ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ಬ್ಲೂ ಫಿಲಂಗಳಿಗೆ (blue film) ಅಡಿಕ್ಟ್ ಆಗಿದ್ದಾರೆ,ಯಾಕಂದ್ರೆ ಬ್ಲೂ ಫಿಲಂಗಳನ್ನು ಸುಲಭವಾಗಿ ಇಂಟರ್ನೆಟ್ ನಲ್ಲಿ ನೋಡಬಹುದಾಗಿದೆ. ಆದರೆ ಬ್ಲೂ ಫಿಲಂ ನೋಡೋದರಿಂದ ನಿಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆಯೇ? ಎನ್ನುವ ಪ್ರಶ್ನೆ ಮೂಡದೇ ಇರದು. ಖಂಡಿತಾ ಬೀರುತ್ತೆ. ಪಾರ್ನ್ ಅಥವಾ ಬ್ಲೂ ಫಿಲಂ ನೋಡಿದ ನಂತರ ಜನರು, ಅದೇ ಕಾಲ್ಪನಿಕ ಲೋಕದಲ್ಲಿ ಜೀವಿಸಲು ಆರಂಭಿಸುತ್ತಾರೆ. ಇದರಿಂದ ಜನರು ನಿಜವಾದ ಲೈಂಗಿಕತೆಯನ್ನು ತಪ್ಪಾಗಿ ಗ್ರಹಿಸಲು ಪ್ರಾರಂಭಿಸುತ್ತಾರೆ. ಅಷ್ಟೆ ಅಲ್ಲ ಪಾರ್ನ್ ಸಿನಿಮಾದಲ್ಲಿ ಕಾಣುವುದನ್ನೆ ತಮ್ಮ ಬೆಡ್ ನಲ್ಲೂ ಟ್ರೈ ಮಾಡ್ತಾರೆ. ಇದರಿಂದಾಗಿ ಲೈಂಗಿಕ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ.