ಏನಮ್ಮಾ Trisha Krishnan ಇದು? ಆಗ ಆ ನಟನ ಜೊತೆ- ಈಗ ವಿಜಯ್ ಜೊತೆ: ನಡುವೆ ಉದ್ಯಮಿ ಜೊತೆ

Published : May 13, 2026, 06:28 PM IST

ನಟಿ ತ್ರಿಷಾ ಕೃಷ್ಣನ್ ಸದ್ಯ ದಳಪತಿ ವಿಜಯ್ ಜೊತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಆದರೆ ವಿಜಯ್‌ಗಿಂತ ಮೊದಲು, ತ್ರಿಷಾ ಅವರು ನಟ ರಾಣಾ ದಗ್ಗುಬಾಟಿ ಜೊತೆಗಿನ ದಶಕದ ಸಂಬಂಧ ಮತ್ತು ಉದ್ಯಮಿಯೊಂದಿಗೆ ಮುರಿದುಬಿದ್ದ ನಿಶ್ಚಿತಾರ್ಥದಂತಹ ಹಲವು ಏಳುಬೀಳುಗಳನ್ನು ಕಂಡಿದ್ದರು. ಅವರ ಸಂಬಂಧಗಳ ಹಿಂದಿನ ಕಥೆ ಇಲ್ಲಿದೆ.

PREV
16
ಟ್ರೆಂಡಿಂಗ್​ನಲ್ಲಿ ತ್ರಿಷಾ ಕೃಷ್ಣನ್​

ನಟ ದಳಪತಿ ಜೋಸೆಫ್​ ವಿಜಯ್​ ಅವರು ತಮಿಳುನಾಡಿನಲ್ಲಿ ಇತಿಹಾಸ ಬರೆದ ಬೆನ್ನಲ್ಲೇ ವಿಜಯ್​ ಜೊತೆ ಹೆಚ್ಚು ಟ್ರೆಂಡಿಂಗ್​ನಲ್ಲಿ ಇರುವಾಕೆ ವಿಜಯ್​ ಸ್ನೇಹಿತೆ ತ್ರಿಷಾ ಕೃಷ್ಣನ್​ (Trisha Krishnan) ಭಾರಿ ಚರ್ಚೆಯಲ್ಲಿ ಇದ್ದಾರೆ. ಅತ್ತ ವಿಜಯ್​ ತಮ್ಮ ಸುದೀರ್ಘ ದಾಂಪತ್ಯವನ್ನು ಕೊನೆಗೊಣಿಸುವ ಮುನ್ನವೇ ಮತ್ತೆ ಎಂಟ್ರಿ ಕೊಟ್ಟಿದ್ದ ತ್ರಿಷಾ ಎಲ್ಲರ ಕಣ್ಣು ಕುಕ್ಕಿಸುತ್ತಿದ್ದಾರೆ. ಖುಲ್ಲಂ ಖುಲ್ಲಾ ಆಗಿಯೇ ತಮ್ಮ ಸಂಬಂಧ ಒಪ್ಪಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.

26
ಅ ನಟನ ಜೊತೆ ಸಂಬಂಧ

ಹಾಗಾದ್ರೆ ತ್ರಿಷಾ ಕೃಷ್ಣನ್​ ಮೊದಲಿನಿಂದಲೂ ವಿಜಯ್​ ಜೊತೆ ಸಂಬಂಧದಲ್ಲಿ ಇದ್ರಾ ಎಂದರೆ ಅಲ್ಲವೇ ಅಲ್ಲ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಹೆಸರು ಬೇರೆ ಬೇರೆಯವರ ಜೊತೆ ಥಳಕು ಹಾಕಿಕೊಳ್ಳುವುದು ಇದ್ದೇ ಇದೆ. ಆದರೆ ತ್ರಿಷಾ ಕೃಷ್ಣನ್​ ಸ್ಟೋರಿ ಸ್ವಲ್ಪ ವಿಭಿನ್ನ. ನಟಿ ಖ್ಯಾತ ನಟ ರಾಣಾ ದಗ್ಗುಬಾಟಿ ಜೊತೆ ದಶಕದವರೆಗೆ ಸಂಬಂಧದಲ್ಲಿ ಇದ್ದರು.

36
ಹಂತ ಮೀರಿದ್ದ ಫ್ರೆಂಡ್​ಷಿಪ್​

ಇದನ್ನು ಜೋಡಿ ಬಹಿರಂಗಪಡಿಸಿತ್ತು. ಅದು ಒಂದು ಹಂತವನ್ನು ಮೀರಿಯೇ ಹೋಗಿತ್ತು. ಹಲವಾರು ದೇಶವನ್ನೂ ಒಬ್ಬರೇ ಸುತ್ತಿ ಬಂದಿದ್ದಾರೆ ಎಂದೂ ಹೇಳಲಾಗುತ್ತಿದೆ. ಇವರಿಬ್ಬರ ಜೋಡಿಗೆ ಫ್ಯಾನ್ಸ್​ ಫಿದಾ ಕೂಡ ಆಗಿತ್ತು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಸುದ್ದಿ ಕೂಡ ಕಾಲಿವುಡ್​ನಲ್ಲಿ ಹರದಾಡಿತ್ತು.

46
ನಟ ಹೇಳಿದ್ದೇನು?

ಆದರೆ, ಅದ್ಯಾಕೋ ಗೊತ್ತಿಲ್ಲ, ಜೋಡಿ ಬ್ರೇಕಪ್​ ಮಾಡಿಕೊಂಡಿತು. ಅವರ ಸಂಬಂಧ ವಿಫಲವಾದ ನಂತರವೂ ಅವರು ಉತ್ತಮ ಸ್ನೇಹಿತರಾಗಿಯೇ ಇದ್ದೇವೆ ಎಂದು ಇಬ್ಬರೂ ಸ್ಟೇಟ್​ಮೆಂಟ್​ ಬೇರೆ ಕೊಟ್ಟಿದ್ರು! ಕಾಫಿ ವಿತ್ ಕರಣ್ ಸೀಸನ್ 6 ರಲ್ಲಿ ಎಸ್.ಎಸ್. ರಾಜಮೌಳಿ ಮತ್ತು ಪ್ರಭಾಸ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆಗ ಇದೇ ಪ್ರಶ್ನೆ ಅವರಿಗೆ ಎದುರಾಗಿದ್ದಾಗ, "ಅವಳು ಒಂದು ದಶಕದಿಂದ ನನ್ನ ಸ್ನೇಹಿತೆ. ನಾವು ಬಹಳ ಸಮಯದಿಂದ ಸ್ನೇಹಿತರಾಗಿದ್ದೇವೆ ಮತ್ತು ಡೇಟಿಂಗ್ ಕೂಡ ಮಾಡಿದ್ದೇವೆ. ಸದ್ಯ ಬೇರೆ ಬೇರೆಯಾಗಿದ್ದೇವೆ ಎಂದಿದ್ದರು!

56
ಉದ್ಯಮಿ ಜೊತೆ ಎಂಗೇಜ್​ಮೆಂಟ್​

ಆ ಬಳಿಕ ಮಿಲೇನಿಯರ್​ ಉದ್ಯಮಿ ಜೊತೆ ತ್ರಿಷಾ ಕೃಷ್ಣನ್​ ಎಂಗೇಜ್​ಮೆಂಟ್​ ಆಗಿ ಮುರಿದುಬಿತ್ತು. ಇದಕ್ಕೆ ಅಸಲಿ ಕಾರಣ ಏನೋ ಗೊತ್ತಿಲ್ಲ. ಆದರೆ ತ್ರಿಷಾ ಮಾತ್ರ, ಅವನು ನನ್ನ ನಟನೆ ಒಪ್ಪಲಿಲ್ಲ, ನಾನು ನಟಿಯಾಗಿ ಮುಂದುವರೆಯಲು ಅವನಿಗೆ ಇಷ್ಟವಿರಲ್ಲ. ಅದಕ್ಕೇ ನಾನು ಸಂಬಂಧ ಮುರಿದುಕೊಂಡೆ ಎಂದು ಹೇಳಿದ್ದರು! ಎಂಗೇಜ್​ಮೆಂಟ್​ ಆಗುವ ಮೊದಲು ಇವೆಲ್ಲಾ ಮಾತುಕತೆ ನಡೆದಿರಲಿಲ್ಲವೇ ಎನ್ನುವ ಅನುಮಾನ ಆಕೆಯ ಫ್ಯಾನ್ಸ್​ಗೆ ಇನ್ನೂ ಕಾಡುತ್ತಲೇ ಇದೆ.

66
ಕೊನೆಗೆ ಸಿಕ್ಕವರೇ ವಿಜಯ್​

ಇರಲಿ ಬಿಡಿ. ಆಮೇಲೆ ಸಿಕ್ಕವರೇ ದಳಪತಿ ಫಿಲ್ಮ್​ ಮೂಲಕ ಖ್ಯಾತಿಯ ಉತ್ತುಂಗ ಏರಿದ್ದ ಹಾಲಿ ಸಿಎಂ ಜೋಸೆಫ್​ ವಿಜಯ್​. ಮದ್ವೆಯಾಗಿ ಇಬ್ಬರು ಮಕ್ಕಳು ಇದ್ರೆ ಏನಂತೆ, ತ್ರಿಷಾ ಮತ್ತು ವಿಜಯ್​ ಸ್ನೇಹಿತರಾದರು. ಬಳಿಕ ಏನೇನಾಯ್ತು ಎನ್ನುವುದು ಗೊತ್ತೇ ಇದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories