ಸಂಬಂಧದಲ್ಲಿರುವ ಪ್ರತಿಯೊಬ್ಬರೂ ಕೆಟ್ಟವರಾಗಿರೋದಿಲ್ಲ. ನೈತಿಕತೆ, ಮೌಲ್ಯಗಳು ಮತ್ತು ನಿಜವಾದ ಪ್ರೀತಿಯೊಂದಿಗೆ ಬಲವಾದ ಸಂಬಂಧಗಳನ್ನು ರೂಪಿಸುವ ಉತ್ತಮ ಜನರಿದ್ದಾರೆ. ಅವರು ಎಲ್ಲವನ್ನೂ ಅರ್ಥ ಮಾಡಿಕೊಂಡು, ಉತ್ತಮ ಸಂಬಂಧ (relationship) ಹೊಂದಲು ಸದಾ ಉತ್ಸುಕರಾಗಿರುತ್ತಾರೆ. ಈ ರೀತಿಯ ಜನರು ಸಂಬಂಧಗಳಲ್ಲಿ ತುಂಬಾ ಚಿಂತನಶೀಲರಾಗಿರುತ್ತಾರೆ. ಉತ್ತಮ ಪುರುಷರು ಸಂಬಂಧಗಳಲ್ಲಿ ಎಂದಿಗೂ ಮಾಡದ ಕೆಲವು ವಿಷಯಗಳು ಯಾವುವು ಅನ್ನೋದನ್ನು ನೋಡೋಣ.
ಯಾವತ್ತೂ ನಿಮ್ಮ ಪ್ರೈವೆಸಿಯನ್ನು ಹಾಳು ಮಾಡೋದಿಲ್ಲ: ಒಳ್ಳೆಯ ಹುಡುಗರು ಯಾವತ್ತೂ ನಿಮ್ಮ ಪ್ರೈವೆಸಿಯನ್ನು (privacy) ಹಾಳು ಮಾಡಲು ಇಷ್ಟಪಡೋದಿಲ್ಲ. ಅವನು ನಿಮಗೆ ಸ್ಪೇಸ್ ಮತ್ತು ಸಮಯ ನೀಡುತ್ತಾನೆ. ಅವನು ಎಂದಿಗೂ ನಿಮ್ಮ ಫೋನ್ ಚೆಕ್ ಮಾಡಲ್ಲ. ಅಥವಾ ನಿಮ್ಮ ಮೆಸೇಜ್ ಗಳನ್ನು ಓದುವುದಿಲ್ಲ. ಇದರ ಅರ್ಥವೇನೆಂದರೆ ಅವನು ನಿಮ್ಮನ್ನು ಸಂಪೂರ್ಣವಾಗಿ ನಂಬುತ್ತಾನೆ ಮತ್ತು ತನ್ನ ಹೃದಯದಲ್ಲಿ ನಿಮಗೊಂದು ವಿಶೇಷ ಸ್ಥಾನ ನೀಡುತ್ತಾನೆ.
Image: Getty Images
ನಿಮ್ಮ ಲುಕ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡೋದಿಲ್ಲ: ಒಬ್ಬ ಒಳ್ಳೆಯ ವ್ಯಕ್ತಿ ನಿಮ್ಮ ಲುಕ್ ಬಗ್ಗೆ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ. ನೀವು ಹೇಗಿದ್ದೀರೋ ಹಾಗೆ ಅವರು ನಿಮ್ಮನ್ನು ಸ್ವೀಕರಿಸುತ್ತಾರೆ. ನೀವು ಹೇಗೆ ಕಂಡರೂ ಅವರು ನಿಮ್ಮನ್ನು ಇಷ್ಟಪಡುತ್ತಾರೆ. ನಿಮ್ಮ ಆತ್ಮ ಗೌರವಕ್ಕೆ (self respect) ಪೆಟ್ಟು ಬೀಳುವಂತಹ ಯಾವುದೇ ರೀತಿಯ ಕೆಲಸ ಮಾಡೋದಿಲ್ಲ.
ನಿಮ್ಮ ನಿರ್ಧಾರವನ್ನು ಗೌರವಿಸುತ್ತಾರೆ: ಒಬ್ಬ ಉತ್ತಮ ಸಂಗಾತಿ ಎಂದರೆ ನೀವು ನಿಜವಾಗಿಯೂ ಏನನ್ನಾದರು ಬಯಸಿದ್ರೆ, ಅದನ್ನು ಮಾಡೋದ್ರಿಂದ ಅವರು ನಿಮ್ಮನ್ನು ತಡೆಯೋದಿಲ್ಲ. ಅವರು ನಿಮ್ಮ ನಿರ್ಧಾರವನ್ನು ಬೆಂಬಲಿಸದಿರಬಹುದು ಆದರೆ ಅವರು ಖಂಡಿತವಾಗಿಯೂ ಅದನ್ನು ಗೌರವಿಸುತ್ತಾರೆ. ನೀವು ಅವರಿಂದ ಎಂದಿಗೂ ನಿರಾಶೆಗೊಳ್ಳುವುದಿಲ್ಲ, ಅವರಿಂದ ಸ್ಫೂರ್ತಿ ಮತ್ತು ಪ್ರೋತ್ಸಾಹದ ಮಾತುಗಳನ್ನು ಮಾತ್ರ ಪಡೆಯುತ್ತೀರಿ.
ಯೋಗ್ಯತೆಯನ್ನು ಸಾಬೀತುಪಡಿಸಬೇಕಾಗಿಲ್ಲ: ನೀವು ಎಷ್ಟು ಅರ್ಹರು ಎಂದು ಒಬ್ಬ ಒಳ್ಳೆಯ ವ್ಯಕ್ತಿಗೆ ತಿಳಿಯುತ್ತದೆ. ಅವನಿಗಾಗಿ ನಿಮ್ಮ ಯೋಗ್ಯತೆಯನ್ನು ಸಾಬೀತುಪಡಿಸುವ ಅಗತ್ಯ ಇರೋದಿಲ್ಲ. ಏಕೆಂದರೆ ಅವನು ನಿಮ್ಮನ್ನು ಗೌರವಿಸುತ್ತಾನೆ (respects you). ನೀವು ಏನು ಅನ್ನೋದನ್ನು ನಿಮ್ಮ ಸಂಗಾತಿ ಮುಂದೆ ಸಾಬೀತುಪಡಿಸಬೇಕಾಗಿ ಬಂದ್ರೆ ಅಂತಹ ಸಂಬಂಧದಿಂದ ಹೊರ ಬರೋದೇ ಬೆಸ್ಟ್.
ಭವಿಷ್ಯದ ಮಾತುಕತೆ: ರಿಲೇಶನ್ ಶಿಪ್ ನಲ್ಲಿ ಇದ್ದೀರಿ ಅಂದ್ರೆ, ಎಷ್ಟೊಂದು ಪ್ರಶ್ನೆಗಳು ಮೂಡೋದು ಸಹಜ. ನಮ್ಮ ಸಂಬಂಧ ಎಲ್ಲಿವರೆಗೂ ಮುಂದುವರೆಯಬಹುದು? ಮದುವೆ ಆಗೋದು ಸಾಧ್ಯಾನಾ? ಭವಿಷ್ಯದಲ್ಲಿ (future planning) ಏನಾಗಬಹುದು? ಜೊತೆಯಾಗಿ ಸೇರಿ ನಾವು ಏನು ಮಾಡಬಹುದು ಇತ್ಯಾದಿ. ನಿಮ್ಮ ಸಂಗಾತಿ ಒಳ್ಳೆಯವರಾಗಿದ್ದರೆ, ಅವರು ಈ ವಿಷಯಗಳ ಬಗ್ಗೆ ಮಾತನಾಡಲು ಎಂದೂ ಹಿಂದೆ ಸರಿಯೋದಿಲ್ಲ.
ನೀವು ಯಾವತ್ತೂ ಅವರಿಗೆ ಆಯ್ಕೆಯಾಗಿರೋದಿಲ್ಲ: ಉತ್ತಮ ವ್ಯಕ್ತಿ ಜೊತೆ ನೀವು ಸಂಬಂಧದಲ್ಲಿದ್ದರೆ ನಿಮ್ಮನ್ನು ಆತ ಎಂದಿಗೂ ಆಪ್ಶನ್ ಆಗಿ (you are not an option) ಇಟ್ಟಿರೋದಿಲ್ಲ. ಅವನು ನಿಮಗೆ ಸರಿಯಾದ ರೀತಿಯಲ್ಲಿ ಆದ್ಯತೆ ನೀಡುತ್ತಾನೆ ಮತ್ತು ನಿಮ್ಮನ್ನು ಗೌರವಿಸುತ್ತಾನೆ. ಅವನು ನಿಮ್ಮ ಆವಶ್ಯಕತೆಗಳನ್ನು ಮತ್ತು ಆಕಾಂಕ್ಷೆಗಳನ್ನು ಪೂರೈಸುವನು, ನೀವು ಯಾವಾಗಲೂ ಅವರ ನಂಬರ್ ವನ್ ಪ್ರಯಾರಿಟಿ ಆಗಿರುತ್ತೀರಿ.