Dating Vs Relationship: ಈ ಗ್ಯಾಪಲ್ಲಿ ದೈಹಿಕ ಸಂಪರ್ಕವೂ ಇರುತ್ತಾ?

First Published | Jun 24, 2022, 5:48 PM IST

ಅನೇಕ ಜನರು ಡೇಟಿಂಗ್ (Dating) ಮತ್ತು ರಿಲೇಷನ್‌ಶಿಪ್ (Relationship) ಎರಡೂ ಒಂದೇ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ತಾವು ತಮ್ಮ ಪಾರ್ಟ್ನರ್ ಜೊತೆ ಡೇಟಿಂಗ್ ಮಾಡ್ತಿದ್ದೇವೆ ಮತ್ತು ರಿಲೇಷನ್ಶಿಪ್‌ನಲ್ಲಿದ್ದೇವೆ  ಎಂದು ಜನ ಭಾವಿಸ್ತಾರೆ, ಆದರೆ ಈ ಎರಡು ವಿಷಯ ಮತ್ತು ವರ್ಡ್ಸ್ ಡಿಫರೆಂಟ್ ಆಗಿವೆ. 
 

ಜೋಡಿಗಳಿಬ್ಬರು, ಮೊದಲು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಅದು ನಿಮ್ಮ ಸಂಬಂಧದ ಆರಂಭ, ಹಾಗಾಗಿ ಅವರ ಬಗ್ಗೆ ಹೆಚ್ಚು ಗೊತ್ತಿರೋದಿಲ್ಲ ಮತ್ತು ಈ ಹಂತವನ್ನು ಡೇಟಿಂಗ್ (Dating)ಎಂದು ಕರೆಯಲಾಗುತ್ತೆ. 

ಇಬ್ಬರೂ ಪರಸ್ಪರ ಹೆಚ್ಚು ಬೆರೆಯಲು ಪ್ರಾರಂಭಿಸಿದಾಗ ಮತ್ತು ಪರಸ್ಪರ ಹತ್ತಿರವಾಗಲು ಪ್ರಾರಂಭಿಸಿದಾಗ, ಹೆಚ್ಚು ತಿಳಿಯಲು, ಅರ್ಥ ಮಾಡಿಕೊಳ್ಳಲು ಆರಂಭಿಸಿದಾಗ ಅವರ ನಡುವಿನ ಸಂಬಂಧವು ಸ್ವಲ್ಪ ತೀವ್ರವಾಗುತ್ತೆ. ಈ ಸಮಯದಲ್ಲಿ ಅವರು ರಿಲೇಷನ್ಶಿಪ್ನಲ್ಲಿದ್ದಾರೆ (Relationship)ಎಂದು ಹೇಳಬಹುದು. ಇವೆರಡರ ನಡುವಿನ ವ್ಯತ್ಯಾಸ ತಿಳ್ಕೊಳ್ಳೋಣ.

Tap to resize

ಡೇಟಿಂಗ್ ಮತ್ತು ರಿಲೇಷನ್ಶಿಪ್ ನಡುವಿನ ವ್ಯತ್ಯಾಸ

ನಿಮ್ಮ ಸಂಬಂಧವು ಈಗಷ್ಟೇ ಆರಂಭವಾಗಿದ್ದು, ನಿಮಗೆ ಒಬ್ಬರನ್ನೊಬ್ಬರು ಪರಿಚಯ ಮಾತ್ರವಿದ್ದು, ಒಬ್ಬರನ್ನೊಬ್ಬರು ತುಂಬಾ ಹತ್ತಿರದಿಂದ ತಿಳಿದುಕೊಳ್ಳದಿದ್ದಾಗ, ಅದನ್ನು ಡೇಟಿಂಗ್ ಎಂದು ಕರೆಯಲಾಗುತ್ತೆ. 

ನೀವಿಬ್ಬರು ಪರಿಚಯವಾಗಿ, ಸ್ನೇಹ (Friendship) ಮೂಡಿ, ಒಬ್ಬರ ಬಗ್ಗೆ ಇನ್ನೊಬ್ಬರು ತುಂಬಾನೆ ತಿಳಿದುಕೊಂಡಿರುತ್ತೀರಿ. ನೀವು ಪರಸ್ಪರರ ಆಸಕ್ತಿ ತಿಳಿದುಕೊಳ್ಳಲು ಮಾತ್ರ ಹೆಚ್ಚಿನ ಆಸಕ್ತಿ ಹೊಂದಿದ್ದು, ಈಗಾಗಲೇ ತುಂಬಾನೆ ಹತ್ತಿರವಾಗಿದ್ರೆ ಅದನ್ನು ರಿಲೇಷನ್ಶಿಪ್ ಎಂದು ಕರೆಯಲಾಗುತ್ತೆ.

ನೀವು ಪರಸ್ಪರ ಲಿವ್-ಇನ್ ನಲ್ಲಿ(Live in relationship) ವಾಸಿಸಲು ಪ್ರಾರಂಭಿಸಿದಾಗ, ನೀವು ಮಾನಸಿಕ ಮತ್ತು ದೈಹಿಕವಾಗಿ ಪರಸ್ಪರ ಸಂಪರ್ಕ ಹೊಂದುತ್ತೀರಿ. ಆವಾಗ ನೀವು ರಿಲೇಷನ್ಶಿಪ್ನ್ ಲ್ಲಿರುತ್ತೀರಿ ಎಂದು ಹೇಳಬಹುದು ಮತ್ತು ಅದು  ಡೇಟಿಂಗ್ ಅಲ್ಲ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

ನೀವು ಹೃದಯದಿಂದ ಯಾರೊಂದಿಗಾದರೂ ಕನೆಕ್ಟ್ ಆಗಿರದೇ ಇದ್ದರೆ,  ಪರಸ್ಪರ ಸುಮ್ಮನೆ ಹ್ಯಾಂಗ್ ಔಟ್(Hang out) ಮಾಡುತ್ತಿದ್ದರೆ ಮತ್ತು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ, ಅಥವಾ ಜೊತೆಯಾಗಿ ಡಿನ್ನರ್, ಔಟಿಂಗ್ ಮಾಡುತ್ತಿದ್ದರೆ ಅದನ್ನು ಡೇಟಿಂಗ್ ಎಂದು ಕರೆಯಲಾಗುತ್ತೆ . 

ಆದರೆ  ಹೃದಯದಿಂದ ಮತ್ತು ಭಾವನಾತ್ಮಕವಾಗಿ(Feeling) ನೀವು ಒಟ್ಟಿಗೆ ಇದ್ದಾಗ, ಅದನ್ನು ರಿಲೇಷನ್ಶಿಪ್  ಎಂದು ಕರೆಯಲಾಗುತ್ತೆ. ಇದರಲ್ಲಿ ಇಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧವಾಗಿರುತ್ತೆ. ಡೇಟಿಂಗ್ ಅಲ್ಪಾವಧಿಗೆ ಮತ್ತು ಈ ರಿಲೇಷನ್ಶಿಪ್ ಗಂಭೀರ ಮತ್ತು ಲಾಂಗ್ ಟೈಮ್ (Long time)ಸಂಬಂಧ ಆಗಿರುತ್ತೆ.

ಇದು ಡೇಟಿಂಗ್ ಮತ್ತು ರಿಲೇಷನ್ಶಿಪ್  ನಡುವಿನ ಮುಖ್ಯ ವ್ಯತ್ಯಾಸ(Difference). ಡೇಟಿಂಗ್  ರಿಲೇಷನ್ಶಿಪ್ ನಿಂದ ಬೇರ್ಪಡಿಸುವ ಅಥವಾ ಅದನ್ನು ಅನನ್ಯಗೊಳಿಸುವ ಇತರ ಅನೇಕ ವಿಷಯಗಳಿವೆ. ಅವುಗಳನ್ನ ನೀವು ಅರ್ಥ ಮಾಡಿಕೊಳ್ಳಬೇಕು. 

Latest Videos

click me!