ಸೆಕ್ಸ್ ಟೈಮಿಂಗ್ ಹೆಚ್ಚಿಸೋ ಬಗ್ಗೆ ನೀವು ಯೋಚನೆ ಮಾಡ್ತಿದ್ರೆ ಇಲ್ಲಿದೆ ಸರಿಯಾದ ಮಾರ್ಗ!

First Published | Dec 10, 2023, 1:14 PM IST

ಪ್ರತಿಯೊಬ್ಬರೂ ಲೈಂಗಿಕತೆಯನ್ನು ಆನಂದಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಕೆಲವರು ಹೆಚ್ಚು ಕಡಲಿಂಗ್ ಮಾಡಿದ್ರೆ, ಕೆಲವರು ಕಿಸ್ಸಿಂಗ್ ನಂತಹ ಫೋರ್ಪ್ಲೇ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ, ಆದರೆ ಕೆಲವರು ವಿಭಿನ್ನ ಭಂಗಿಗಳೊಂದಿಗೆ ಸೆಕ್ಸ್ ನ್ನು ಮತ್ತಷ್ಟು ಇಂಟ್ರೆಸ್ಟಿಂಗ್ ಆಗೋ ಹಾಗೆ ಮಾಡ್ತಾರೆ. ಆದರೆ ಲೈಂಗಿಕತೆಯ ಸಮಯವನ್ನು ಹೆಚ್ಚಿಸಲು ಯಾವುದಾದ್ರೂ ಮಾರ್ಗ ಇದೆಯೇ? ನೋಡೋಣ. 

ಅನೇಕ ಮಹಿಳೆಯರು ತಮ್ಮ ಸಂಗಾತಿಯು ಪುರುಷರು ಹೆಚ್ಚು ಸಮಯ ಸೆಕ್ಸ್ ಮಾಡೋದಿಲ್ಲ ಎಂದು ದೂರುತ್ತಾರೆ. ಅದೇ ರೀತಿ ಪುರುಷರು ಸಹ ಲೈಂಗಿಕ ಸಮಯವನ್ನು (sex timing) ಸುಧಾರಿಸಲು ವಿವಿಧ ಸಲಹೆಗಳನ್ನು ಪ್ರಯತ್ನಿಸುತ್ತಾರೆ. ಹೆಚ್ಚಿನ ಜನರು ಲೈಂಗಿಕ ಚಟುವಟಿಕೆಯ ಅವಧಿಯನ್ನು ಸಾಧ್ಯವಾದಷ್ಟು ವಿಸ್ತರಿಸಬೇಕೆಂದು ಬಯಸುತ್ತಾರೆ. ಲೈಂಗಿಕತೆ ಮತ್ತು ಆರ್ಗಸಂಗೆ ಯಾವುದೇ ನಿಗದಿತ ಸಮಯವಿಲ್ಲ ಎಂದು ತಜ್ಞರು ನಂಬುತ್ತಾರೆ. ಆದರೆ, ನೀವು ಅದನ್ನು ಹೆಚ್ಚಿಸಲು ಬಯಸಿದರೆ, ಕೆಲವು ಸರಳ ತಂತ್ರಗಳು ನಿಮಗೆ ಸಹಾಯ ಮಾಡಬಹುದು.  

ಸೆಕ್ಸ್ ಸಮಯ ಮತ್ತು ಪರಾಕಾಷ್ಠೆಯ ಸಮಯ ಹೆಚ್ಚು ಇರಬೇಕು ಅಂದ್ರೆ ಏನು ಮಾಡಬೇಕು? 
ಲೈಂಗಿಕ ಆರೋಗ್ಯ ತಜ್ಞರು ಹೇಳುವಂತೆ ಹೆಚ್ಚು ಸಮಯ ಸೆಕ್ಸ್ ಮಾಡಬೇಕು ಎಂದಾದರೆ ಲೈಂಗಿಕತೆಯಲ್ಲಿ ಪರಸ್ಪರರ ಒಪ್ಪಿಗೆಯೊಂದಿಗೆ ಹೊಸದನ್ನು ಪ್ರಯತ್ನಿಸುವುದು ಅವಶ್ಯಕ ಮತ್ತು ಅದನ್ನು ಸರಿಯಾದ ರೀತಿ ಎಂಜಾಯ್ ಮಾಡಿಕೊಂಡು ಮಾಡುವುದು ಮುಖ್ಯ.  ಮಾತನಾಡೋದು, ಫೋರ್ ಪ್ಲೇ ಮತ್ತು ಸರಿಯಾದ ಪರಿಸರವು ನಿಮ್ಮ ಲೈಂಗಿಕ ಸೆಷನ್ (sex setion) ಅನ್ನು ಹೆಚ್ಚು ಆಹ್ಲಾದಕರವಾಗಿಸುವ ವಿಷಯಗಳಾಗಿವೆ.

Tap to resize

ಮಹಿಳೆಯರು ಮಾತ್ರ ಸಮಯದ ಬಗ್ಗೆ ದೂರು ನೀಡುವುದಿಲ್ಲ, ಅನೇಕ ಬಾರಿ ಪುರುಷರು ಲೈಂಗಿಕ ಸಮಯವನ್ನು ಹೆಚ್ಚಿಸುವ ಮೂಲಕ ಈ ಸೆಷನ್ ಅನ್ನು ಹೆಚ್ಚು ಆನಂದಿಸಬಹುದು ಎಂದು ಭಾವಿಸುತ್ತಾರೆ. ಆದ್ದರಿಂದ ನಿಮ್ಮಿಬ್ಬರಿಗೂ ಸುರಕ್ಷಿತ ಮತ್ತು ಆರಾಮದಾಯಕವಾದ ಎಲ್ಲಾ ವಿಷಯಗಳನ್ನು ನೀವು ಪ್ರಯತ್ನಿಸಬಹುದು. ಆಗ ಮಹಿಳೆಯರಿಗೆ ಪರಾಕಾಷ್ಠೆಯನ್ನು (orgasm) ತಲುಪುವುದು ಇನ್ನಷ್ಟು ಸುಲಭವಾಗಬಹುದು.
 

ಸ್ಥಾನಗಳನ್ನು ಬದಲಿಸಿ (Change the Position): ನೀವು ಮತ್ತು ನಿಮ್ಮ ಸಂಗಾತಿ ಒಂದೇ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ, ಸಮಯ ಕಡಿಮೆ ತೆಗೆದುಕೊಳ್ಳುತ್ತೆ. ಹೀಗಿರೋವಾಗ, ಲೈಂಗಿಕ ಸಮಯವನ್ನು ಹೆಚ್ಚಿಸಲು, ಲೈಂಗಿಕ ಕ್ರಿಯೆ ನಡೆಸುವಾಗ ನೀವು ಸ್ಥಾನವನ್ನು ಬದಲಾಯಿಸಬೇಕು, ಇದರಿಂದ ಹೆಚ್ಚು ಸಮಯ ಬೆಡ್ ನಲ್ಲಿ ಎಂಜಾಯ್ ಮಾಡಬಹುದು. 
 

ಫೋರ್ ಪ್ಲೇಗೆ ಸಮಯ ನೀಡುವುದು ಮುಖ್ಯ: ಪರಾಕಾಷ್ಠೆಯನ್ನು ತಲುಪಲು ನಿಮ್ಮ ಸಂಗಾತಿಯ ಸಮಯವನ್ನು ಹೆಚ್ಚಿಸಲು ನೀವು ಬಯಸಿದರೆ, ಫೋರ್ಪ್ಲೇಗೆ (foreplay) ಸಮಯ ನೀಡುವುದು ಮುಖ್ಯ. ಸಂಭೋಗದ ಮೊದಲು ಆರೋಗ್ಯಕರ ಫೋರ್ಪ್ಲೇಯಲ್ಲಿ ಭಾಗವಹಿಸುವುದರಿಂದ ಮಹಿಳೆಯರಿಗೆ ಪರಾಕಾಷ್ಠೆಯನ್ನು ತಲುಪುವುದು ಸುಲಭವಾಗುತ್ತದೆ. ಅದೇ ಸಮಯದಲ್ಲಿ, ಇದು ಪುರುಷರಿಗೆ ಸಾಕಷ್ಟು ಸಮಯವನ್ನು ನೀಡುತ್ತದೆ ಮತ್ತು ಅವರು ದೀರ್ಘಕಾಲದವರೆಗೆ ಸೆಕ್ಸ್ ಎಂಜಾಯ್ ಮಾಡಲು ಸಾಧ್ಯವಾಗುತ್ತದೆ.

ಸ್ಟಾರ್ಟ್-ಸ್ಟಾಪ್ ತಂತ್ರಗಳನ್ನು ಅಳವಡಿಸಿಕೊಳ್ಳಿ: ದೀರ್ಘಕಾಲದವರೆಗೆ ಸೆಕ್ಸ್ ಲೈಫ್ ಆನಂದಿಸಲು ಬಯಸುವ ಪುರುಷರಿಗೆ, ಅವರು ಸಂಭೋಗದ ಸಮಯದಲ್ಲಿ ಸ್ಟಾರ್ಟ್-ಸ್ಟಾಪ್ ತಂತ್ರವನ್ನು (start up technique) ಅಳವಡಿಸಿಕೊಳ್ಳಬೇಕು. ದೀರ್ಘಕಾಲದವರೆಗೆ ಒಂದೇ ಭಂಗಿಯಲ್ಲಿ ನಿರಂತರವಾಗಿ ಸೆಕ್ಸ್ ಮಾಡೋದಾರಿಂದ ಸ್ಖಲನ ಬೇಗವಾಗಿ ಆಗುತ್ತೆ. ಹಾಗಾಗಿ ಸ್ವಲ್ಪ ಸಮಯದವರೆಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ, ಪುರುಷರು 10 ರಿಂದ 20 ಸೆಕೆಂಡುಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ವಿರಾಮ ತೆಗೆದುಕೊಳ್ಳಬೇಕು ಮತ್ತು ನಂತರ ಮತ್ತೆ ಪ್ರಾರಂಭಿಸಬೇಕು. ಇದು ಪುರುಷರನ್ನು ದೀರ್ಘಕಾಲದವರೆಗೆ ಹಾಸಿಗೆಯಲ್ಲಿರಿಸುತ್ತದೆ ಮತ್ತು ಮಹಿಳೆಯರು ಪರಾಕಾಷ್ಠೆಯನ್ನು ತಲುಪಲು ಸುಲಭವಾಗುತ್ತದೆ.

ಧೂಮಪಾನ ಮಾಡಬೇಡಿ: ಸಿಗರೇಟ್ (smoking) ಸೇದುವುದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಮತ್ತು ಈ ಪರಿಸ್ಥಿತಿಯಲ್ಲಿ ಹೃದಯರಕ್ತನಾಳದ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ, ಇದರಿಂದಾಗಿ ನಿಮಿರುವಿಕೆಯ ಸಮಸ್ಯೆಗಳು ಸಂಭವಿಸಬಹುದು. ಇದು ವ್ಯಕ್ತಿಯಲ್ಲಿ ಲೈಂಗಿಕ ಸಮಯದ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಸಂಗಾತಿಗೂ ಧೂಮಪಾನ ತ್ಯಜಿಸುವಂತೆ ಸಲಹೆ ನೀಡಿ. 

ಆರೋಗ್ಯಕರ ಸಂವಹನ: ಲೈಂಗಿಕ ಕ್ರಿಯೆಯ ಸಮಯದಲ್ಲಿ ಪರಸ್ಪರ ಆರೋಗ್ಯಕರ ಸಂವಹನವನ್ನು (healthy conversation) ಕಾಪಾಡಿಕೊಳ್ಳುವುದು ಸಮಯವನ್ನು ಹೆಚ್ಚಿಸಲು ಮತ್ತು ಲೈಂಗಿಕ ಆನಂದವನ್ನು ಸಾಧಿಸಲು ಸಹಾಯ ಮಾಡುತ್ತದೆ. ನೀವು ಯಾವುದನ್ನು ಇಷ್ಟಪಡುತ್ತೀರಿ ಮತ್ತು ಯಾವುದನ್ನು ಇಷ್ಟಪಡುವುದಿಲ್ಲ ಎಂದು ಪರಸ್ಪರ ಹೇಳಿ. ಇದಲ್ಲದೆ, ನೀವು ಯಾವ ಹಂತದಲ್ಲಿ ಆರ್ಗಸಂ ಅನುಭವಿಸುತ್ತೀರಿ, ಅಥವಾ ನಿಮಗೆ ಯಾವಾಗ ಇಷ್ಟವಾಗೋದಿಲ್ಲ ಎಂಬುದರ ಬಗ್ಗೆ ಮಾತನಾಡುವುದು ಸಮಯವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ಪರಾಕಾಷ್ಠೆಯನ್ನು ತಲುಪುವುದನ್ನು ಸುಲಭಗೊಳಿಸುತ್ತದೆ.

ಆಯುರ್ವೇದ ಗಿಡಮೂಲಿಕೆಗಳನ್ನು ಪ್ರಯತ್ನಿಸಬಹುದು:  ಶಿಲಾಜಿತ್ ಒಂದು ಪ್ರಮುಖ ಆಯುರ್ವೇದ ಪರಿಹಾರವಾಗಿದ್ದು, ಇದು ವಿಶೇಷ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಪುರುಷರಲ್ಲಿ ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಸಮಯವನ್ನು ಸುಧಾರಿಸುತ್ತದೆ. ಆದರೆ ಇದರ ಪ್ರಯೋಜನಗಳು ಇದಕ್ಕೆ ಸೀಮಿತವಾಗಿಲ್ಲ, ಇದು ಇತರ ಅನೇಕ ಆರೋಗ್ಯ ಸಮಸ್ಯೆಗಳಲ್ಲಿಯೂ ಪ್ರಯೋಜನಗಳನ್ನು ಒದಗಿಸುತ್ತದೆ. ಆರೋಗ್ಯವಂತ ವ್ಯಕ್ತಿಯು ದೀರ್ಘಕಾಲದವರೆಗೆ ಲೈಂಗಿಕ ಕ್ರಿಯೆ ನಡೆಸಬಹುದು. ಶಿಲಾಜಿತ್ ಸೇವನೆಯು ಒತ್ತಡವನ್ನು ಬಿಡುಗಡೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಸಂಗಾತಿಯು ಲೈಂಗಿಕ ಕ್ರಿಯೆ ನಡೆಸುವಾಗ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ ಮತ್ತು ಇದು ಸಮಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Latest Videos

click me!