'ಅಣ್ಣಯ್ಯ' ಸೀರಿಯಲ್‌ನ ಪಾರು ಖ್ಯಾತಿಯ ನಟಿ ನಿಶಾ ರವಿಕೃಷ್ಣನ್, ತೆರೆಯ ಮೇಲೆ ಈಗಾಗಲೇ 8 ಬಾರಿ ಮದುಮಗಳಾಗಿದ್ದಾರೆ. ಇದೀಗ 9ನೇ ಬಾರಿಗೆ ಮದುವೆಯಾಗಿದ್ದು, ಈ ಕುರಿತು ಸ್ವತಃ ಅವರೇ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ನಿಜ ಜೀವನದಲ್ಲಿ ಅವಿವಾಹಿತೆಯಾಗಿದ್ದಾರೆ ನಟಿ.
ಪಾರು ಎಂದಾಕ್ಷಣ ಸೀರಿಯಲ್ ಪ್ರೇಮಿಗಳ ಗಮನಕ್ಕೆ ಹೋಗುವುದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್ (Annayya Serial). ಪಾರು ಪಾತ್ರಧಾರಿಯಾಗಿರುವ ನಿಶಾ ರವಿ ಕೃಷ್ಣನ್, ಪಾರು ಆಗುವುದಕ್ಕೂ ಮುನ್ನ ಗಟ್ಟಿಮೇಳದ ರೌಡಿ ಬೇಬಿ ಎಂದೇ ಫೇಮಸ್ ಆದವರು.
26
8 ಬಾರಿ ಮದುವೆ
ಅಂದಹಾಗೆ ಪಾರು ಉರ್ಫ್ ನಟಿ ನಿಶಾ ಅವರು ಇದಾಗಲೇ 8 ಬಾರಿ ಮದುಮಗಳಾಗಿದ್ದು, ಪಾರುವಾಗಿ ಅವರು ಮದುವೆಯಾಗಿದ್ದು 9ನೇ ಬಾರಿ! ಏನಪ್ಪಾ ಇದು ಎಂದು ನೋಡುವುದಾದರೆ, ರಿಯಲ್ ಲೈಫ್ನಲ್ಲಿ ನಟಿ ಇನ್ನೂ ಅವಿವಾಹಿತೆ. ಅವರಿಗೆ ಮದುವೆಯಾಗಲಿಲ್ಲ. ಆದರೆ ಸೀರಿಯಲ್ಗಳಲ್ಲಿ ಇದಾಗಲೇ 8 ಬಾರಿ ಮದುವೆಯಾಗಿದ್ದು, 9ನೇ ಬಾರಿ ಇದೀಗ ಮದುವೆಯಾಗಿರುವ ರೋಚಕ ಘಟನೆಯನ್ನು ನಟಿ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
36
ಮದುವೆ ಎಂದರೆ ಬೇಜಾರು
ಅಣ್ಣಯ್ಯ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಈ ವಿಷಯವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ನನೆ ಇದಾಗಲೇ ಏಳೆಂಟು ಮದ್ವೆಯಾಗಿದೆ ಎಂದಿದ್ದಾರೆ. ಅಷ್ಟಕ್ಕೂ ನಿಶಾ ಕೇವಲ ಕನ್ನಡ ಮಾತ್ರವಲ್ಲದೆ ತೆಲಗು ಸೀರಿಯಲ್ನಲ್ಲಿಯೂ ಆ್ಯಕ್ಟೀವ್ ಇರುವ ಕಾರಣದಿಂದ ಎರಡೂ ಭಾಷೆಗಳ ಸೀರಿಯಲ್ ಸೇರಿ, ಇಷ್ಟೆಲ್ಲಾ ಬಾರಿ ಮದುವೆಯಾಗಿದೆ ಎಂದಿರೋ ನಟಿ, ಅದಕ್ಕಾಗಿಯೇ ಮದ್ವೆ ಎಂದರೆ ಬೇಜಾರು ಆಗಿಹೋಗಿದೆ ಎಂದು ತಮಾಷೆ ಮಾಡಿದ್ದಾರೆ.
ಇನ್ನು ನಟಿಯ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರಿನ್ನೂ ಸಿಂಗಲ್. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್ ಲೈಫ್ನಲ್ಲಿ ಸಿಂಪಲ್ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ.
56
ಮಲಯಾಳಿ ನಟಿ
ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್‌ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.
66
ಕನ್ನಡ-ತೆಲುಗು ಸೀರಿಯಲ್ನಲ್ಲಿ ಸಕ್ರಿಯ
ಐದು ವರ್ಷ ಈ ಸೀರಿಯಲ್ ತೆರೆ ಕಂಡಿದೆ. ಈ ಬಳಿಕ ನಿಶಾ ತೆಲುಗು ಸೀರಿಯಲ್ನಲ್ಲಿ ಕಾಣಿಸಿಕೊಂಡರು. ಕನ್ನಡದ ಅಣ್ಣಯ್ಯದಲ್ಲಿ ಪಾರು ಆಗಿ ಹಾಗೂ ತೆಲಗುಇನ ಅಮ್ಮಯ್ಯಿಗಾರು ಸೀರಿಯಲ್ನಲ್ಲಿಯೂ ನಟಿಸುತ್ತಿದ್ದಾರೆ. ನಿಶಾ ಅವರು ಹುಟ್ಟಿದ್ದು ಬೆಂಗಳೂರೇ. ಆದರೆ, ಮೂಲತಃ ಕೇರಳದವರು. ‘
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.