ಈ ವಿಷ್ಯಗಳನ್ನು ಪುರುಷರು ಯಾರಿಗೂ ಹೇಳಬಾರದು, ಹೇಳಿದ್ರೆ ಮರ್ಯಾದೆ ಹರಾಜು!

First Published | Sep 30, 2022, 4:46 PM IST

ಅನೇಕ ಬಾರಿ ಪುರುಷರು ತಮ್ಮ ಸ್ನೇಹಿತರಿಗೆ ತಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲವನ್ನೂ ಹೇಳುತ್ತಾರೆ. ನಿಮಗೆ ಅವರು ಬೆಸ್ಟ್ ಫ್ರೆಂಡ್ ಆಗಿರಬಹುದು, ಆದರೆ ಹಾಗೆ ಮಾಡುವುದರಿಂದ ನಿಮ್ಮ ಗೌರವ ಕಡಿಮೆಯಾಗುತ್ತದೆ. ನೀವು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದ 5 ವಿಷಯಗಳನ್ನು ನಾವು ನಿಮಗೆ ಹೇಳುತ್ತೇವೆ. ಇವುಗಳನ್ನು ತಿಳಿದುಕೊಂಡು ಮುಂದಿನ ಬಾರಿ ನೀವು ಯಾರ ಬಳಿಯಾದರೂ ಏನಾದರೂ ವಿಷ್ಯ ಹೇಳೊದಕ್ಕೂ ಮುನ್ನ ಸ್ವಲ್ಪ ಯೋಚ್ನೆ ಮಾಡಿ.

ಅಂದಹಾಗೆ, ನಾವು ನಮ್ಮ ಹೃದಯದಲ್ಲಿರುವ ಎಲ್ಲವನ್ನೂ ನಮ್ಮ ಹತ್ತಿರದ ಮತ್ತು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ನಾವು ನಮ್ಮ ಗೌರವ ಮತ್ತು ನಮ್ಮ ಆತ್ಮಗೌರವವನ್ನು ಉಳಿಸಲು ಕೆಲವು ವಿಷಯಗಳನ್ನು ಮರೆಮಾಚಬೇಕಾಗುತ್ತದೆ. ಆದರೆ ಅನೇಕ ಬಾರಿ ಪುರುಷರು ತಮ್ಮ ಮನಸ್ಸಲ್ಲಿ ಇರೋದನ್ನೆಲ್ಲಾ ತಮ್ಮ ಸ್ನೇಹಿತರಿಗೆ, ತಮ್ಮ ಕಚೇರಿ ಸಹೋದ್ಯೋಗಿಗೆ ಹೇಳುತ್ತಾರೆ. ಇದು ತಪ್ಪು.

ಎಲ್ಲಾ ವಿಷ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳೋದು ತಪ್ಪು. ನೀವು ಹೇಳಬಾರದ ವಿಷಯಗಳನ್ನು ಸಹ ಇತರರ ಬಳಿ ಹೇಳಿಕೊಂಡ್ರೆ, ಅವರ ಗೌರವವು (respect) ಕಡಿಮೆಯಾಗುವುದು ಮಾತ್ರವಲ್ಲದೆ, ನಿಮ್ಮನ್ನು ಗೇಲಿ ಮಾಡಲಾಗುತ್ತದೆ. ಇಂದು ನಾವು ನಿಮಗೆ ಅಂತಹ ಐದು ವಿಷಯಗಳನ್ನು ಹೇಳುತ್ತೇವೆ, ಅವುಗಳನ್ನು ನೀವು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು…

Tap to resize

ಯಾವುದೇ ಪುರುಷನು ತನ್ನ ಸ್ನೇಹಿತರೊಂದಿಗೆ ತನ್ನ ಹೆಂಡತಿಯ ಬಗ್ಗೆ ಕೆಟ್ಟದ್ದನ್ನು ಹೇಳಬಾರದು ಅಥವಾ ಅದನ್ನು ತನ್ನ ಸುತ್ತಲಿನ ಜನರಿಗೆ ಅಥವಾ ಕುಟುಂಬ ಸದಸ್ಯರಿಗೆ ಸಹ ಕೆಟ್ಟದ್ದನ್ನು ಹೇಳಬಾರದು. ಇದು ಸಮಾಜದಲ್ಲಿ ಅವರನ್ನು ಗೇಲಿ ಮಾಡಿದಂತೆ ಆಗುತ್ತದೆ ಮತ್ತು ಇದು ನಿಮ್ಮ ವೈವಾಹಿಕ ಜೀವನಕ್ಕೂ (married life) ಒಳ್ಳೆಯದಲ್ಲ.

ಅನೇಕ ಬಾರಿ ಮನುಷ್ಯನು ಕೆಲವು ಕಾರಣಗಳಿಗಾಗಿ ಅವಮಾನವನ್ನು (insult) ಎದುರಿಸಬೇಕಾಗುತ್ತದೆ ಮತ್ತು ಅವನು ಇದನ್ನು ತನ್ನ ಸ್ನೇಹಿತರಿಗೆ ಅಥವಾ ಆಪ್ತರಿಗೆ ಹೇಳುತ್ತಾನೆ, ಆದರೆ ನಿಮ್ಮ ಅವಮಾನದ ಬಗ್ಗೆ ನೀವು ಯಾರಿಗೂ ಎಂದಿಗೂ ಹೇಳಬಾರದು. ಇದು ನಿಮ್ಮ ಸ್ನೇಹಿತರ ದೃಷ್ಟಿಯಲ್ಲಿ ನಿಮ್ಮ ಗೌರವವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೇ ಅವರು ನಿಮ್ಮನ್ನು ಅವಮಾನಿಸುವ ಸಾಧ್ಯತೆ ಇದೆ. 

ಪುರುಷರು ತಮ್ಮ ಸ್ನೇಹಿತರು ಅಥವಾ ಆಪ್ತರಿಗೆ ತಮ್ಮ ಹಣದ ವಿವರಗಳನ್ನು ಎಂದಿಗೂ ನೀಡಬಾರದು ಅಥವಾ ಅವರ ಬಳಿ ಎಷ್ಟು ಹಣವಿದೆ ಅಥವಾ ಅವರ ಬಳಿ ಹಣವೇ ಇಲ್ಲ ಅನ್ನೋದರ ಬಗ್ಗೆ ಮಾಹಿತಿ ನೀಡಬಾರದು.  ಏಕೆಂದರೆ ಜನರು ನಿಮ್ಮ ಬಳಿ ಹೆಚ್ಚು ಹಣವಿದ್ದರೆ ನಿಮ್ಮ ಲಾಭವನ್ನು ಪಡೆಯಬಹುದು ಮತ್ತು ಕಡಿಮೆ ಹಣ ಹೊಂದಿದ್ದರೆ ನಿಮ್ಮನ್ನು ದೂರ ಮಾಡುವ ಸಾಧ್ಯತೆ ಕೂಡ ಇದೆ.

ಪುರುಷರು ತಮ್ಮ ದೌರ್ಬಲ್ಯಗಳನ್ನು ಎಂದಿಗೂ ಯಾರಿಗೂ ಹೇಳಬಾರದು. ಯಾಕಂದ್ರೆ ನೀವು ನಿಮ್ಮ ವೀಕ್ ನೆಸ್ (weakness)ಬಗ್ಗೆ ಹೇಳಿದಂತೆಲ್ಲಾ, ಜನರು ನಿಮ್ಮ ದೌರ್ಬಲ್ಯದ ಲಾಭವನ್ನು ಪಡೆಯಬಹುದು ಮತ್ತು ನಿಮ್ಮನ್ನು ನಿಗ್ರಹಿಸಲು ಮತ್ತು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು.

ಪುರುಷರು ತಮ್ಮ ಮನೆಯ ಜಗಳಗಳನ್ನು ಯಾರ ಬಳಿಯೂ ಹೇಳಬಾರದು. ಇದು ನಿಮ್ಮ ಸ್ವಂತ ಮನೆಯ ಮೇಲೆ ನಿಮಗೆ ನಿಯಂತ್ರಣವಿಲ್ಲ ಎಂದು ಜನರು ಭಾವಿಸುವಂತೆ ಮಾಡುತ್ತದೆ, ಇದರಿಂದ ಬೇರೆಯವರಿಗೆ ನಿಮ್ಮ ಮೇಲೆ ಒಳ್ಳೆಯ ಭಾವನೆ ಬರೋದಿಲ್ಲ. ಅಲ್ಲದೇ, ಜನರು ನಿಮ್ಮನ್ನು ದುರ್ಬಲ ಮತ್ತು ನಿಷ್ಪ್ರಯೋಜಕ ಎಂದು ಭಾವಿಸಲು ಪ್ರಾರಂಭಿಸುತ್ತಾರೆ.

Latest Videos

click me!