ಅಮ್ಮನಾಗಿ ಮಗಳಿಗೆ ಲೈಂಗಿಕತೆ ಸೇರಿ ಈ ವಿಷ್ಯಗಳ ಬಗ್ಗೆ ಎಚ್ಚರಿಸಲೇ ಬೇಕು!

Published : Nov 21, 2023, 03:43 PM IST

ಹೆಣ್ಣು ಮಕ್ಕಳ ಜೀವನ ಅಷ್ಟೊಂದು ಸುಲಭವಾಗಿರೋದಿಲ್ಲ, ಕೆಲವೊಮ್ಮೆ ಎಲ್ಲವನ್ನೂ ಸಹಿಸಬೇಕಾಗಿ ಬರುತ್ತೆ, ಕೆಲವೊಮ್ಮೆ ಸಾಧ್ಯವೇ ಇಲ್ಲ ಎಂದು ಸುಮ್ಮನಿದ್ದು ಬಿಡಬೇಕು ಅನಿಸಿಬಿಡುತ್ತೆ. ಇಲ್ಲಿ ಕೆಲವೊಂದು ಜೀವನ ಪಾಠದ ಬಗ್ಗೆ ಹೇಳಲಾಗಿದೆ. ಇವುಗಳನ್ನು ಪ್ರತಿಯೊಬ್ಬ ತಾಯಿ, ತನ್ನ ಹೆಣ್ಣು ಮಗಳಿಗೆ ಹೇಳಿ ಕೊಡಲೇಬೇಕು.   

PREV
19
ಅಮ್ಮನಾಗಿ ಮಗಳಿಗೆ ಲೈಂಗಿಕತೆ ಸೇರಿ ಈ ವಿಷ್ಯಗಳ ಬಗ್ಗೆ ಎಚ್ಚರಿಸಲೇ ಬೇಕು!

ಶಾರೀರಿಕವಾಗಿ ಆಕರ್ಷಕವಾಗಿರೋದ್ರಿಂದ (Physical attraction) ಹೆಚ್ಚಿನ ಜನರನ್ನು ತನ್ನತ್ತ ಸೆಳೆಯುವಂತೆ ಮಾಡಬಹುದು ಆದರೆ, ಮಾನಸಿಕವಾಗಿ ಆಕರ್ಷಕವಾಗಿದ್ರೆ ಖಂಡಿತವಾಗಿಯೂ ನೀವು ಸೆಂಟರ್ ಆಫ್ ಅಟ್ರಾಕ್ಷನ್ (Center of Attraction) ಆಗುತ್ತೀರಿ. ಜೊತೆಗೆ ನಿಮ್ಮಲ್ಲಿ ಆತ್ಮವಿಶ್ವಾಸ (Confidence) ಹೆಚ್ಚಾಗುತ್ತೆ. 
 

29

ನಿಮ್ಮನ್ನು ನೀವು ಎಜುಕೇಟ್ (educate yourself) ಮಾಡಿ, ಮನಸ್ಸಿನಲ್ಲಿರುವ ಕೆಟ್ಟ ಯೋಚನೆಗಳನ್ನು ದೂರ ಮಾಡಿ, ನಿಮ್ಮಲ್ಲಿರುವ ಅಭದ್ರತೆ, ಭಯದ ವಿರುದ್ಧ ಹೋರಾಡಿ, ಒಬ್ಬರೇ ಸಂತೋಷವಾಗಿರಲು ಕಲಿಯಿರಿ. ಇದರಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತೆ. 

39

ನೋ ಹೇಳೋದ್ರಲ್ಲಿ ತಪ್ಪೇನಿಲ್ಲ. ಅದಕ್ಕಾಗಿ ವಿವರಣೆ ಕೊಡ ಬೇಕಾದ ಅಗತ್ಯವೇ ಇಲ್ಲ, ಅನ್ನೋದನ್ನು ಮಗಳಿಗೆ ಕಲಿಸಿ ಕೊಡಲೇಬೇಕು. ಯಾಕಂದ್ರೆ, ನೋ ಹೇಳುವಲ್ಲಿಯೇ ಹೆಚ್ಚಿನ ಜನ ಹಿಂದೆ ಸರಿದು ಮತ್ತೆ ಪಶ್ಚಾತ್ತಾಪ (Guilty) ಪಡುತ್ತಾರೆ. ನೀವು ಆಗಲ್ಲ ಎಂದು ಹೇಳಿರೋದರಿಂದ ಎದುರಿನವರಿಗೆ ನೋವಾದ್ರೆ ಅದು ಅವರ ಸಮಸ್ಯೆ, ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. 

49

ನಿಮ್ಮ ದೇಹದ ತೂಕ ಇಳಿಸೋದು (weight loss) ದೊಡ್ಡ ವಿಷಯ ಅಲ್ಲ, ಆದರೆ ನಿಮ್ಮ ಬಗ್ಗೆ ಬೇರೆಯವರು ಏನು ಯೋಚನೆ ಮಾಡ್ತಾರೆ ಅನ್ನೋ ಭಾರ ನಿಮ್ಮ ಮನಸಲ್ಲಿರುತ್ತೆ ಅಲ್ವಾ, ಅದನ್ನ ಇಳಿಸೋದು ತುಂಬಾನೆ ಮುಖ್ಯ. ಆಗ ಮಾತ್ರ ಆತ್ಮ ವಿಶ್ವಾಸ ಹೆಚ್ಚುತ್ತದೆ. 
 

59

ಇನ್ನೊಬ್ಬರಿಗೆ ಯಾವುದು ಮೋಜು (fun) ಅನಿಸುತ್ತೆ, ಅದೇ ನಿಮಗೂ ಅನಿಸಬೇಕು ಎಂದೇನಿಲ್ಲ.. ನೀವು  ಇನ್ನೊಬ್ಬರನ್ನು ಫಾಲೋ ಮಾಡೋದು ಸರಿಯಲ್ಲ.  ಮೋಜು ಮಾಡೋದು ಅಂದ್ರೆ, ಡ್ರಿಂಕ್ಸ್ ಮಾಡೋದು, ಪಾರ್ಟಿ ಮಾಡೋದು ಅಥವಾ ಸೋಶಿಯಲೈಜ್ (Socialize) ಆಗೋದು ಅಲ್ಲ. ಮೋಜು ಅಂದ್ರೆ ಒಬ್ಬರೇ ರಾತ್ರಿ ಕಳಿಯೋದು, ಪುಸ್ತಕ ಓದುತ್ತಾ ಕಳೆದು ಹೋಗೋದು, ವಾಕ್ ಮಾಡೋದು, ಚಿತ್ರ ಬಿಡಿಸೋದು, ಮ್ಯೂಸಿಕ್ ಕೇಳೋದು ಅಥವಾ ನಿಮ್ಮ ಕೆಲಸ ಮಾಡೋದು ಇವೆಲ್ಲವೂ ಮೋಜಿನ ಒಂದು ಭಾಗವೇ. 
 

69

ಮದುವೆಯಾಗೋ ಮುನ್ನ ನಿಮ್ಮ ಸಂಗಾತಿ ಜೊತೆ ಬಿಲ್ ಗಳ ಬಗ್ಗೆ, ಪೇರೆಂಟಿಂಗ್ ಬಗ್ಗೆ, ಬಾಲ್ಯದ ದೌರ್ಜನ್ಯದ ಬಗ್ಗೆ, ಲೈಂಗಿಕ ಜೀವನದ ಬಗ್ಗೆ, ಆರ್ಥಿಕತೆ ಬಗ್ಗೆ, ಕುಟುಂಬದ ಆರೋಗ್ಯ (Family Health), ವಿದ್ಯಾಭ್ಯಾಸ (Education) ಮತ್ತು ಕರಿಯರ್ (career) ಬಗ್ಗೆ ಮಾತನಾಡಬೇಕು. ಕೇವಲ ಪ್ರೀತಿಯೊಂದೇ ಇದ್ದರೆ ಸಾಲದು. 
 

79

15 ರಿಂದ 30 ರ ನಡುವಿನ ಜೀವನವನ್ನು ಗೋಲ್ಡನ್ ಪಿರಿಯೇಡ್ (golden period) ಎನ್ನಬಹುದು. ಈ ಸಮಯದಲ್ಲಿ ನಿಮಗೆ ಬೆಸ್ಟ್ ಫ್ರೆಂಡ್ಸ್ ಸಿಗ್ತಾರೆ, ಕೆಲವರನ್ನು ನೀವು ಕಳೆದುಕೊಳ್ಳಲೂ ಬಹುದು. ಕೆಲವೊಮ್ಮೆ ನೀವು ಮಿಸ್ಟೇಕ್ ಮಾಡಬಹುದು, ಕೆಲವೊಮ್ಮೆ ಅಂಥಹ ತಪ್ಪುಗಳನ್ನು ತಿದ್ದಿ ಸರಿ ಮಾಡಬಹುದು. 
 

89

ಕೆಲವೊಮ್ಮೆ ನೀವು ಬೀಳಬಹುದು, ವಿಫಲವೂ ಆಗಬಹುದು, ಕಲಿಯಬಹುದು, ಅರ್ಥ ಮಾಡಿಕೊಳ್ಳಬಹುದು, ರಿಯಾಲಿಟಿಯನ್ನು ಅರ್ಥಮಾಡಿಕೊಳ್ಳಬಹುದು, ಪ್ರೀತಿಯಲ್ಲಿ ಬೀಳಲೂಬಹುದು, ನಿಮಗೆ ಹರ್ಟ್ ಕೂಡ ಆಗಬಹುದು. ಕೊನೆಗೆ ನಿಮ್ಮನ್ನೇ ನೀವು ಕಳೆದುಕೊಳ್ಳಬಹುದು, ಮತ್ತೆ ಸ್ಟ್ರಾಂಗ್ ಆಗಿ ಎದ್ದು ಸಹ ಬರಬಹುದು. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ್ದು ಏನೆಂದರೆ ಇಂತಹ ಜೀವನವನ್ನು ನೀವು ಎಂಜಾಯ್ ಮಾಡ್ತೀರಾ? ಅಥವಾ ಹಾಳು ಮಾಡ್ತೀರಾ? 

99

ನಿಮ್ಮಲ್ಲೇನೆ ಸಮಸ್ಯೆ ಇದ್ದರೂ, ನೀವು ಯಾವುದೇ ತೊಂದರೆಯಲ್ಲಿದ್ದರೂ ಮಕ್ಕಳು ಆಗುವ ಮುನ್ನ ಆ ಎಲ್ಲಾ ಸಮಸ್ಯೆಗಳಿಂದ ಹೊರ ಬನ್ನಿ, ಇಲ್ಲವಾದರೇ ಮಕ್ಕಳು ನಿಮ್ಮಿಂದ ತೊಂದರೆ ಅನುಭವಿಸುವ ಸಾಧ್ಯತೆ ಜಾಸ್ತಿ ಇದೆ. ಇವೆಲ್ಲವನ್ನೂ ನೀವು ತಿಳಿದುಕೊಂಡರೆ, ನಿಮ್ಮ ಜೀವನ ಖಂಡಿತವಾಗಿಯೂ ಚೆನ್ನಾಗಿರುತ್ತೆ. 

Read more Photos on
click me!

Recommended Stories