ವಿಚ್ಛೇದನಕ್ಕೆ 8760 ಕೋಟಿ ರೂ ಕೇಳಿದ ರೇಮಂಡ್‌ ಬಾಸ್‌ ಗೌತಮ್ ಸಿಂಘಾನಿಯಾ ಮಾಜಿ ಪತ್ನಿ!

ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಸಿಂಘಾನಿಯಾ ಅವರಿಂದ ಬೇರೆಯಾಗಿರುವ ಪತ್ನಿ ನವಾಜ್ ಮೋದಿ ಸಿಂಘಾನಿಯಾ ಅವರು ವಿಚ್ಛೇದನದ ಇತ್ಯರ್ಥದ ಭಾಗವಾಗಿ ಅವರ ಅಂದಾಜು 1.4 ಬಿಲಿಯನ್ ನಿವ್ವಳ ಮೌಲ್ಯದ 75 ಪ್ರತಿಶತವನ್ನು ಬೇಡಿಕೆಯಿಟ್ಟಿದ್ದಾರೆ ಎಂದು  ವರದಿಯಾಗಿದೆ

Raymond boss Gautam Singhania estranged wife Nawaz Modi demand 75 percent of his fortune as settlement gow

ಅಂದರೆ ಪ್ರಸಿದ್ಧ ರೇಮಂಡ್‌ ಕಂಪನಿಯ ಮುಖ್ಯಸ್ಥ ಗೌತಮ್‌ ಸಿಂಘಾನಿಯಾ ಅವರಿಂದ ಇತ್ತೀಚೆಗಷ್ಟೇ ವಿಚ್ಛೇದನ ಪಡೆದು ದೂರವಾಗಿರುವ ಅವರ ಪತ್ನಿ ನವಾಜ್‌ ಮೋದಿ ಸಿಂಘಾನಿಯಾ, ತಮ್ಮ ಮಾಜಿ ಪತಿಯಿಂದ ಸುಮಾರು 8760 ಕೋಟಿ ರು. ಜೀವನಾಂಶ ಕೇಳಿದ್ದಾರೆ ಎಂದು ವರದಿಗಳು ಹೇಳಿವೆ.

ಗೌತಮ್‌ ಸಿಂಘಾನಿಯಾ 11680 ಕೋಟಿ ರು. ಆಸ್ತಿ ಹೊಂದಿದ್ದಾರೆ. ಅದರಲ್ಲಿ ಶೇ.75ರಷ್ಟನ್ನು ಜೀವನಾಂಶವಾಗಿ ನೀಡುವಂತೆ ನವಾಜ್‌ ಕೇಳಿದ್ದಾರೆ. ತಮ್ಮ ಹಾಗೂ ಇಬ್ಬರು ಮಕ್ಕಳಾದ ನಿಹಾರಿಕಾ ಮತ್ತು ನಿಸಾ ಅವರ ಜೀವನ ನಿರ್ವಹಣೆಗಾಗಿ ಈ ಮೊತ್ತ ಕೇಳಿದ್ದಾರೆ ಎನ್ನಲಾಗಿದೆ.


ಈ ಕುರಿತು ಮಾತುಕತೆಗೆ ಒಪ್ಪಿರುವ ಗೌತಮ್‌, ತಮ್ಮ ಆಸ್ತಿಯ ನಿರ್ವಹಣೆ ಹಾಗೂ ವರ್ಗಾವಣೆಗೆ ಟ್ರಸ್ಟ್‌ ಸ್ಥಾಪಿಸುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಆದರೆ ಅದಕ್ಕೆ ನವಾಜ್‌ ಒಪ್ಪಿಲ್ಲ ಎಂದು ಹೇಳಲಾಗಿದೆ. ಏಕೆಂದರೆ ಟ್ರಸ್ಟ್ ಮಾಡಿದ ಬಳಿಕ  ಗೌತಮ್‌ ನಿಧನದ ನಂತರ ಕುಟುಂಬ ಸದಸ್ಯರಿಗೆ ಆಸ್ತಿಯನ್ನು ಉತ್ತರಾಧಿಕಾರವಾಗಿ ಪಡೆಯಲು ಅನುಮತಿಸಲಾಗುತ್ತದೆ. ನವಾಜ್‌ ಈ ಟ್ರಸ್ಟ್‌ನಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ. 

53 ವರ್ಷದ ನವಾಜ್‌ ಫಿಟ್ನೆಸ್‌ ತರಬೇತುದಾರೆಯಾಗಿದ್ದು, ಮುಂಬೈನಲ್ಲಿ ಜಿಮ್‌ ನಡೆಸುತ್ತಿದ್ದಾರೆ. ಬಾಡಿ ಆರ್ಟ್ ಎಂಬ ಹೆಸರಿನಲ್ಲಿ ಹಲವು ಫಿಟ್‌ನೆಸ್ ಸೆಂಟರ್‌ ಹೊಂದಿದ್ದಾರೆ.  ಇದರ ಜೊತೆಗೆ ರೇಮಂಡ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ನವೆಂಬರ್‌ 13ರಂದು  ಗೌತಮ್‌ ಸಿಂಘಾನಿಯಾ (58) ತನ್ನ ಪತ್ನಿ ನವಾಜ್‌ರಿಂದ ವಿವಾಹ ವಿಚ್ಛೇದನ ಪಡೆದುಕೊಂಡಿರುವುದಾಗಿ ತಿಳಿಸಿದ್ದರು. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ ತಿಳಿಸಿದ್ದರು.

ಈ ಬಾರಿಯ ದೀಪಾವಳಿ ಪ್ರತಿಬಾರಿಯಂತೆ ವಿಶೇಷವಾಗಿರುವುದಿಲ್ಲ. ನಾನು ನಮ್ಮ ಪತ್ನಿಯಿಂದ ಬೇರೆಯಾಗುತ್ತಿದ್ದು, ಈವರೆಗೆ ಅವರ ಜೊತೆ ಕಳೆದ 32 ವರ್ಷಗಳು ಅದ್ಭುತ ನೆನಪುಗಳನ್ನು ಅಚ್ಚಳಿಯದೆ ಉಳಿಯುವಂತೆ ಮಾಡಿದೆ. ಪೋಷಕರಾಗಿ ನಮ್ಮ ಮುದ್ದು ಮಕ್ಕಳಾದ ನಿಹಾರಿಕಾ ಮತ್ತು ನಿಸಾ ಅವರ ಕುರಿತು ನಾವು ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ಎಲ್ಲರೂ ನಮ್ಮ ನಿರ್ಧಾರವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಟ್ವೀಟ್‌ ಮಾಡಿ ಸ್ಪಷ್ಟಪಡಿಸಿದ್ದರು.

ಸಿಂಘಾನಿಯಾ ಅವರು 1999 ರಲ್ಲಿ ಸಾಲಿಸಿಟರ್ ನಾದರ್ ಮೋದಿ ಅವರ ಪುತ್ರಿ ನವಾಜ್ ಮೋದಿ ಅವರನ್ನು ವಿವಾಹವಾಗಿದ್ದರು. 8 ವರ್ಷಗಳ ಕಾಲ ಡೇಟಿಂಗ್‌ ಬಳಿಕ ನವಾಜ್‌ಗೆ 29 ವರ್ಷ ವಯಸ್ಸಿದ್ದಾಗ ಗೌತಮ್‌ ಮದುವೆಯಾಗಿದ್ದರು. ಮಕ್ಕಳಿಗಾಗಿ ನಾವಿಬ್ಬರು ಒಳ್ಳೆಯದನ್ನು ಮಾಡಲು ಶ್ರಮಿಸುತ್ತೇವೆ ಎಂದಿದ್ದಾರೆ.

Latest Videos

click me!