50ನೇ ವಯಸ್ಸಿನಲ್ಲಿ, ನೀವು 25 ನೇ ವಯಸ್ಸಿನವರಂತೆ ಶಕ್ತಿಯನ್ನು (Men Power) ಪಡೆಯಲು ನಿಮ್ಮ ಆಹಾರದಲ್ಲಿ ಬಿಳಿ ಈರುಳ್ಳಿ (Onion) ರಸ, ಜೇನುತುಪ್ಪ, ಶುಂಠಿ (Ginger) ರಸ ಮತ್ತು ತುಪ್ಪವನ್ನು ಮಿಶ್ರಣ ಮಾಡುವ ಮೂಲಕ ಪ್ರತಿದಿನ ಕುಡಿಯಬೇಕು. ಇದನ್ನು ಪ್ರತಿದಿನ ಸೇವಿಸುವುದರಿಂದ ಸ್ಪರ್ಮ್ ಕೌಂಟ್ (sperm count) ಹೆಚ್ಚಾಗುವ ಸಾಧ್ಯತೆ ಇದೆ.
ಲವ್ ಲೈಫ್ ನ್ನು ಹೆಚ್ಚು ರೋಮ್ಯಾಂಟಿಕ್ ಮಾಡಲು ಬೆಳ್ಳುಳ್ಳಿ (garlic) ಪುರುಷರಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತೆ. ರಾತ್ರಿ ಮಲಗುವ ಮೊದಲು ಎರಡು ಬೆಳ್ಳುಳ್ಳಿ ಮೊಗ್ಗುಗಳನ್ನು ತಿನ್ನಿ. ನಂತರ ಸ್ವಲ್ಪ ನೀರು ಕುಡಿಯಿರಿ. ಇದರಿಂದ ಪುರುಷರಲ್ಲಿ ಶಕ್ತಿ ಹೆಚ್ಚುತ್ತದೆ.
ರಾತ್ರಿ ಮಲಗುವ ಮೊದಲು ಒಂದು ಟೀಚಮಚ ನೆಲ್ಲಿಕಾಯಿ ಪುಡಿಯನ್ನು (Amla Powder) ಸೇವಿಸಿ. ಅದರ ನಂತರ ಸ್ವಲ್ಪ ನೀರು ಕುಡಿಯಿರಿ. ಇದು ಮನುಷ್ಯರ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಕಿದ್ದಲ್ಲಿ ನೀವು ನೆಲ್ಲಿಕಾಯಿ ಜ್ಯೂಸ್ ಸಹ ಸೇವಿಸಬಹುದು. ಇದು ಸಹ ಆರೋಗ್ಯಕ್ಕೆ ಉತ್ತಮವಾಗಿದೆ.
ಬಾಳೆಹಣ್ಣು ಮನುಷ್ಯನ ಶಕ್ತಿಯನ್ನು ಹೆಚ್ಚಿಸುವ ಹಣ್ಣಾಗಿದೆ. ಪ್ರತಿದಿನ ಒಂದು ಲೋಟ ಹಾಲಿನೊಂದಿಗೆ ಬಾಳೆಹಣ್ಣು ತಿಂದರೆ, ನೀವು ಅದ್ಭುತ ಶಕ್ತಿ ಪಡೆಯುತ್ತೀರಿ. ಅಷ್ಟೇ ಅಲ್ಲ ಹಾಸಿಗೆಯ ಮೇಲೆ ಸಂಗಾತಿಯ ಮುಂದೆ ನೀವು ಮುಜುಗರಕ್ಕೆ ಒಳಗಾಗುವ ಚಾನ್ಸ್ ಕೂಡ ಇರೋದಿಲ್ಲ.
ಒಣ ಖರ್ಜೂರ ಮತ್ತು ಮಖಾನಾಗಳನ್ನು ಸೇವನೆ ಪುರುಷರ ಶಕ್ತಿ (Men Power)ಹೆಚ್ಚಿಸುತ್ತದೆ. ಇದು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಹೆಚ್ಚಿಸುವ ಗುಣ ಹೊಂದಿದ್ದು, ಪುರುಷರ ಒಟ್ಟಾರೆ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಒಣ ಖರ್ಜೂರ (Dates) ಮತ್ತು ಮಖಾನಾವನ್ನು ಹಾಲಿನೊಂದಿಗೆ ಸೇವಿಸೋದು ನಿಮಗೆ ಶಕ್ತಿ ನೀಡುತ್ತದೆ.
ಬೆಂಡೆಕಾಯಿ (Ladies Finger) ತಿನ್ನೋದ್ರಿಂದಾನೂ ಶಕ್ತಿ ಹೆಚ್ಚಾಗುತ್ತೆ. ಇದಕ್ಕಾಗಿ, ನೀವು ಪ್ರತಿದಿನ 2-4 ಹಸಿ ಬೆಂಡೆಕಾಯಿ (ladies finger) ಅಗಿಯುವ ಮೂಲಕ ತಿನ್ನಬೇಕು, ಇದು ನಿಮಗೆ ಇಷ್ಟವಾಗದೇ ಇರಬಹುದು ಆದ್ರೆ ಇದು ಪುರುಷರ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ.
ಎಳ್ಳನ್ನು ಚಳಿಗಾಲದ ದಿನಗಳಲ್ಲಿ(winter season) ಹೆಚ್ಚಾಗಿ ಬಳಸಲಾಗುತ್ತದೆ. ಭೌತಿಕ ಸಾಮರ್ಥ್ಯ (Physical Energy) ಹೆಚ್ಚಿಸಲು ಈ ಎಳ್ಳು ರಾಮಬಾಣಕ್ಕಿಂತ ಕಡಿಮೆಯಿಲ್ಲ. ಇದಕ್ಕಾಗಿ, ಅರ್ಧ ಕಪ್ ಎಳ್ಳೆಣ್ಣೆಯಲ್ಲಿ ಅದೇ ಪ್ರಮಾಣದ ಸೋರೆಕಾಯಿ ರಸ ಬೆರೆಸಿ ಮತ್ತು ಮಲಗುವ ಮೊದಲು ಈ ಎಣ್ಣೆ ಮಿಶ್ರಣದಿಂದ ತಲೆ ಮತ್ತು ದೇಹವನ್ನು ಮಸಾಜ್ ಮಾಡಿ. ಇದು ನಿಮಗೆ ಶಕ್ತಿ ನೀಡುತ್ತದೆ.
ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ (Sexual Power) ಕಡಿಮೆಯಾಗಲು ದೊಡ್ಡ ಕಾರಣವೆಂದರೆ ಪಿಜ್ಜಾ (Pizza), ಬರ್ಗರ್ (Burger) ಗಳಂತಹ ಜಂಕ್ ಫುಡ್ (Junk food) ಗಳು, ಇದು ಕ್ರಮೇಣ ಮಾನವ ದೇಹವನ್ನು ದುರ್ಬಲಗೊಳಿಸುತ್ತದೆ. ಅದೇ ಸಮಯದಲ್ಲಿ, ತುಪ್ಪ-ಹಾಲು, ಬೀಜಗಳು-ಸಿಹಿತಿಂಡಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನೋದು ಒಳ್ಳೆಯದಲ್ಲ. ಇದು ಬೊಜ್ಜನ್ನು ಹೆಚ್ಚಿಸುತ್ತೆ, ಜೊತೆಗೆ ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ.