ಹಸೆಮಣೆ ಏರಲು ಸಿದ್ಧರಾದ ಕೇರಳದ ಸಲಿಂಗಿ ಜೋಡಿ: ಫೋಟೋ ಶೂಟ್ ವೈರಲ್

Published : Nov 28, 2022, 08:40 PM IST

ಹಿಂದೊಮ್ಮೆ ಪೋಷಕರಿಂದ ಬೇರ್ಪಡಿಸಲ್ಪಟ್ಟು ಕೇರಳ ಹೈಕೋರ್ಟ್ ಮೂಲಕ ಒಂದಾದ ಕೇರಳದ ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರು ಹಸೆಮಣೆಯೇರಲು ಸಿದ್ಧರಾಗಿದ್ದು, ಇವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

PREV
110
ಹಸೆಮಣೆ ಏರಲು ಸಿದ್ಧರಾದ ಕೇರಳದ ಸಲಿಂಗಿ ಜೋಡಿ: ಫೋಟೋ ಶೂಟ್ ವೈರಲ್

ಅದಿಲಾ ನಸ್ರೀನ್ ಹಾಗೂ ಫಾತಿಮಾ ನೂರ್ ಎಂಬುವವರೇ ಈಗ ವಿವಾಹಪೂರ್ವ ಫೋಟೋ ಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ದೇವರನಾಡಿನ ಸಲಿಂಗಿ ಜೋಡಿ.

210

ನಾವು ಕೇವಲ ಫೋಟೋಶೂಟ್ ಅನ್ನು ಪ್ರಯತ್ನಿಸಿದ್ದೇವೆ ನಮ್ಮ ಈ ಕಲ್ಪನೆಯು ಆಸಕ್ತಿದಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದು ಈ ಫೋಟೋ ಶೂಟ್ ಬಗ್ಗೆ ಅಧಿಲಾ ಬಿಬಿಸಿಗೆ ತಿಳಿಸಿದ್ದಾರೆ.

310

ಹಾಗಂತ ಈ ಜೋಡಿ ಸದ್ಯದಲ್ಲೇ ವಿವಾಹವಾಗುತ್ತಿಲ್ಲ. ಭವಿಷ್ಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದು, ಅದಕ್ಕೂ ಮೊದಲು ಇವರು ನಡೆಸಿದ ಫೋಟೋ ಶೂಟ್ ವೈರಲ್ ಆಗುತ್ತಿದೆ.

410

ಪ್ರಸ್ತುತ ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಅನುಮತಿ ಇಲ್ಲ. ಆದರೂ ಕೂಡ ಇದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ.

510

ಈ ಜೋಡಿ ಕುಟುಂಬದಿಂದ ದೂರಾಗಿ ಜೀವನ ನಡೆಸುತ್ತಿದೆ. ಆದರೆ ಭರ್ತಿ ಮಾಡಬೇಕಾದ ಫಾರ್ಮ್‌ಗಳಲ್ಲಿ ಗಂಡ ಹೆಂಡತಿ ತಂದೆಯ ಹೆಸರನ್ನು ಕೇಳುತ್ತಿರುವುದರ ಕುರಿತು ಬಿಬಿಸಿ ಜೊತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅಧಿಲಾ, ಪ್ರಸ್ತುತ ತಾನು ಹಾಗೂ ಫಾತಿಮಾ ಪೋಷಕರೊಂದಿಗೆ ವಾಸ ಮಾಡುತ್ತಿಲ್ಲವಾದರಿಂದ ಇದು ಇನ್ನಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 

610

ಏಕೆಂದರೆ ಫಾತಿಮಾ ಹಾಗೂ ಅಧಿಲಾ ಅವರ ಕುಟುಂಬದವರು ಇವರ ಸಂಬಂಧ ಮುರಿದು ಹೋಗಲಿದೆ ಎಂದು ಭಾವಿಸಿದ್ದಾರೆ. ಆದರೆ ಇವರಿಬ್ಬರೂ ಕೂಡ ಸೌದಿ ಅರೇಬಿಯಾದಲ್ಲಿ ಶಾಲಾದಿನಗಳಿಂದಲೂ ಜೊತೆಯಾಗಿ ಇದ್ದವರು. 

710

ಫಾತಿಮಾ (Fathima) ಹಾಗೂ ಅಧಿಲಾಗೆ (Adhila) ಸಾಕಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಈ ಸಲಿಂಗಿ ಜೋಡಿ ಹೇಳಿಕೊಂಡಿದ್ದಾರೆ. ಆದರೆ ಇದೊಂದು ಹಂತವಷ್ಟೇ ಎಂದು ಹೇಳುವವರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 
 

810

ಸಲಿಂಗಿ ಸಮುದಾಯಕ್ಕೆ (queer community) ಆರ್ಥಿಕವಾಗಿ ಸ್ವತಂತ್ರರಾಗುವಂತೆ (financially independent) ಈ ಜೋಡಿ ಸಲಹೆ ನೀಡಿದ್ದು, ಇದೇ ಸಲಹೆಯನ್ನು ಈ ಜೋಡಿಯನ್ನು ಬೆಂಬಲಿಸುವ ಜನರು ಇವರಿಗೆ ನೀಡಿದ್ದರು. 

910

ಕಳೆದ ಜೂನ್‌ನಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಪೋಷಕರಿಗೆ ವಿಷಯ ತಿಳಿದು ಇಬ್ಬರನ್ನು ಬೇರ್ಪಡಿಸಿದ್ದರು, ನಂತರ ಇವರಲ್ಲಿ ಒಬ್ಬರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಪರಿಣಾಮ ಮಧ್ಯ ಪ್ರವೇಶಿಸಿದ ಕೇರಳ ಹೈಕೋರ್ಟ್ ಇಬ್ಬರಿಗೂ ಜೊತೆಯಾಗಿ ಬದುಕಲು ಅವಕಾಶ ನೀಡಿತ್ತು.

1010

ಈ ಇಬ್ಬರು ಯುವತಿಯರು  ಸೌದಿ ಅರೇಬಿಯಾದಲ್ಲಿ ಶಾಲೆಯೊಂದರಲ್ಲಿ 11 ನೇ ತರಗತಿಯಲ್ಲಿ ಓದುತ್ತಿದ್ದಾಗ ಪರಸ್ಪರ ಭೇಟಿಯಾಗಿದ್ದರು. ಆದರೆ ದ್ವಿತೀಯ ಪಿಯುಸಿ ತಲುಪಿದಾಗ ಅವರಿಬ್ಬರು ಸಲಿಂಗಿಗಳು ಹಾಗೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂಬುದನ್ನು ಅರಿತುಕೊಂಡರು. ಇವರ ಸಂಬಂಧದ ಬಗ್ಗೆ ಇವರ ಪೋಷಕರಿಗೆ ತಿಳಿದಾಗ, ಅವರು ಅದನ್ನು ನಿಲ್ಲಿಸುವುದಾಗಿ  ಹೇಳಿದರು. ಆದರೆ ಭಾರತಕ್ಕೆ ಹಿಂತಿರುಗಿ ಕಾಲೇಜಿಗೆ ಸೇರಿದ ನಂತರ ಈ ಇಬ್ಬರೂ  ತಮ್ಮ ಸಂಬಂಧವನ್ನು ಮುಂದುವರೆಸಿದರು ಎಂದು ತಿಳಿದು ಬಂದಿದೆ. 

Read more Photos on
click me!

Recommended Stories