Live-In Relationships: ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದೀರಾ? ಹಾಗಿದ್ರೆ ಈ ವಿಷ್ಯಗಳು ತಿಳಿದಿರಲಿ

Published : Nov 29, 2022, 12:44 PM IST

ಲಿವ್ ಇನ್ ರಿಲೇಶನ್ ಶಿಪ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡಿಯಾಗಿದೆ. ಅಷ್ಟೇ ಅಲ್ಲ, ಕೆಲವೊಂದು ಲಿವ್ ಇನ್ ರಿಲೇಶನ್ ನಲ್ಲಿ ಇರೋವಾಗ ಘಟನೆಗಳು ಭಯವನ್ನೂ ಸಹ ಹುಟ್ಟಿಸಿವೆ. ಆದುದರಿಂದ ನೀವು ಈ ಸಂಬಂಧದಲ್ಲಿ ಇರಲು ಬಯಸಿದ್ರೆ ಕೆಲವೊಂದು ವಿಷ್ಯಗಳ ಬಗ್ಗೆ ತಿಳಿದಿದ್ರೆ ಒಳ್ಳೇದು. 

PREV
110
Live-In Relationships: ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದೀರಾ? ಹಾಗಿದ್ರೆ ಈ ವಿಷ್ಯಗಳು ತಿಳಿದಿರಲಿ

ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹೆಚ್ಚಿನವರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರಲು ಇಷ್ಟ ಪಡ್ತಾರೆ, ಇನ್ನೂ ಕೆಲವರು ತಮ್ಮ ಪ್ರೇಮಿಗಳ ಜೊತೆ ಲಿವ್ ಇನ್ ರಿಲೇಶನ್ ಶಿಪ್ ಇರುತ್ತಾರೆ. ಮೊದ ಮೊದಲು ಎಲ್ಲವೂ ಚೆನ್ನಾಗಿರುತ್ತೆ, ಆದರೆ ದಿನಗಳದಂತೆ ಯಾವುದೂ ಸರಿ ಇಲ್ಲ ಅನಿಸುತ್ತೆ. ಇದಕ್ಕೆ ಕಾರಣ ನೀವು ಯೋಚನೆ ಮಾಡದೆ ತೆಗೆದುಕೊಳ್ಳುವಂತಹ ನಿರ್ಧಾರಗಳು. ಹೌದು ನೀವು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ (live in relationship) ಇರಲು ಬಯಸಿದ್ರೆ ಕೆಲವೊಂದು ವಿಷಯಗಳ ಬಗ್ಗೆ ತಿಳಿದಿರಬೇಕು. ಅವು ಯಾವುವು ಅನ್ನೋದನ್ನು ನೋಡೋಣ. 

210

ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ: (Think before you decide): ಇಂದಿನ ಸಮಯದಲ್ಲಿ, ಕೆಲವು ಕಪಲ್ಸ್ ಮದುವೆಗೆ ಮೊದಲು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು ಲಿವ್-ಇನ್ ನಲ್ಲಿರಲು ಬಯಸುತ್ತಾರೆ. ಆದರೆ, ಈ ಸಮಯದಲ್ಲಿ ಅನೇಕ ಸವಾಲುಗಳು ಸಹ ಬರುತ್ತವೆ. ಅದಕ್ಕಾಗಿಯೇ ನೀವು ಕೆಲವು ವಿಷಯಗಳನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳೋ ಮುನ್ನ ಸರಿಯಾಗಿ ಯೋಚನೆ ಮಾಡಬೇಕು.

310

ಪರ್ಸನಲ್ ಸ್ಪೇಸ್ ನೀಡಿ (Personal Space): ನೀವು ಸಂಗಾತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರೆ, ಪರಸ್ಪರರ ಪರ್ಸನಲ್ ಸ್ಪೇಸ್ ನ್ನು ಪ್ರವೇಶಿಸಬೇಡಿ. ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ನಿಮಗೂ ನಿಮ್ಮದೇ ಆದ ಕೆಲವೊಂದಿಷ್ಟು ಆದ್ಯತೆಗಳಿವೆ ಅವುಗಳಿಗೆ ಸ್ಪೇಸ್ ನೀಡುವಂತೆ, ಸಂಗಾತಿಗೂ ಅವರ ಆದ್ಯತೆಗಳನ್ನು ಪೂರೈಸಲು ಬಿಡಿ. 

410

ಪರಸ್ಪರ ಸಹಾಯ ಮಾಡಿ (Help Each Other): ಕೆಲಸದ ಹೊರೆಯನ್ನು ಯಾವತ್ತೂ ಒಬ್ಬರ ಮೇಲೆ ಹಾಕಬೇಡಿ. ಇಬ್ಬರೂ ಒಟ್ಟಿಗೆ ಮನೆಕೆಲಸಗಳನ್ನು ಮಾಡಬೇಕು ಮತ್ತು ಸಂತೋಷದಿಂದ ಬದುಕಬೇಕು. ಹೀಗಿದ್ದಾಗ ಸಂತೋಷದಿಂದ ಜೀವನ ನಡೆಸಲು ಸಾಧ್ಯವಾಗುತ್ತೆ. ಜೊತೆಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯ.

510

ಸಂಗಾತಿ ಬಗ್ಗೆ ಎಲ್ಲಾ ಮಾಹಿತಿ ತಿಳಿದಿರಲಿ (Know Everything about Partner): ಲಿವ್-ಇನ್ ಸಂಬಂಧದಲ್ಲಿ ವಾಸಿಸುವಾಗ ಸಂಗಾತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇರಿಸಿಕೊಳ್ಳಿ. ಸಂಗಾತಿಯ ಮನೆಯ ವಿಳಾಸ, ಕುಟುಂಬದ ಸದಸ್ಯರು, ಅವರ ಕೆಲಸ ಮತ್ತು ಅವರ ಸ್ವಭಾವವನ್ನು ತಿಳಿದುಕೊಳ್ಳಬೇಕು. ಇಲ್ಲವಾದರೆ ನೀವು ಮೋಸ ಹೋಗುವ ಸಾಧ್ಯತೆ ಇದೆ. ಆದುದರಿಂದ ಮೊದಲೇ ಎಚ್ಚರ ವಹಿಸೋದು ಮುಖ್ಯ. 

610

ಖರ್ಚುವೆಚ್ಚಗಳನ್ನು ಹಂಚಿಕೊಳ್ಳಿ (Divide Your Expenses): ಇಬ್ಬರೂ ಕೆಲಸ ಮಾಡುತ್ತಿದ್ದರೆ, ನೀವು ಮನೆಯ ಖರ್ಚುಗಳನ್ನು ಸಮಾನಾಗಿ ಹಂಚಬಹುದು, ಯಾವತ್ತೂ ಒಬ್ಬರ ಮೇಲೆ ಹೆಚ್ಚು ಹೊರೆ ಹೊರೆಸಬೇಡಿ. ಇದರಿಂದ ಸಂಬಂಧ ಹಾಳಾಗಬಹುದು. ಆದುದರಿಂದ ಖರ್ಚುವೆಚ್ಚಗಳನ್ನು ಹಂಚಿಕೊಳ್ಳೋದು ಮುಖ್ಯ.

710

ಆ ಬಗ್ಗೆ ಭರವಸೆ ನೀಡಬೇಡಿ (Do Not Promise): ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರೋವಾಗ ನಿಮ್ಮ ಭವಿಷ್ಯದ ಜೀವನದ ಯಾವುದೇ ವಿಷಯದ ಬಗ್ಗೆ ಭರವಸೆ ನೀಡಬೇಡಿ. ಇದಕ್ಕಾಗಿ ಸಮಯ ನೀಡಿ. ನಿಮಗೆ ನಿಮ್ಮ ಸಂಬಂಧದ ಮೇಲೆ ನಂಬಿಕೆ ಇದ್ದರೆ, ಎಲ್ಲವೂ ಸಾಧ್ಯ ಎನ್ನುವ ಧೈರ್ಯ ಇದ್ದರೆ ಆವಾಗ ಮಾತ್ರ ಭರವಸೆ ನೀಡಬಹುದು.

810

ಜೊತೆಯಾಗಿ ಊಟ ಮಾಡಿ (Have Food Together): ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸಿದರೆ, ಅವರೊಂದಿಗೆ ಅಡುಗೆ ಮಾಡಲು ಅವರಿಗೆ ಸಹಾಯ ಮಾಡಿ. ಅಷ್ಟೇ ಅಲ್ಲ, ಅವರ ಜೊತೆಗೆ ದಿನದಲ್ಲಿ ಒಂದು ಬಾರಿಯಾದರೂ ಊಟ ಮಾಡಿ. ಇದರಿಂದ ಇಬ್ಬರು ಜೊತೆಯಾಗಿ ಉತ್ತಮ ಸಮಯ ಕಳೆಯಲು ಸಾಧ್ಯವಾಗುತ್ತೆ.

910

ಹಣಕಾಸಿನ ಸಮಸ್ಯೆ (Financial Problem): ತಮ್ಮ ಪರ್ಸನಲ್ ಕೆಲಸಗಳಿಗೆ ತಮ್ಮದೇ ಹಣವನ್ನು ವಿನಿಯೋಗಿಸಬೇಕು. ಇಬ್ಬರು ಜೊತೆಯಾಗಿ ಮಾಡುವಂತಹ ಅಥವಾ ಮನೆಗೆ ಬೇಕಾದ ವಸ್ತುಗಳಿಗಾಗಿ ಜೊತೆಯಾಗಿ ಹಣ ಖರ್ಚು ಮಾಡಬೇಕು, ಹೀಗೆ ಮಾಡಿದರೆ ಯಾವುದೇ ಹಣಕಾಸಿನ ಸಮಸ್ಯೆ ಬರೋದಿಲ್ಲ. ನಿನ್ನಿಂದಾಗಿ ಹಣ ಹೆಚ್ಚು ಖರ್ಚಾಯಿತು ಅನ್ನೋ ದೂರು ಸಹ ಇರೋದಿಲ್ಲ. 

1010

ರೂಲ್ಸ್ ಒಳ್ಳೆಯದೇ (Make Rules): ಮನೆಗೆ ಬಂದು ಹೋಗುವವರ ಬಗ್ಗೆ ನಿಯಮಗಳನ್ನು ರೂಪಿಸಿಕೊಳ್ಳಿ. ಸ್ನೇಹಿತರು, ಪಾರ್ಟಿಗಳು ಅಥವಾ ಸಂಬಂಧಿಕರ ಮನೆಗೆ ಯಾರು ಬರಬಹುದು ಎಂಬುದನ್ನು ಮುಂಚಿತವಾಗಿ ನಿರ್ಧರಿಸಿ. ಇಲ್ಲವಾದರೆ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ಸಂಬಂಧದ ಮೇಲೆ ಒತ್ತಡ ಬೀಳಬಹುದು.

Read more Photos on
click me!

Recommended Stories