ಮನೆಯಲ್ಲಿ Pets ಸಾಕೋದ್ರಿಂದ ಮಕ್ಕಳು ಆಗ್ತಾರೆ ಸ್ಮಾರ್ಟ್!

First Published Jun 22, 2022, 5:27 PM IST

 ಮನೆಯಲ್ಲಿ ಸಣ್ಣ ಮಕ್ಕಳಿದ್ರೆ, ಪೋಷಕರು ಪೆಟ್ಸ್ ತೊಗೊಳ್ಳೊ ಮೊದಲು ಅನೇಕ ಬಾರಿ ಯೋಚಿಸ್ತಾರೆ. ಅವರು ಇದು ರಿಸ್ಕಿ ಎಂದು ಭಾವಿಸ್ತಾರೆ. ಅನೇಕ ಪೋಷಕರು ಮಗು ಸುರಕ್ಷಿತವಾಗಿಡುವ ಕಾಳಜಿಯೊಂದಿಗೆ ಪೆಟ್ಸ್ ಮನೆಗೆ ತರೋದನ್ನೇ ತಪ್ಪಿಸ್ತಾರೆ. ಪ್ರಾಣಿಗಳ ರೋಮ, ಉಗುರು ಅಥವಾ ಹಲ್ಲು ನಿಮ್ಮ ಮಗುವಿಗೆ ಅಪಾಯಕಾರಿ ಎಂದು ಭಾವಿಸುವ ಪೋಷಕರಲ್ಲಿ ನೀವೂ ಒಬ್ಬರಾಗಿದ್ದೀರಾ?

ಪೋಷಕರು ಮಗುವಿನ ಸುರಕ್ಷತೆ ಬಗ್ಗೆ ಯೋಚಿಸ್ತಾರೆ ಮತ್ತು ಅದೇ ಕಾರಣಕ್ಕಾಗಿ ಯಾವುದೇ ಸಾಕುಪ್ರಾಣಿ ಮನೆಯಲ್ಲಿ ಇಟ್ಟುಕೊಳ್ಳೋದಿಲ್ಲ. ಆದ್ರೆ ಅನೇಕಬಾರಿ ಪೆಟ್ಸ್ (Pets) ಮನೆಯಲ್ಲಿ ಸಾಕೋದ್ರಿಂದ  ಮಕ್ಕಳಿಗೆ ಒಳ್ಳೆಯದೇ ಆಗುತ್ತೆ ಎಂದು ನಿಮಗೆ ತಿಳಿದಿದ್ಯಾ? 

ಹೌದು, ಮನೆಯಲ್ಲಿ ಪ್ರಾಣಿಗಳನ್ನು ಸಾಕೋದ್ರಿಂದ ಇದು ಮಗುವಿನ ಮಾನಸಿಕ ಬೆಳವಣಿಗೆಗೆ (Mental growth) ಸಹಾಯ ಮಾಡುತ್ತೆ. ಅಲ್ಲದೇ ಇದರಿಂದ ಹಲವು ಪ್ರಯೋಜನಗಳೂ ಇವೆ. ಹಾಗಾದ್ರೆ ಬನ್ನಿ ಸಾಕುಪ್ರಾಣಿಗಳನ್ನು ಮನೆಯಲ್ಲಿ ಸಾಕೋದ್ರಿಂದ ಮಗುವಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿದುಕೊಳ್ಳೋಣ.

ಮಗುವಿನಲ್ಲಿ ಸಹಾನುಭೂತಿ(Compassion) ಹೆಚ್ಚಿಸುತ್ತೆ

ಮನೆಯಲ್ಲಿ ಸಾಕುಪ್ರಾಣಿಗಳಿದ್ರೆ, ಮಕ್ಕಳು ಅವುಗಳನ್ನು ಪ್ರೀತಿಸಲು ಕಲಿಯುತ್ತಾರೆ. ಪ್ರಾಣಿಗಳ ಬಗ್ಗೆ ಸಹಾನುಭೂತಿಯ ಪ್ರಜ್ಞೆ ಬರುತ್ತೆ. ಇದರಿಂದ ಅವರು ದಿನನಿತ್ಯವೂ ಸಂತೋಷದಿಂದ ಇರಲು ಸಾಧ್ಯವಾಗುತ್ತೆ. 

ಪ್ರಾಣಿಯೊಂದಿಗೆ ವಾಸಿಸೋದು ಮತ್ತು ಅದರ ಅಗತ್ಯಗಳನ್ನು ಅರ್ಥಮಾಡಿಕೊಂಡು, ಅವನು ಬೆಳೆಯುತ್ತಾನೆ. ಇದರಿಂದಾಗಿ ಇತರರ ಬಗ್ಗೆ ಮಗುವಿನಲ್ಲಿ ಸಹಾನುಭೂತಿ ಬೆಳೆಯುತ್ತದೆ, ಅಲ್ಲದೇ ಎಲ್ಲರನ್ನೂ ಸಹ ಪ್ರೀತಿಸಲು(Love) ಸಹಾಯವಾಗುತ್ತೆ. 

ಮಕ್ಕಳು ಜವಾಬ್ದಾರರಾಗುತ್ತಾರೆ Responsible)

ಸಾಕುಪ್ರಾಣಿಗಳನ್ನು ಬೆಳೆಸುವಾಗ ಮಕ್ಕಳು ಜವಾಬ್ದಾರರಾಗುತ್ತಾರೆ. ನಾಯಿ/ಬೆಕ್ಕು ಅಥವಾ ಇನ್ನಾವುದೇ ಪ್ರಾಣಿಗೆ ಯಾವಾಗ ಆಹಾರ, ನೀರು ಮತ್ತು ಪ್ರೀತಿಯ ಅಗತ್ಯವಿದೆ ಎಂದು ಅವರಿಗೆ ತಿಳಿಯುತ್ತೆ.  ಇದರಿಂದ ಅವರಿಗೆ ಜವಾಬ್ಧಾರಿ ಬಗ್ಗೆ ತಿಳಿಯುತ್ತದೆ. 

ಮಕ್ಕಳು ಬೆಳೆದಂತೆ ಈ ವಿಷಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ಅವರು ಇತರರ ಸಣ್ಣ ಸಣ್ಣ ಜವಾಬ್ದಾರಿ ಸಹ ತೆಗೆದುಕೊಳ್ಳುತ್ತಾರೆ. ಮನೆಯ ಹಿರಿಯರಿಗೆ ಕನ್ನಡಕ ಅಥವಾ ಕೋಲು ಬೇಕೆಂದರೆ, ಮಕ್ಕಳು ಅವರಿಗೆ ಸಹಾಯ(Help) ಮಾಡಲು ಕಾತುರದಿಂದ ಮುಂದೆ ಬರ್ತಾರೆ.

ಪೆಟ್ಸ್  ಮಕ್ಕಳಿಗೆ ಥೆರಪಿ(Therapy) ರೀತಿ ಕೆಲಸಮಾಡುತ್ತೆ

ಪೆಟ್ಸ್ ಮಗುವಿನಬೆಸ್ಟ್ ಫ್ರೆಂಡ್ ಆಗಬಹುದು. ಮಗು ಯಾವುದೇ ವಿಷಯದಿಂದ ಖಿನ್ನತೆಗೆ ಒಳಗಾಗಿದ್ರೆ, ಸ್ವಲ್ಪ ಸಮಯ, ಮನೆಯಲ್ಲಿರುವ ಪ್ರಾಣಿಯೊಂದಿಗೆ ಆಟವಾಡಿದರೆ ಸಾಕು ಅವರಿಗೆ ಸಂತೋಷ ಆಗೋದು ಖಚಿತ. ಸಾಕುಪ್ರಾಣಿಗಳೊಂದಿಗೆ ಆಟವಾಡೋದು ಸಹ ಮಗುವಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತೆ.

ಮಕ್ಕಳು ಸೋಷಿಯಲೈಜ್(Socialize) ಆಗ್ತಾರೆ

ಪೆಟ್ಸ್ ಕಾರಣದಿಂದಾಗಿ, ನಿಮ್ಮ ಮಗುವು ಸಮಾಜದ ಉಳಿದ ಮಕ್ಕಳೊಂದಿಗೆ ಬೆರೆಯುತ್ತಾರೆ ಮತ್ತು ಮಕ್ಕಳ ನಡುವಿನ ಸ್ನೇಹ ಬೆಳೆಯುತ್ತೆ. ಮಗುವು ತನ್ನ ವಯಸ್ಸಿನ ಮಕ್ಕಳನ್ನು ಭೇಟಿಯಾದಾಗ, ಔಟ್ ಸ್ಪೋಕನ್ ಮತ್ತು ಬೋಲ್ಡಾಗಿರುತ್ತಾರೆ. ಹಾಗಾಗಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಾಕು ಪ್ರಾಣಿಗಳು ಸಹಕಾರಿ.

click me!