ಸ್ನೇಹಿತನನ್ನೇ ಲವ್ ಮಾಡ್ತಿದೀರಾ? ಹಾಗಿದ್ರೆ ಈ ರೀತಿ ಪ್ರಪೋಸ್ ಮಾಡಿ

First Published | Oct 3, 2022, 5:40 PM IST

ಹುಡುಗ ಮತ್ತು ಹುಡುಗಿ ಕೇವಲ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಜನರು ಹೇಳಿದಾಗ, ನೀವು ನಂಬಲಿಲ್ಲ. ಏಕೆಂದರೆ ನಿಮಗೂ ಕೂಡ ಒಬ್ಬ ಸ್ನೇಹಿತನಿದ್ದನು, ಅವನು ಕೇವಲ ಸ್ನೇಹಿತನಾಗಿದ್ದನು. ಆದರೆ ಈಗ ಹಾಗಾಗುತ್ತಿಲ್ಲ. ನೀವು ನಿಮ್ಮ ಸ್ನೇಹಿತನನ್ನು ಪ್ರೀತಿಸುತ್ತಿರುವುದರಿಂದ ಜನರ ಮಾತುಗಳು ನಿಮಗೆ ನಿಜವೆಂದು ತೋರಲು ಪ್ರಾರಂಭಿಸಿವೆ. ಆದರೆ ಆ ಗೆಳೆಯ ಸಹ ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳೋದು ಕಷ್ಟ ಎಂದು ನಿಮಗೆ ಅನಿಸಿದರೆ ಈ ಟಿಪ್ಸ್ ನಿಮಗಾಗಿ.

Boy and girl cannot be just friends ಅನ್ನೋದನ್ನು ಸಿನಿಮಾದಿಂದ ಹಿಡಿದು, ನಿಜ ಜೀವನದಲ್ಲೂ ತುಂಬಾ ಸಲ ಕೇಳಿರುತ್ತೀರಿ. ಇದನ್ನೇ ನೀವು ಸಹ ಹೌದು ಎಂದು ನಂಬಿರುತ್ತೀರಿ. ಆದರೆ ನಿಮಗೆ ನಿಮ್ಮ ಫ್ರೆಂಡ್ ಮೇಲೆ ಲವ್ ಆಗೋದ್ರೆ ಏನು ಮಾಡೋದು? ಒಂದು ವೇಳೆ ಪ್ರೀತಿಯನ್ನು ಸ್ನೇಹಿತನ ಬಳಿ ಹೇಳಿಕೊಂಡ್ರೆ ಅವರು ಕೋಪ ಮಾಡ್ತಾರೆ ಅನ್ನೋ ಟೆನ್ಶನ್ ಇರಲ್ಲ, ಬದಲಾಗಿ, ಆ ಸ್ನೇಹಿತ ದೂರ ಆದ್ರೆ, ಪ್ರೀತೀನೂ ಇರಲ್ಲ, ಸ್ನೇಹಾನೂ ಇರಲ್ಲ ಅನ್ನೋ ಭಯ ನಿಮ್ಮನ್ನು ಕಾಡುತ್ತೆ. 

ನೀವೂ ಕೂಡ ಇದೇ ಭಯದಿಂದ ಫ್ರೆಂಡ್ ಮೇಲೆ ಲವ್ (love with best friend) ಆಗಿದ್ರೂ ಅದನ್ನು ಅವರ ಬಳಿ ಹೇಳದೇ ಸುಮ್ಮನಿದ್ದೀರಾ? ತಪ್ಪು ಮಾಡ್ತಿದ್ದೀರಿ… ನೀವು ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವಾಗ ಕೆಲವೊಂದು ವಿಷ್ಯಗಳ ಬಗ್ಗೆ ಸ್ಪಷ್ಟನೆ ನೀಡಿದ್ರೆ ಆವಾಗ ಅವರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳೋದಿಲ್ಲ, ನಿಮ್ಮ ಸ್ನೇಹನೂ ಮುರಿಯೋದಿಲ್ಲ. ಬದಲಾಗಿ ಅವರು ಕೂಡ ನಿಮ್ಮ ಪ್ರೀತಿಗೆ ಯೆಸ್ ಎಂದು ಹೇಳಬಹುದು ಯಾರಿಗೆ ಗೊತ್ತು? ಹಾಗಿದ್ರೆ ಅದಕ್ಕಾಗಿ ಏನು ಮಾಡಬೇಕು ನೋಡೋಣ.

Tap to resize

ಪ್ರೀತಿಯ ಸುಳಿವುಗಳು 
ನೀವು ಮೊದಲು ಪ್ರೀತಿಯ ಸುಳಿವುಗಳನ್ನು ನೀಡಬೇಕು. ಈ ಸೂಚನೆಯು ಫ್ಲರ್ಟ್ ಮತ್ತು ಸ್ವಲ್ಪ ಹೆಚ್ಚುವರಿ ಕಾಳಜಿಯೂ ಆಗಿರಬಹುದು. ಈ ಬದಲಾವಣೆಗಳನ್ನು ಅವರಿಗೆ ಅರಿವಾಗುವಂತೆ ಮಾಡಿ ಮತ್ತು ಅವರು ಅದನ್ನು ಇಷ್ಟಪಡುತ್ತಾರೆಯೇ ಎಂದು ನೋಡಿ. ನೀವಿಬ್ಬರೂ ಸ್ನೇಹಿತರಾಗಿದ್ದರೆ, ಇದೆಲ್ಲವೂ ಕೆಟ್ಟದಾಗಿ ಕಂಡುಬಂದರೆ, ಅವರು ಖಂಡಿತವಾಗಿಯೂ ನಿಮಗೆ ಹೇಳುತ್ತಾರೆ. ಮತ್ತು ಅದು ಒಳ್ಳೆಯದು ಎಂದು ಅನಿಸಿದರೆ, ನಿಮ್ಮನ್ನು ಅವರು ಸಹ ಪ್ರೀತಿಸುತ್ತಿದ್ದಾರೆ ಅನ್ನೋದನ್ನು ಅರ್ಥ ಮಾಡಿ. 

ನೆಚ್ಚಿನ ಸ್ಥಳದಲ್ಲಿ ಪ್ರಪೋಸ್ ಮಾಡಿ
ನಿಮ್ಮ ಸ್ನೇಹಿತನಿಗೆ ನಿಮ್ಮ ಪ್ರೀತಿಯನ್ನು ತಿಳಿಸಲು ನೀವು ಬಯಸಿದರೆ, ನೀವು ನಿಮ್ಮಿಬ್ಬರ ನೆಚ್ಚಿನ ಸ್ಥಳದಲ್ಲಿ ಭೇಟಿಯಾಗಬೇಕು. ಇದು ನೀವಿಬ್ಬರೂ ಇಷ್ಟಪಡುವ ಸ್ಥಳವಾಗಿರುತ್ತದೆ. ಅಲ್ಲಿ ಬಂದ ಕೂಡಲೇ ಪ್ರಪೋಸ್ (propose) ಮಾಡಬೇಡಿ. ಬದಲಾಗಿ ಅವರ ನಿಮ್ಮ ಫೀಲಿಂಗ್ ಬರಲು ಯಾವಾಗ ಪ್ರಾರಂಭವಾಯಿತು ಅನ್ನೋದನ್ನು ಅವರಿಗೆ ತಿಳಿಸಿ. ಜೊತೆಗೆ ನೀವು ಅವರನ್ನು ಏಕೆ ಇಷ್ಟಪಡುತ್ತೀರಿ ಎಂದು ಅವರಿಗೆ ತಿಳಿಸಿ.

ಲೆಟರ್ ಮೂಲಕ ಲವ್
ಪತ್ರದಲ್ಲಿ ಹೃದಯದ ಭಾವನೆಯನ್ನು ಬರೆಯುವ ಮೂಲಕ ನೀವು ನಿಮ್ಮ ಸ್ನೇಹಿತನಿಗೆ ಪ್ರೀತಿಯನ್ನು ತಿಳಿಸಬಹುದು. ಪತ್ರದಲ್ಲಿ (love letter), ಮನಸ್ಸಿನ ಭಾವನೆಗಳನ್ನೆಲ್ಲಾ ಚೆನ್ನಾಗಿ ಹೇಳಲು ಸಾಧ್ಯವಾಗುತ್ತದೆ ಮತ್ತು ವಿಷಯಗಳನ್ನು ಓದುವ ಮೂಲಕ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಈ ಪತ್ರದೊಂದಿಗೆ ನೀವು ಉಡುಗೊರೆಗಳನ್ನು ಸಹ ನೀಡಬಹುದು. ಅವರು ಸ್ವಲ್ಪ ಸಂತೋಷವಾಗಿರುತ್ತಾರೆ.

ರಾತ್ರಿ ಕರೆ ಮಾಡಿ ಹೇಳಿ
ನೀವು ದಿನವಿಡೀ ಒಟ್ಟಿಗೆ ಇರುತ್ತೀರಿ ಮತ್ತು ಜನರು ನಿಮ್ಮಿಬ್ಬರ ಸ್ನೇಹದ ಬಗ್ಗೆ ಮಾತನಾಡುತ್ತಾರೆ. ಸ್ನೇಹಿತನ ಸಂಬಂಧವು ಎಷ್ಟು ಡೀಪ್ ಆಗಿರುತ್ತೆ ಎಂದರೆ ಅವರ ಮುಂದೆ ನಿಮಗೆ ಪ್ರಪೋಸ್ ಮಾಡಲು ಸಾಧ್ಯ ಆಗೋದಿಲ್ಲ. ಆದ್ದರಿಂದ ನೀವು ರಾತ್ರಿಯ ಸಮಯವನ್ನು ಆಯ್ಕೆ ಮಾಡಿ. ರಾತ್ರಿ ಅವರಿಗೆ ಕಾಲ್ ಮಾಡಿ ನಿಮ್ಮ ಮನಸ್ಸಿನ ಭಾವನೆಯನ್ನು ತಿಳಿಸಿ. ಆ ಸಮಯದಲ್ಲಿ ಅವರಿಗೂ ಅರ್ಥವಾಗಬಹುದು.
 

Image: Getty Images

ಬೇರೆ ಯಾರನ್ನಾದರೂ ಪ್ರೀತಿಸುತ್ತಾರೆಯೆ?
ನೀವು ಸ್ನೇಹಿತರಾಗಿದ್ದರೆ, ನಿಮ್ಮ ಸ್ನೇಹಿತರು ಯಾರನ್ನಾದರೂ ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತದೆ. ಅವರು ಬೇರೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನೀವು ಅವರಿಗೆ ಪ್ರೀತಿಯನ್ನು ವ್ಯಕ್ತಪಡಿಸಬಾರದು. ಯಾಕಂದ್ರೆ ಅವರು ನಿಮ್ಮನ್ನು ಕೇವಲ ಸ್ನೇಹಿತ ಎಂದು ಅಂದುಕೊಂಡಿರುತ್ತಾರೆ. ಅವರು ಯಾರನ್ನೂ ಇಷ್ಟ ಪಡುತ್ತಿಲ್ಲ ಎಂದಾದರೆ, ಸ್ನೇಹದ ಬದಲಾಗಿ ಪ್ರೀತಿಯ ಗಾಳ ಹಾಕೋದಕ್ಕೆ ನೀವು ಆರಂಭಿಸಬಹುದು.
 

Latest Videos

click me!