'ಕುಲವಧು' ಖ್ಯಾತಿಯ ನಟಿ ಧನ್ಯಾ ದೀಪಿಕಾ ಅವರು ದಾಂಪತ್ಯ, ಡಿವೋರ್ಸ್ ಮತ್ತು ಜೀವನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನವು ಕೆಲವೊಮ್ಮೆ ಆಶೀರ್ವಾದವಾಗಬಹುದು ಎಂದಿರುವ ಅವರು, ಸಮಾಜದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ವೈಯಕ್ತಿಕ ಸಂತೋಷಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಧನ್ಯಾ ದೀಪಿಕಾ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಆದರೆ ಕುಲವಧು ಸೀರಿಯಲ್ ಧನ್ಯಾ ಎಂದಾಕ್ಷಣ ಸೀರಿಯಲ್ ಪ್ರಿಯರ ಕಣ್ಣುಗಳು ಅರಳುತ್ತವೆ. ಸುಮಾರು ನಾಲ್ಕು ವರ್ಷ ಪ್ರಸಾರವಾದ ಈ ಸೀರಿಯಲ್ ನಟಿಗೆ ಎಷ್ಟು ಹೆಸರು ತಂದುಕೊಟ್ಟಿತು ಎಂದರೆ ಬರೀ ದೀಪಿಕಾ ಆಗಿದ್ದ ನಟಿ ಧನ್ಯಾ ಹೆಸರಿನ ಮೂಲಕ ಧನ್ಯಾ ದೀಪಿಕಾ ಆಗಿಬಿಟ್ಟರು. ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್ನಲ್ಲಿಯೂ ಮಿಂಚುತ್ತಿರುವ ನಟಿ ಆಧ್ಯಾತ್ಮದತ್ತ ಒಲವು ತೋರಿದ್ದು, ಜೀವನದ ಕೆಲವೊಂದು ನಿರ್ಧಾರಗಳ ಬಗ್ಗೆ ಮಾತನಾಡಿದ್ದಾರೆ.
27
ಸುಖಮಯ ದಾಂಪತ್ಯ
ಏಳು ವರ್ಷಗಳ ಹಿಂದೆ ನಟ ಆಕರ್ಷ್ ಜೊತೆ ಮದುವೆಯಾಗಿ ಸುಖಮಯ ದಾಂಪತ್ಯ ನಡೆಸುತ್ತಿರುವ ಧನ್ಯಾ ದೀಪಿಕಾ (Dhanya Deepika) ಅವರು, ಈಗ ಎಲ್ಲರ ಬದುಕಿನ ಅದರಲ್ಲಿಯೂ ಹೆಣ್ಣಿನ ಜೀವನದ ಕೆಲವೊಂದು ಕಟುಸತ್ಯಗಳ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಎನ್ನುವುದು ಸರ್ವೇ ಸಾಮಾನ್ಯ ಆಗಿರುವ ಈ ಸಮಯದಲ್ಲಿ, ಡಿವೋರ್ಸ್ ಪಡೆಯುವ ನಿರ್ಧಾರ ಮಾಡುವುದು ಬದುಕಿನಲ್ಲಿ ಯಾವ ರೀತಿಯ ಮಹತ್ವ ಪಡೆದುಕೊಳ್ಳುತ್ತದೆ ಎನ್ನುವ ಬಗ್ಗೆಯೂ ಮುಕ್ತವಾಗಿ ನಟಿ ಮಾತನಾಡಿದ್ದಾರೆ.
37
ಮೊದಲೇ ನಿಶ್ಚಯ
SumanTv Kannada Entertainment ಜೊತೆ ಮಾತನಾಡಿರುವ ನಟಿ ದೀಪಿಕಾ ಅವರು, ನಮ್ಮ ಜೀವನದಲ್ಲಿ ಯಾರು ಬರಬೇಕು, ಯಾರು ಇರಬೇಕು, ಯಾರು ಹೋಗಬೇಕು ಎನ್ನುವುದು ಮೊದಲೇ ನಿಶ್ಚಯವಾಗಿರುತ್ತದೆ. ಸರಿಯಾದ ಸಮಯಕ್ಕೆ ತಪ್ಪಾದ ಜಾಗದಿಂದ ಹೊರಗೆ ಬರುವುದು ಕೂಡ ಆಶೀರ್ವಾದ ಆಗಿರುತ್ತೆ. ಡಿವೋರ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಮದುವೆ ಜೀವನ ಅನ್ನುವುದು ಅಲ್ಲಿಗೆ ಕೊನೆ ಅನ್ನಿಸಿಬಿಟ್ಟರೆ, ತಲೆಕೆಡಿಸಿಕೊಳ್ಳಬಾರದು. ನಿಮ್ಮದು ಎನ್ನುವುದು ನಿಮ್ಮ ಬಾಳಿಗೆ ಬಂದೇ ಬರುತ್ತೆ. ಹೋದ್ರೆ ಹೋಗ್ಲಿ ಬಿಡು ಎಂದುಕೊಂಡು ಡಿವೋರ್ಸ್ ಕೊಡಬೇಕು ಎಂದು ನಟಿ ಹೇಳಿದ್ದಾರೆ.
ಯಾರೂ ಒಬ್ಬಾತ ನಮ್ಮನ್ನು ಬಿಟ್ಟು ಹೋದ ಎಂದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲ. ನೀವು ಹುಟ್ಟಿದ್ದೇಕೆ? ಏನು ಸಾಧನೆ ಮಾಡಬೇಕು ಅದು ಮಾಡಿ. ಮದುವೆ, ಸಂಸಾರ ಇಷ್ಟೇ ಜೀವನ ಅಲ್ಲ. ಅವರಿವರು ಏನೆನ್ನುತ್ತಾರೆ ಎನ್ನೋದು ಕೇಳೋದಲ್ಲ. ಜನ ಏನಿದ್ರೂ ಮಾತನಾಡುತ್ತಾರೆ. ನಮ್ಮ ವೈಯಕ್ತಿಯ ಜೀವನಕ್ಕೂ, ಸಮಾಜಕ್ಕೂ ಸಂಬಂಧ ಇಲ್ಲ ಎನ್ನುವುದು ನಟಿ ದೀಪಿಕಾ ಅಭಿಮತ.
57
ಜನ ಜಡ್ಜ್ ಮಾಡೋಕೆ ಮುಂದೆ ಇರ್ತಾರೆ
ಜನ ಜಡ್ಜ್ ಮಾಡೋಕೆ ಮುಂದೆ ಇರ್ತಾರೆ. ಆದ್ರೆ ಕಷ್ಟ ಎಂದಾಗ ಸಹಾಯ ಮಾಡಲ್ಲ. ಅಂತಹವರಿಗೆ ರಿಯಾಕ್ಟ್ ಮಾಡಬೇಕಿಲ್ಲ. ಹಾಳಾದ್ರೆ, ಅಯ್ಯೋ ಎಷ್ಟು ದುಡಿದ್ರು ಅಷ್ಟೆ.. ಇವ್ರು ಹಾಳಾಗ್ತಾರೆ ಅಂತಾರೆ. ಡಿವೋರ್ಸ್ ಆದ್ರು ಹಿಂಗೆ ಹೇಳ್ತಾರೆ. ಒಂದು ವೇಳೆ ಇದ್ದಕ್ಕಿದಂತೆ ಕೋಟ್ಯಾಧಿಪತಿ ಆಗಿಬಿಟ್ರೆ, ಅವತ್ತು ಡಿವೋರ್ಸ್ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಇವತ್ತು ಸಾಧಿಸಿದ್ದಾಳೆ, ಅವಳ ಧೈರ್ಯ ಮೆಚ್ಚಬೇಕು ಅಂತಾರೆ. ಜನ ಹೆಂಗಿದ್ರು ಮಾತಾಡ್ತಾರೆ, ತಲೆ ಯಾಕೆ ಕೆಡಿಸಿಕೊಳ್ಳಬೇಕು ಎಂದು ಪ್ರಶ್ನಿಸುತ್ತಾರೆ.
67
ಸಂಸಾರ ಅಂದ್ರೆ ಹೊಂದಾಣಿಕೆ ಅಷ್ಟೇ
ಸಂಸಾರ ಅಂದ್ರೆ ಹೊಂದಾಣಿಕೆ ಅಷ್ಟೇ. ಮದುವೆ ಅರೇಂಜ್ಡ್ ಆಗಿದ್ದರೆ, ವ್ಯಕ್ತಿಗಳು ಯಾರು ಎನ್ನವುದು ಗೊತ್ತಿರಲ್ಲ. ಮದುವೆ ಮಾಡ್ಕೊಂಡು ಬಂದು ನಮ್ಮ ಅಪ್ಪ- ಅಮ್ಮನನ್ನು ನೋಡ್ಕೊ ಅನ್ನೋದು ಸರಿಯಲ್ಲ. ಮೊದಲು ಅಪ್ಪ-ಅಮ್ಮನನ್ನು ನೋಡಿಕೊಳ್ಳುವುದು ಆತನ ಜವಾಬ್ದಾರಿ. ಆ ಬಳಿಕ ನಮ್ಮದು. ಇದರಲ್ಲೇ ಜೀವನ ಕಳೆದರೆ ಮುಂದೆ ಹೇಗೆ. ಮದುವೆ ಅಂದ್ರೆ ದಂಪತಿ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ನಟಿಯ ಮನದಾಳದ ಮಾತು.
77
ದಂಪತಿ ಕುಳಿತು ಮಾತಾಡಿಕೊಳ್ಳಿ
ಸಮಸ್ಯೆ ಏನೇ ಬಂದರೂ ದಂಪತಿ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. 3ನೇ ವ್ಯಕ್ತಿ ಎಂಟರ್ ಆಗಬಾರದು. ಇದನ್ನು ಅನುಸರಿಸುವುದು ಕಷ್ಟವೇ ಆಗಿದ್ದರೂ ಹೀಗೆ ಆದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದಿರುವ ನಟಿ, ಧಾನ್ಯದ ಪ್ರಯೋಜನ ತಿಳಿಸಿದ್ದಾರೆ. ಹಳೇ ಕಾಲದಲ್ಲಿ ಮಕ್ಕಳು ಜಾಸ್ತಿ ಇರ್ತಿದ್ರು. ಒಬ್ಬಳು ಡಿವೋರ್ಸ್ ತಗೊಂಡು ಬಂದು ಮನೆಯಲ್ಲಿ ಕೂತ್ರೆ ಉಳಿದವರ ಮದುವೆ ಮಾಡುವುದು ಕಷ್ಟ ಅಂತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಹುಡುಗಿ ಕೂಡ ಹುಡುಗನ ರೀತಿ ದುಡಿಯುತ್ತಾಳೆ. ಇಬ್ಬರು ಮನೆಯ ಕೆಲಸಗಳನ್ನು ಹಂಚಿಕೊಳ್ಳಬೇಕು. ಬಹಳ ಸಣ್ಣ ವಿಷಯಕ್ಕೆ ಡಿವೋರ್ಸ್ ಆಗುತ್ತದೆ ಎಂದು ದೀಪಿಕಾ ವಿವರಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.