ಲೈಂಗಿಕ ಸಮಯದಲ್ಲಿ ಕೆಲವು ಜೋಡಿ ಲೈಟ್ ಆನ್‌ ಇಟ್ಟುಕೊಳ್ಳುವುದು ಯಾಕೆ?

Published : May 09, 2023, 06:55 PM IST

ಲೈಂಗಿಕತೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಆದರೆ ಸೆಕ್ಸ್ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಕತ್ತಲೆಯಲ್ಲಿ ಲೈಂಗಿಕತೆ ಹೊಂದಲು ಬಯಸುತ್ತಾರೆ. ಇನ್ನು ಕೆಲವರು ಬೆಳಕಿರಬೇಕೆಂದು ಬಯಸುತ್ತಾರೆ. ಇದಕ್ಕೇನು ಕಾರಣ ?

PREV
17
ಲೈಂಗಿಕ ಸಮಯದಲ್ಲಿ ಕೆಲವು ಜೋಡಿ ಲೈಟ್ ಆನ್‌ ಇಟ್ಟುಕೊಳ್ಳುವುದು ಯಾಕೆ?

ಬಹುತೇಕರು ಸೆಕ್ಸ್ ಎಂದರೆ ಕತ್ತಲೆ ಎಂದೇ ಅಂದುಕೊಂಡಿದ್ದಾರೆ. ಸಾಮಾನ್ಯವಾಗಿ ಲೈಟ್ ಆಫ್‌ ಮಾಡಿ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವುದು ರೂಢಿ. ಯಾಕೆಂದರೆ ಹೆಚ್ಚಿನವರು ಬೆಳಕಿನಲ್ಲಿ ವಿವಸ್ತ್ರರಾಗಲು ಆರಾಮದಾಯಕವಾಗಿರುವುದಿಲ್ಲ. ಆದರೆ ಇನ್ನೂ ಕೆಲವರು ಸೆಕ್ಸ್ ಸಮಯದಲ್ಲಿ ಲೈಟ್ ಆನ್ ಇರಬೇಕೆಂದು ಅಂದುಕೊಳ್ಳುತ್ತಾರೆ.
 

27

ಮಂದವಾಗಿದ್ದರೂ ಸಹ ದೀಪಗಳನ್ನು ಆನ್ ಮಾಡಿ ಲೈಂಗಿಕತೆಗೆ ಆದ್ಯತೆ ನೀಡುವ ಪಾಲುದಾರರಿದ್ದಾರೆ. ಕೆಲವೊಂದು ಜೋಡಿಗಳು ತಾವು ಲೈಟ್ ಆನ್ ಮಾಡಿ ಯಾಕೆ ಲೈಂಗಿಕತೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂಬುದನ್ನು ತಿಳಿಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

37

ನನ್ನ ಹೆಂಡತಿ ಮತ್ತು ನಾನು ನಮ್ಮ ಆಕಾರವನ್ನು ಲೆಕ್ಕಿಸದೆ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಹೀಗಾಗಿ ನಾವು ಲೈಂಗಿಕತೆಯನ್ನು ಹೊಂದುವಾಗ ಒಬ್ಬರನ್ನೊಬ್ಬರು ನೋಡಲು ಇಷ್ಟಪಡುತ್ತೇವೆ. ಅವಳು ಎಂದಿಗೂ ಲೈಟ್ ಆನ್‌ ಆಗಿರುವುದರ ಬಗ್ಗೆ ಕಾಳಜಿ ವಹಿಸಲಿಲ್ಲ ಮತ್ತು ನನ್ನ ದೇಹದ ಬಗ್ಗೆ ನನಗೆ ವಿಶ್ವಾಸವನ್ನು ಮೂಡಿಸಿದಳು, ಆದ್ದರಿಂದ ನಾವು ಸೆಕ್ಸ್ ಸಮಯದಲ್ಲಿ ಲೈಟ್ ಆನ್ ಇರುವ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಜೋಡಿಯೊಂದು ತಿಳಿಸಿದೆ.

47

'ನನ್ನ ಹೆಂಡತಿಯು ಕೆಲವೊಂದು ನಿರ್ಧಿಷ್ಟ ಸ್ಪರ್ಶಗಳನ್ನು ಇಷ್ಟಪಡುತ್ತಾಳೆ. ಅದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ನಾನು ಅವಳಿಗೆ ಸರಿಯಾದ ರೀತಿಯಲ್ಲಿ ಏನು ಮಾಡುತ್ತಿದ್ದೇನೆ ಎಂಬುದನ್ನು ನಾನು ನೋಡಬಹುದು. ಹೀಗಾಗಿ ನಾನು ಲೈಟ್‌ಗಳನ್ನು ಆನ್ ಮಾಡಿ ಲೈಂಗಿಕ ಸಂಬಂಧ ಹೊಂದಲು  ಬಯಸುತ್ತೇನೆ' ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ.

57

'ನನ್ನ ಗೆಳೆಯ ಮತ್ತು ನಾನು ಸಂಭೋಗಿಸುವಾಗ ರಕ್ಷಣೆಯನ್ನು ಬಳಸುವ ಬಗ್ಗೆ ತುಂಬಾ ನಿರ್ದಿಷ್ಟವಾಗಿರುತ್ತೇವೆ. ಕಾಂಡೋಮ್‌ನಲ್ಲಿ ಯಾವುದೇ ನಿಕ್ಸ್ ಇಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಅಲ್ಲದೆ, ನಾವಿಬ್ಬರೂ ಸೆಕ್ಸ್ ಮಾಡುವ ಸ್ಥಳ ಕ್ಲೀನಾಗಿರಬೇಕೆಂದು ಬಯಸುತ್ತೇವೆ. ಹಾಗಾಗಿ ಲೈಟ್ ಆನ್ ಮಾಡಿಟ್ಟುಕೊಳ್ಳುತ್ತೇವೆ' ಎಂದು ಇನ್ನೊಬ್ಬರು ಹೇಳಿದ್ದಾರೆ.

67

"ಭಾವನೆಗಳು ತುಂಬಾ ಮುಖ್ಯ. ಲೈಂಗಿಕತೆಯನ್ನು ಹೊಂದುವಾಗ ಮುಖದ ಭಾವನೆಯನ್ನು ನೋಡಲು ನಾನು ಇಷ್ಟಪಡುತ್ತೇನೆ. ಇದರಿಂದ ಸಂಗಾತಿ ಏನನ್ನು ಇಷ್ಟಪಡುತ್ತಿದ್ದಾರೆ. ಏನನ್ನೂ ಇಷ್ಟಪಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ' ಎಂದು ಇನ್ನೊಂದು ಜೋಡಿ ತಿಳಿಸಿದ್ದಾರೆ.

77

ಮತ್ತೊಂದು ಜೋಡಿ ಮಾತನಾಡಿ 'ಲೈಟ್ ನಮ್ಮ ಮೂಡ್ ಆನ್ ಮಾಡುತ್ತದೆ. ಬೆಳಕು ನಾವಿಬ್ಬರೂ ಖುಷಿಯಿಂದ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ' ಎಂದು ತಿಳಿಸಿದ್ದಾರೆ.

Read more Photos on
click me!

Recommended Stories