ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಮತ್ತು ಮಲ್ಲಿ ಪಾತ್ರಗಳ ಮೂಲಕ ಜನಪ್ರಿಯರಾದ ನಟ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ, ಇದೀಗ ನಿಜ ಜೀವನದಲ್ಲಿಯೂ ಒಂದಾಗಲು ಸಜ್ಜಾಗಿದ್ದಾರೆ. ಇದೇ ವರ್ಷ ಸರಳವಾಗಿ ವಿವಾಹವಾಗುವುದಾಗಿ ಈ ಜೋಡಿ ತಿಳಿಸಿದ್ದಾರೆ.
ಅಮೃತಧಾರೆಯಲ್ಲಿ ಪೆದ್ದು ಮಲ್ಲಿಯಾಗಿ ಎಲ್ಲರ ಮನಸ್ಸನ್ನು ಗೆದ್ದು ಇದೀಗ ಭಾರ್ಗವಿ ಎಲ್ಎಲ್ಬಿಯಲ್ಲಿ ಭಾರ್ಗವಿ ಆಗಿ ಮಿಂಚುತ್ತಿದ್ದಾರೆ ನಟಿ ರಾಧಾ ಭಗವತಿ. Amurthadhaare Serialನಲ್ಲಿ ಮೋಸ ಮಾಡಿ ಪ್ರೆಗ್ನೆಂಟ್ ಮಾಡಿದ ಜೈದೇವ್ನನ್ನೇ ರಿಯಲ್ ಲೈಫ್ನಲ್ಲಿ ಮದ್ವೆಯಾಗ್ತಿದ್ದಾರೆ ನಟಿ ರಾಧಾ. ಇವರ ಮದುವೆ ಡೇಟ್ ಬಗ್ಗೆ ಇನ್ನೂ ಬಹಿರಂಗಗೊಳ್ಳದಿದ್ದರೂ, ಜೋಡಿ ಆಗಾಗ್ಗೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತದೆ.
27
ಸಿನಿಮಾಕ್ಕೆ ಸಿದ್ಧತೆ
ರಾಧಾ ಅವರು ತಮ್ಮ ಹೊಸ ಚಿತ್ರ ನಾನು ಕರುಣಾಕರಕ್ಕೆ (Nanu Karunakara Movie) ಸಿದ್ಧತೆ ನಡೆಸಿದ್ದರೆ, ಅದೇ ಇನ್ನೊಂದೆಡೆ ಮದುವೆಗೂ ರೆಡಿ ಆಗ್ತಿದ್ದಾರೆ. ಆಗ ರಾಣವ್ ಗೌಡ (Amruthadhaare Jaidev urf Ranav Gowda) ಅವರು, ಇದೇ ವರ್ಷ ಮದುವೆಯಾಗುತ್ತೇವೆ ಎಂದಿದ್ದಾರೆ. ಇದಾಗಲೇ ಡೇಟ್ ಫಿಕ್ಸ್ ಆಗಬೇಕಿತ್ತು. ಆದರೆ ಮದುವೆಗೆ ತುಂಬಾ ತಯಾರಿ ಅಗತ್ಯ ಎನ್ನುವ ಕಾರಣಕ್ಕೆ ಸ್ವಲ್ಪ ಪೋಸ್ಟ್ಪೋನ್ ಮಾಡಿದ್ದೇವೆ. ಆದರೆ ಖಂಡಿತವಾಗಿಯೂ ಇದೇ ವರ್ಷವೇ ಮದುವೆಯಾಗುತ್ತೇವೆ ಎಂದಿದ್ದಾರೆ. ಇನ್ನೇನು ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್ ಕೂಡ ಅಂತಿಮ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ.
37
ಹಳೆ-ಹೊಸ ಮಲ್ಲಿ
ಸದ್ಯ ಅದೇ ರೀತಿಯ ಇನ್ನೊಂದು ಫೋಟೋ ವೈರಲ್ ಆಗಿದೆ. ಅದಕ್ಕೆ ನೆಟ್ಟಿಗರು ತಮಾಷೆಗಾಗಿ ಅಮೃತಧಾರೆಯ ಹಳೆಯ ಮಲ್ಲಿಜೊತೆ ಜೈದೇವ್ ರೊಮಾನ್ಸ್ ಮಾಡುತ್ತಿದ್ದರೆ, ಹೊಸ ಮಲ್ಲಿಯನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾನೆ ಎನ್ನುತ್ತಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
57
ಜೈದೇವ್ ಕುರಿತು
ಅಂದಹಾಗೆ ಜೈದೇವ್ JD ಪಾತ್ರದಲ್ಲಿ ನಟಿಸ್ತಿರೋ ನಟನ ಹೆಸರು ರಾಣವ್ ರಾವ್. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ತುಳಸಿ ಧಾರಾವಾಹಿಯಲ್ಲಿ, ಸುಧಾರಾಣಿಯವರ (Sudharani) ಜೊತೆ ಬಾಲನಟನಾಗಿ ನಟಿಸುವ ಮೂಲಕ ರಾಣವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆವಾಗ ರಾಣವ್ ಆರನೇ ತರಗತಿಯಲ್ಲಿ ಓದುತ್ತಿದ್ದರು. ಬಾಲ್ಯದಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ರಾಣವ್ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿವಹಿಸಿದ್ದೇ ಹೆಚ್ಚು. ಅದೇ ಕಾರಣದಿಂದ ಇವರು ಇಂಜಿನಿಯರಿಂಗ್ ಅರ್ಧದಲ್ಲೇ ಬಿಟ್ಟು, ಮತ್ತೆ ನಟನೆಯತ್ತ ಮುಖ ಮಾಡಿದರು.
67
ಕಿರುತೆರೆಯಲ್ಲಿ ಮಿಂಚಿಂಗ್
ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಣವ್ ಮತ್ತೆ ಹಿಂದಿರುಗಿ ನೋಡೇ ಇಲ್ಲ. ಒಂದಾದ ಮೇಲೆ ಒಂದರಂತೆ ಹಲವು ಧಾರಾವಾಹಿಗಳಲ್ಲಿ ಇವರು ನಟಿಸಿದರು. ಬಿ.ಸುರೇಶ್ ಅವರ 'ಜೀವನದಿ’, ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಕುಮಾರಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ವರಲಕ್ಷ್ಮೀ ಸ್ಟೋರ್ಸ್ , ಮತ್ತೆ ವಸಂತ, ಝೀ ಕನ್ನಡದ ಕಮಲಿ ಧಾರಾವಾಹಿಯಲ್ಲೂ ನಟಿಸುವ ಮೂಲಕ ವೀಕ್ಷಕರ ಮನ ಗೆದ್ದಿದ್ದರು.
77
ಮದುವೆ ಹೇಗಿರುತ್ತೆ?
ಸೆಲೆಬ್ರಿಟಿ ಅಂತ ಬಹಳ ದೊಡ್ಡದಾಗಿ ಮದುವೆ ಆಗುವುದಿಲ್ಲ. ಏಕೆಂದರೆ ನಾವೆಲ್ಲಾ ತುಂಬಾ ಚಿಕ್ಕ ಫ್ಯಾಮಿಲಿಯಿಂದ ಬಂದವರು. ತುಂಬಾ ಸಿಂಪಲ್ ಆಗಿ ಮದುವೆಯಾಗುತ್ತೇವೆ. ಸ್ಥಳ ಇನ್ನೂ ಗೊತ್ತು ಮಾಡಿಲ್ಲ. ಮಾಡಿದ ಕೂಡಲೇ ತಿಳಿಸುತ್ತೇವೆ ಎಂದಿದ್ದಾರೆ. ನಮ್ಮದು ಆಡಂಬರ ಇಷ್ಟ ಪಡದೇ ಇರುವ ಜೋಡಿ. ಅದ್ದರಿಂದ ಸಿಂಪಲ್ ಮದುವೆ ಎಂದಿದ್ದಾರೆ ರಾಧಾ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.