ದಶಕವಾದರೂ ರೊಮ್ಯಾಂಟಿಕ್ ಲೈಫ್ ಚೆನ್ನಾಗಿರ್ಬೇಕಂದ್ರೆ ಏನು ಮಾಡಬೇಕು?

First Published | Nov 23, 2023, 11:59 AM IST

ವಯಸ್ಸಾದಂತೆ ನೀರಸವಾಗೋ ದಾಂಪತ್ಯ ಜೀವನದಲ್ಲಿ ರೋಮಾಂಚಕತೆ, ಆಸಕ್ತಿ, ರೊಮ್ಯಾನ್ಸ್ ಹಾಗೇ ಉಳಿಸಬೇಕು ಅಂದ್ರೆ, ನೀವು ಕೆಲವೊಂದು ವಿಷಯಗಳನ್ನು ಅಳವಡಿಸಿಕೊಳ್ಳಲೇಬೇಕು. ಅದಕ್ಕಾಗಿ ನೀವೇನು ಮಾಡಬೇಕು ನೋಡೋಣ. 
 

ಸಂಬಂಧದಲ್ಲಿ ನೀವು ಸಂಪೂರ್ಣವಾಗಿ ನೀರಸವಾಗಿರುವ ಸಂದರ್ಭಗಳೂ ಬರುತ್ತವೆ. ಸಂಬಂಧದಲ್ಲಿ ಯಾವುದೇ ಉತ್ಸಾಹವಿಲ್ಲದಿದ್ದರೆ, ಅಂತಹ ಸಂಬಂಧ ಬೇಗನೇ ಬೇಡವೆನಿಸಿ ಬಿಡುತ್ತೆ. ಇಂತಹ ಸ್ಥಿತಿ ನಿಮ್ಮ ಸಂಬಂಧದಲ್ಲಿ (relationship) ಬಾರದಿರಲು ನೀವು ಕೆಲವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇದು ಸಂಬಂಧದಲ್ಲಿ ಪ್ರೀತಿಯನ್ನು ಹಾಗೇ ಉಳಿಸಿಕೊಳ್ಳುವಂತೆ ಮಾಡುತ್ತದೆ.

ವಯಸ್ಸಾದಂತೆ ಸಂಬಂಧದಲ್ಲಿನ ಸ್ವಾಧ ಕಡಿಮೆಯಾಗುತ್ತಾ ಬರುತ್ತೆ. ಹೆಚ್ಚಿನ ದಂಪತಿ ಇದರ ಬಗ್ಗೆ ದೂರುತ್ತಲೇ ಇರುತ್ತಾರೆ, ಆದರೆ ಅದರ ಹಿಂದಿನ ಕಾರಣವನ್ನು ಕಂಡುಹಿಡಿಯಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ? ಇಲ್ವೇ ಇಲ್ಲ ಅಲ್ವಾ? ದಾಂಪತ್ಯದಲ್ಲಿ ನೀರಸ ಭಾವನೆ, ಪ್ರೇಮ ವಿವಾಹದಲ್ಲೂ (love marriage) ಕೇಳಿಬರುತ್ತದೆ, ಆದ್ದರಿಂದ ವಯಸ್ಸು ಹೆಚ್ಚಾದಂತೆ ನಿಮ್ಮ ವೈವಾಹಿಕ ಜೀವನವನ್ನು (Married Life) ಹೆಚ್ಚು ಆಸಕ್ತಿದಾಯಕವಾಗಿಸಲು, ಈ ವಿಷಯಗಳ ಬಗ್ಗೆ ಗಮನ ಹರಿಸಿ. ಹೀಗೆ ಮಾಡಿದ್ರೆ, ವಯಸ್ಸಾದ್ರೂ ನಿಮ್ಮ ನಡುವಿನ ಪ್ರೀತಿ, ನಂಬಿಕೆ ಕಡಿಮೇನೆ ಆಗಲ್ಲ. 
 

Latest Videos


ಗುಣಮಟ್ಟದ ಸಮಯ (Quality Time)
ನೀವಿಬ್ಬರೂ ಕೆಲಸ ಮಾಡುತ್ತಿದ್ದರೆ, ನಿಸ್ಸಂಶಯವಾಗಿ ಒಟ್ಟಿಗೆ ಸಮಯ ಕಳೆಯಲು ಕಡಿಮೆ ಸಮಯವಿರುತ್ತದೆ, ಹಾಗಾಗಿ ವಾರಾಂತ್ಯದಲ್ಲಿ ಒಟ್ಟಿಗೆ ಗುಣಮಟ್ಟದ ಸಮಯ ಕಳೆಯಲು ಪ್ಲ್ಯಾನ್ ಮಾಡಿ. ಅದು ಮೂವಿ ಆಗಿರಲಿ, ಮನೆಯಲ್ಲಿ ಒಟ್ಟಿಗೆ ಅಡುಗೆ ಆಗಿರಲಿ ಅಥವಾ ವಾರಾಂತ್ಯದ ಪ್ರವಾಸವಾಗಿರಲಿ. ಈ ಸಣ್ಣ ಸಮಯವನ್ನು ಜೊತೆಯಾಗಿ ಉತ್ತಮವಾಗಿ ಕಳೆದ್ರೆ ಸುಂದರ ಜೀವನ ನಿಮ್ಮದಾಗುತ್ತೆ. 

ಸಣ್ಣ ವಿಷಯಗಳನ್ನು ಸಂಭ್ರಮಿಸಿ (celebrate small moment)
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಕಪಲ್ಸ್ ಒಂದು ತಿಂಗಳ ವಾರ್ಷಿಕೋತ್ಸವವನ್ನು (one month anniversary), ಆರು ತಿಂಗಳ ವಾರ್ಷಿಕೋತ್ಸವವನ್ನು ಸೆಲೆಬ್ರೇಟ್ ಮಾಡೋದು ನೋಡೋವಾಗ, ನೀವು ಕಿರಿಕಿರಿಗೊಳ್ಳಬಹುದು, ಆದರೆ ಈ ಸಣ್ಣ ಸಣ್ಣ ವಿಷ್ಯಗಳು ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸಲು ಉತ್ತಮ ಮಾರ್ಗ. ನೀವು ಪ್ರತಿ ದಿನ ಮತ್ತು ತಿಂಗಳನ್ನು ಅವರೊಂದಿಗೆ ಆಚರಿಸಿಕೊಳ್ಳುತ್ತಿದ್ರೆ, ಇದರಿಂದ ನೀವು ಅವರ ಬಗ್ಗೆ ಎಷ್ಟೊಂದು ಪ್ರೀತಿ ಹೊಂದಿದ್ದೀರಿ ಅನ್ನೋದು ಗೊತ್ತಾಗುತ್ತೆ. ಸಣ್ಣ ಪುಟ್ಟ ವಿಷಯಗಳನ್ನು ನೆನಪಿಟ್ಟುಕೊಳ್ಳೊದು ಸಹ ಒಳ್ಳೇಯದೇ. 

ಮಾತನಾಡಿ ಮತ್ತು ಅವರು ಮಾತನಾಡಿದನ್ನು ಕೇಳಿ (Talk and Listen)
ನೀವು ನಿಮ್ಮ ಸಂಗಾತಿಯೊಂದಿಗೆ ಕುಳಿತಿದ್ದರೆ, ಜಗಳವಾಡಲು ನೆಪ ಹುಡುಕುವ ಬದಲು ಅವರೊಂದಿಗೆ ಆರೋಗ್ಯಕರ ಮತ್ತು ಖುಷಿ ಖುಷಿಯಾಗಿ ಮಾತನಾಡಲು ಪ್ರಯತ್ನಿಸಿ. ಇದರಿಂದ ಇಬ್ಬರಿಗೆ ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯವಾಗುತ್ತೆ. ಒಬ್ಬರು ಮಾತನಾಡುವಾಗ ಇನ್ನೊಬ್ಬರು ಕಿವಿಯಾಗಿ, ಎಲ್ಲವೂ ಸುಂದರವಾಗಿರುತ್ತೆ. 

ಕುಳಿತು ಮಾತನಾಡಿದ್ರೆ ಸಂಬಂಧಗಳು ದೂರ ಆಗೋ ಮಾತೇ ಇಲ್ಲ
ಸಂಬಂಧದಲ್ಲಿ ಜಗಳಗಳು ಇರುವುದು ಸಾಮಾನ್ಯ, ಆದರೆ ಸಂಭಾಷಣೆ (communication) ನಿಲ್ಲುವ ಹಂತಕ್ಕೆ ಈ ಜಗಳ ತಲುಪಲು ಬಿಡಬೇಡಿ. ನೀವು ಯಾವುದರ ಬಗ್ಗೆಯಾದರೂ ಕೋಪಗೊಂಡರೆ, ಮಾತನಾಡುವ ಮೂಲಕ ಅದನ್ನು ಪರಿಹರಿಸಿ. ನಿಮ್ಮ ಅಂಶವನ್ನು ನಿಮ್ಮ ಸಂಗಾತಿಗೂ ವಿವರಿಸಲು ಪ್ರಯತ್ನಿಸಿ.  ಇದು ಸಂಬಂಧವನ್ನು ಜೀವಂತವಾಗಿಡಲು ಕೆಲಸ ಮಾಡುತ್ತದೆ. 

ಒಂದು ಮುತ್ತು, ಒಂದು ಅಪ್ಪುಗೆ ಮಿಸ್ ಮಾಡಲೇಬೇಡಿ
ಪ್ರೀತಿಯ ಅಥವಾ ವೈವಾಹಿಕ ಜೀವನದ ಆರಂಭದಲ್ಲಿ ಕಿಸ್ ಮಾಡೋದು, ಹಗ್ (hug and kisses) ಮಾಡೋದು ಎಲ್ಲಾನೂ ಇರುತ್ತೆ, ಆದರೆ ವಯಸ್ಸಾಗುತ್ತಾ ಬಂದಂತೆ ಎಲ್ಲವೂ ಮರೆಯಾಗುತ್ತೆ. ಇದರಿಂದ ಸಂಬಂಧವೂ ನೀರಸವಾಗುತ್ತೆ. ಇದಾಗಬಾರದು ಅನ್ನೋದಾದ್ರೆ ಪ್ರತಿದಿನ ನಿಮ್ಮ ಸಂಗಾತಿಗೆ ಒಂದು ಮುತ್ತು, ಮತ್ತೊಂದು ಹಗ್ ಮಿಸ್ ಮಾಡದೇ ಕೊಡಿ. 
 

click me!