ಒಬ್ಬರ ನೆಚ್ಚಿನ ಹಣ್ಣುಗಳನ್ನು (Fruits) ನೋಡುವ ಮೂಲಕ ಅವರ ವ್ಯಕ್ತಿತ್ವವನ್ನು ಡಿಕೋಡ್ ಮಾಡುವ ಶಕ್ತಿ ನಿಮಗೆ ಇದ್ದಿದ್ದರೆ, ಜೀವನವು ತುಂಬಾ ಸಿಂಪಲ್ ಆಗಿರುತ್ತಿತ್ತು ಅಲ್ವಾ,ಇದೆಲ್ಲವೂ ಸುಳ್ಳು ಎಂದು ತೋರಬಹುದು, ಆದರೆ ಪ್ರಪಂಚದಾದ್ಯಂತದ ಮನೋವಿಜ್ಞಾನಿಗಳು ಒಬ್ಬರ ಹಣ್ಣುಗಳ ಆಯ್ಕೆಯನ್ನು ನೋಡುವ ಮೂಲಕ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಡಿಕೋಡ್ ಮಾಡಬಹುದು ಎಂದು ತಿಳಿದರೆ ಆಶ್ಚರ್ಯವಾಗಬಹುದು. ಆದ್ದರಿಂದ, ಹಣ್ಣುಗಳ ಮೇಲಿನ ಪ್ರೀತಿಯು ಜನರ ವ್ಯಕ್ತಿತ್ವವನ್ನು ಹೇಗೆ ವ್ಯಾಖ್ಯಾನಿಸಬಹುದು ಮತ್ತು ಡಿಕೋಡ್ ಮಾಡಬಹುದು ಎಂಬುದನ್ನು ಕಂಡುಹಿಡಿಯಲು ಇಲ್ಲಿದೆ ನೋಡಿ ಟ್ರಿಕ್ಸ್ . ತಿಳಿಯಲು ಮುಂದೆ ಓದಿ!
ಬಾಳೆಹಣ್ಣು (Banana)
ಬಾಳೆಹಣ್ಣು ಒಬ್ಬರ ಸೋಲ್ ಫುಡ್ ಆಗಿದ್ದರೆ, ಅಂತವರು ತುಂಬಾ ಉಲ್ಲಾಸಭರಿತ ಮತ್ತು ಜೋವಿಯಲ್ ಆಗಿರುತ್ತಾರೆ. ಸ್ವಭಾವತಃ ಎಕ್ಸ್‌ಟ್ರಾವರ್ಟ್ ಆದ ಈ ಜನರು ಸಂಬಂಧಗಳನ್ನು ಸಹ ಗೌರವಿಸುತ್ತಾರೆ ಮತ್ತು ಇವರು ಕಾಳಜಿಯ ಸ್ವಭಾವಕ್ಕೆ ಹೆಸರುವಾಸಿ.
ಸೇಬು (Apple)
ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿರಿಸುತ್ತೆ, ಆದರೆ ಇದು ನಿಮ್ಮ ವ್ಯಕ್ತಿತ್ವವನ್ನು ಸಹ ವಿವರಿಸುತ್ತೆ. ಸೇಬುಗಳನ್ನು ಇಷ್ಟಪಡುವ ಜನರು ಹೆಚ್ಚಾಗಿ ಮಹತ್ವಾಕಾಂಕ್ಷೆಯ, ದೃಢನಿಶ್ಚಯ ಮತ್ತು ಪ್ರಾಕ್ಟಿಕಲ್ ವ್ಯಕ್ತಿ ಆಗಿರುತ್ತಾರೆ. ಇವರು ತಮ್ಮ ದಿನಚರಿ ಮತ್ತು ಶಿಸ್ತಿನ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ.
ಮಾವು (Mango)
ಡೈ-ಹಾರ್ಡ್ ಮಾವಿನ ಫ್ಯಾನ್‌ಗಳಾಗಿರುವ ಜನರು ಸಾಮಾನ್ಯವಾಗಿ ತುಂಬಾ ಸ್ಟೈಲಿಶ್, ಆತ್ಮವಿಶ್ವಾಸ (Confidence), ವರ್ಚಸ್ವಿ (Charismatic) ಮತ್ತು ಆಶಾವಾದಿಗಳಾಗಿರುತ್ತಾರೆ. ಹಣ್ಣುಗಳ ರಾಜನಂತೆ, ಇವರು ಸಹ ಜೀವನದಲ್ಲಿ ಸೊಗಸಾದ ವಿಷಯಗಳ ಬಗ್ಗೆ ಅಭಿರುಚಿ ಹೊಂದಿರುತ್ತಾರೆ ಮತ್ತು ಇವರು ಅರ್ಹತೆಗಿಂತ ಕಡಿಮೆ ಯಾವುದಕ್ಕೂ ಎಂದಿಗೂ ಹೊಂದಿಕೊಳ್ಳೋದಿಲ್ಲ!
ಅನಾನಸ್ (Pine apple)
ಅನಾನಸನ್ನು ಪ್ರೀತಿಸುವ ಜನರು ತುಂಬಾ ರೋಮಾಂಚಕ, ವೈಬ್ರೆಂಟ್ ಮತ್ತು ಪರಿಪೂರ್ಣ ವ್ಯಕ್ತಿಯಾಗಿರುತ್ತಾರೆ. ಇವರು ಯಾವಾಗಲೂ ಆಶಾವಾದಿಗಳಾಗಿರುತ್ತಾರೆ ಮತ್ತು ಜೀವನದ ಬಗ್ಗೆ ಸಕಾರಾತ್ಮಕ ವಿಧಾನವನ್ನು ಹೊಂದಿರುತ್ತಾರೆ ಮತ್ತು ಇವರ ಕಂಪನಿ ಸುತ್ತಲಿನ ಯಾರಿಗಾದರೂ ಆರಾಮದಾಯಕವಾಗಬಹುದು.
ಕಿತ್ತಳೆ (Orange)
ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ಇಷ್ಟಪಡುವ ಜನರು ಸೃಜನಶೀಲತೆಯಿಂದ ಆಶೀರ್ವದಿಸಲ್ಪಟ್ಟಿದ್ದಾರೆ ಮತ್ತು ಸಾಮಾನ್ಯವಾಗಿ ತುಂಬಾ ಕಲಾತ್ಮಕ (Artistic) ಮತ್ತು ಅನನ್ಯವಾಗಿರುತ್ತಾರೆ. ಇವರು ಸ್ವಭಾವದಿಂದ ತುಂಬಾ ಸಾಹಸಿಗಳು.
ಹಾಗಾದರೆ, ನಿಮ್ಮ ಸೋಲ್ ಫ್ರೂಟ್ ಯಾವುದು? ಬೇಗ ಬೇಗ ಹೇಳಿ