ಅಸೂಯೆಯಿಂದ ನಮ್ಮನ್ನು ಕೆಳಗೆ ಇಳಿಸಲು ಪ್ರಯತ್ನಿಸುವವರ ಬಲೆಯಿಂದ ಪಾರಾಗಲು ಏನ್ ಮಾಡ್ಬೇಕು?

Published : May 13, 2026, 11:08 PM IST

How to handle jealousy from friends: ನಾವು ಬೆಳೆಯುವುದನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುವವರು ಬಹಳ ಮಂದಿ ಇರುತ್ತಾರೆ. ಅಸೂಯೆಯಿಂದ ನಮ್ಮನ್ನು ಕೆಳಗೆ ಎಳೆಯಲು ಪ್ರಯತ್ನಿಸುತ್ತಾರೆ. ಅವರ ಬಲೆಯಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?. 

PREV
13
ಇಂಥವರಿಂದ ಪಾರಾಗುವುದು ಹೇಗೆ?
ಕೆಟ್ಟ ದೃಷ್ಟಿಗೆ ಕಲ್ಲೇ ಪುಡಿಯಾಗುತ್ತೆ ಅಂತ ಹಿರಿಯರು ಸುಮ್ಮನೆ ಹೇಳಿಲ್ಲ. ನಾವು ಖುಷಿಯಾಗಿದ್ದರೂ, ಜೀವನದಲ್ಲಿ ಬೆಳೆದರೂ ಸಹಿಸದ ಜನ ಇರುತ್ತಾರೆ. ಅದರಲ್ಲೂ ನಮ್ಮ ಸಂಬಂಧಿಕರೇ ನಮ್ಮನ್ನು ಕೆಳಗೆ ಎಳೆಯಲು ನೋಡುತ್ತಾರೆ. ನಮ್ಮ ಮುಂದೆ ನಮ್ಮ ಗೆಲುವನ್ನು ಸಂಭ್ರಮಿಸಿದಂತೆ ನಟಿಸುತ್ತಾರೆ, ಆದರೆ ಮನಸ್ಸಿನಲ್ಲಿ ನಾವು ಸೋಲಬೇಕೆಂದು ಬಯಸುತ್ತಾರೆ. ಇಂಥವರಿಂದ ಪಾರಾಗುವುದು ಹೇಗೆಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಬನ್ನಿ ತಿಳಿಯೋಣ.
23
ಪ್ರತಿಕ್ರಿಯಿಸಬೇಡಿ
ನಮ್ಮ ಏಳಿಗೆಯನ್ನು ಸಹಿಸದ ಸಂಬಂಧಿಕರು ನಮ್ಮನ್ನು ಅವಮಾನಿಸಲು ಅಥವಾ ನೋಯಿಸಲು ಪ್ರಯತ್ನಿಸುತ್ತಾರೆ. ಅಂತಹವರ ಮಾತುಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಡಿ. ಕೋಪ ಬಂದರೂ ಅದನ್ನು ಹತ್ತಿಕ್ಕುವುದು ಉತ್ತಮ ಎಂದು ಚಾಣಕ್ಯ ಹೇಳುತ್ತಾರೆ. ಅವರ ಮಾತುಗಳಿಗೆ ಮೌನವಾಗಿ ನಗುತ್ತಾ ಮುಂದೆ ಸಾಗಿ. ನಿಮ್ಮ ಮೌನವೇ ಅವರ ಸೋಲಾಗುತ್ತದೆ. ನಿಮ್ಮ ವ್ಯಾಪಾರ ಅಥವಾ ಉದ್ಯೋಗದಲ್ಲಿ ಲಾಭವಾದರೆ ಆ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
33
ವಾದಿಸಬೇಡಿ
ಅನೇಕರು ನಮ್ಮನ್ನು ಕೆರಳಿಸಿ ಖುಷಿಪಡುತ್ತಾರೆ. ಅವರು ಹೇಳಿದ್ದು ಸುಳ್ಳು ಎಂದು ವಾದಿಸುವ ಅಗತ್ಯವಿಲ್ಲ. ಅತಿಯಾದ ವಿನಯ ಬೇಡ, ಕೆಲವೊಮ್ಮೆ ನಮ್ಮ ಶಾಂತ ಸ್ವಭಾವವನ್ನು ದೌರ್ಬಲ್ಯವೆಂದು ತಿಳಿಯುತ್ತಾರೆ. ನೀವು ಅಂದುಕೊಂಡ ಕೆಲಸ ಮುಗಿಯುವವರೆಗೂ ಯಾರಿಗೂ ಹೇಳಬೇಡಿ. ನಿಮ್ಮ ಯಶಸ್ಸೇ ಎಲ್ಲದಕ್ಕೂ ಉತ್ತರ ನೀಡುತ್ತದೆ. ಅತಿಯಾದ ಸಲಿಗೆ ಅಗೌರವಕ್ಕೆ ಕಾರಣವಾಗುತ್ತದೆ. ಎಲ್ಲರಿಗೂ, ಯಾವಾಗಲೂ ಲಭ್ಯವಿದ್ದರೆ ಬೆಲೆ ಕಳೆದುಕೊಳ್ಳುತ್ತೀರಿ. ಹಾಗಾಗಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories