿರುವ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

36
ಪಾವನಾ ಯಾರು?

ಮಂಡ್ಯ ಮೂಲದ ಪಾವನಾ ಕೆಸಿ ಗೌಡ ಎನ್ನುವವರ ಜೊತೆ ನಟ ಚಿಕ್ಕಣ್ಣ ಹಸೆಮಣೆ ಏರಲಿದ್ದಾರಂತೆ. ಪಾವನಾ ಅವರು ಮೈಸೂರಿನಲ್ಲಿ ಪಿಯುಸಿ ಸೇರಿದಂತೆ ಉನ್ನತ ಶಿಕ್ಷಣ ಪೂರೈಸಿದ್ದಾರೆ.

46
ಉದ್ಯಮಿಯೂ ಹೌದು

Greenaura Techno Ventures ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿರುವ ಪಾವನಾ ಅವರು ಉದ್ಯಮಿ ಕೂಡ ಹೌದು. ಅಂದಹಾಗೆ ಪಾವನಾ ಅವರು ಮೆಕ್ಯಾನಿಕಲ್‌ ಇಂಜಿನಿಯರ್‌ ಎನ್ನಲಾಗಿದೆ. ಪ್ರಾಣಿಗಳು, ಪ್ರಕೃತಿ ಅಂದರೆ ಪಾವನಾಗೆ ತುಂಬ ಇಷ್ಟ. ಇನ್‌ಸ್ಟಾಗ್ರಾಮ್‌ನಲ್ಲಿ ಯಾರೋ ನನ್ನ ಹೃದಯ ಕದ್ದಿದ್ದಾರೆ ಎಂಬ ಟೈಟಲ್‌ ಅಡಿಯಲ್ಲಿ ಪಾವನಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಅವರು ಪಾವನಾರ ಕೈ ಹಿಡಿದುಕೊಂಡು ನಿಂತಿರುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

56
ಸಿನಿಮಾಗಳಲ್ಲಿ ಹೆಸರು ಮಾಡಿರುವ ನಟ!

2011ರಲ್ಲಿ ನಟ ಯಶ್‌ ಅವರ ಕಿರಾತಕ ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ ಚಿಕ್ಕಣ್ಣ ಆಮೇಲೆ ಹಿಂತಿರುಗಿ ನೋಡೇ ಇಲ್ಲ. ‘ರಾಜಾಹುಲಿ’, ‘ಅಧ್ಯಕ್ಷ’, ‘ಉಪಾಧ್ಯಕ್ಷ’ ಮುಂತಾದ ಸಿನಿಮಾಗಳಲ್ಲಿ ಚಿಕ್ಕಣ್ಣನ ಅಭಿನಯ, ಕಾಮಿಡಿಗೆ ಮನಸೋಲದವರೇ ಇಲ್ಲ ಎನ್ನಬಹುದು.

66
ಸ್ಟಾರ್ ಕಮೇಡಿಯನ್​

ಇಲ್ಲಿಯವರೆಗೆ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಚಿಕ್ಕಣ್ಣ ಅವರು ನಟ ದರ್ಶನ್‌, ಕಿಚ್ಚ ಸುದೀಪ್‌, ಯಶ್‌ ಸೇರಿದಂತೆ ದಿಗ್ಗಜರ ಸಿನಿಮಾಗಳಲ್ಲಿ ಹೀರೋ ಫ್ರೆಂಡ್‌ ಪಾತ್ರದಲ್ಲಿ ನಟಿಸಿ ನಗಿಸಿದ್ದೇ ಹೆಚ್ಚು ಎನ್ನಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories