ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಜನ್ಮ ದಿನಾಂಕವು ಅವರ ವ್ಯಕ್ತಿತ್ವ, ವೃತ್ತಿ, ಸಂಬಂಧಗಳು ಹಾಗೂ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಕೆಲವು ಜನ್ಮ ಸಂಖ್ಯೆಯವರು ತಡವಾಗಿ ಮದುವೆಯಾಗುತ್ತಾರೆ.
ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಅಂಕೆಗಳನ್ನು ಸೇರಿಸಿ ಪಡೆಯುವ ಮೂಲ ಸಂಖ್ಯೆಯನ್ನು (ರಾಡಿಕ್ಸ್ ಸಂಖ್ಯೆ) ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಈ ಸಂಖ್ಯೆಯ ಪ್ರಕಾರ 5ನೇ ಸಂಖ್ಯೆ ಹೊಂದಿರುವವರು ಸ್ವತಂತ್ರ ಮನೋಭಾವ, ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಗುರುತಿಸಿಕೊಳ್ಳುತ್ತಾರೆ. ಬುಧ ಗ್ರಹದ ಪ್ರಭಾವ ಹೊಂದಿರುವ ಈ ಜನರು ಹೊಸ ವಿಷಯಗಳನ್ನು ಕಲಿಯುವುದು, ಪ್ರವಾಸ ಮಾಡುವುದು ಹಾಗೂ ವೃತ್ತಿಜೀವನದಲ್ಲಿ ಬೆಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
25
ಏಕೆ ತಡವಾಗಿ ಮದುವೆಯಾಗುತ್ತಾರೆ?
ಸಂಖ್ಯೆ 5 ಹೊಂದಿರುವವರು ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳುವುದಿಲ್ಲ. ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವಿಷಯದಲ್ಲೂ ಅವರು ಸಾಕಷ್ಟು ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ತಮ್ಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಕಾರಣ ಹೆಚ್ಚಿನವರು 30 ವರ್ಷದ ನಂತರ ಮದುವೆಯಾಗುವ ಸಾಧ್ಯತೆ ಇದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗುತ್ತದೆ.
35
ದೇವರಂತಹ ಸಂಗಾತಿ ಸಿಗುತ್ತದೆ ಎಂಬ ನಂಬಿಕೆ
ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 5 ಹೊಂದಿರುವವರಿಗೆ ಮದುವೆಯ ನಂತರ ಜೀವನ ಸಂಗಾತಿಯ ರೂಪದಲ್ಲಿ ಅರ್ಥಮಾಡಿಕೊಳ್ಳುವ, ಬೆಂಬಲ ನೀಡುವ ಮತ್ತು ಬಲವಾದ ವ್ಯಕ್ತಿತ್ವದ ಸಂಗಾತಿ ಸಿಗುತ್ತಾರೆ ಎನ್ನಲಾಗುತ್ತದೆ. ದಾಂಪತ್ಯದಲ್ಲಿ ಪರಸ್ಪರ ಗೌರವ, ಸ್ನೇಹ ಮತ್ತು ಉತ್ತಮ ಹೊಂದಾಣಿಕೆ ಇರುವುದರಿಂದ ಅವರ ವೈವಾಹಿಕ ಜೀವನ ಸಂತೋಷಕರವಾಗಿರುತ್ತದೆ ಎಂಬ ನಂಬಿಕೆಯೂ ಇದೆ.
45
ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಆದ್ಯತೆ
ಈ ಸಂಖ್ಯೆಯವರು ಮೊದಲು ತಮ್ಮ ವೃತ್ತಿಜೀವನ ಮತ್ತು ಆರ್ಥಿಕ ಸ್ಥಿರತೆಯತ್ತ ಗಮನ ಹರಿಸುತ್ತಾರೆ. ಹೊಸ ಅವಕಾಶಗಳನ್ನು ಸ್ವೀಕರಿಸುವುದು, ಹೊಸ ಸ್ಥಳಗಳಿಗೆ ಪ್ರವಾಸ ಮಾಡುವುದು ಮತ್ತು ಜೀವನದಲ್ಲಿ ಹೊಸ ಅನುಭವಗಳನ್ನು ಪಡೆಯುವುದು ಇವರ ಸ್ವಭಾವ. ಇದೇ ಕಾರಣದಿಂದ ಇವರ ಮದುವೆ ಸಾಮಾನ್ಯವಾಗಿ ಸ್ವಲ್ಪ ತಡವಾಗಬಹುದು.
55
ದೀಪಿಕಾ ಪಡುಕೋಣೆ ಉದಾಹರಣೆ
ಸಂಖ್ಯಾಶಾಸ್ತ್ರದಲ್ಲಿ ಜನವರಿ 5ರಂದು ಜನಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಸಂಖ್ಯೆ 5ರ ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತದೆ. ಅವರು ತಡವಾಗಿ ವಿವಾಹವಾಗಿದ್ದು, ನಟ ರಣವೀರ್ ಸಿಂಗ್ಅ ವರೊಂದಿಗೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ವೃತ್ತಿಜೀವನದಲ್ಲೂ ರಣವೀರ್ ಸದಾ ದೀಪಿಕಾಗೆ ಬೆಂಬಲವಾಗಿ ನಿಂತಿದ್ದಾರೆ. ಸಂಖ್ಯಾಶಾಸ್ತ್ರದ ನಂಬಿಕೆಯ ಪ್ರಕಾರ, ಇದು ಸಂಖ್ಯೆ 5 ಹೊಂದಿರುವವರ ವೈವಾಹಿಕ ಜೀವನಕ್ಕೆ ಒಂದು ಉದಾಹರಣೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.