ಹಣದಿಂದ ಖರೀದಿಸಲು ಸಾಧ್ಯವಾಗದ ಜೀವನದ 7 ಅತ್ಯಂತ ದುಬಾರಿ ವಸ್ತುಗಳಿವು…

First Published Sep 27, 2022, 10:55 AM IST

ಹಣ ನಮ್ಮ ಜೀವನದಲ್ಲಿ ತುಂಬಾನೆ ಇಂಪಾರ್ಟಂಟ್ ಅನ್ನೋದು ನಿಜಾ. ಆದರೆ ಹಣದಿಂದ ಎಲ್ಲಾನೂ ಕೊಂಡುಕೊಳ್ಳಲು ಸಾಧ್ಯಾನಾ? ನೀವು ಎಷ್ಟು ಹಣವನ್ನು ಹೊಂದಿದ್ದೀರಿ ಎಂಬುದು ನೀವು ಯಾವ ರೀತಿಯ ಶಿಕ್ಷಣವನ್ನು ಪಡೆಯುತ್ತೀರಿ ಮತ್ತು ನಿಮ್ಮ ಲೈಫ್ ಸ್ಟೈಲ್ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಹಣವು ನಮ್ಮ ಜೀವನದ ಪ್ರಮುಖ ಭಾಗವಾಗಿದ್ದರೂ, ಅದು ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲ. ಹಣದಿಂದ ನೀವು ಇಷ್ಟಪಟ್ಟ ವಸ್ತುಗಳನ್ನು ಕೊಂಡುಕೊಳ್ಳಬಹುದು ನಿಜಾ, ಆದರೆ ನೆಮ್ಮದಿ, ಖುಷಿಯನ್ನು ಖರೀದಿಸಲು ಸಾಧ್ಯವೇ?

ನೀವು ಹಣದಿಂದ ಏನನ್ನಾದರೂ ಖರೀದಿಸಬಹುದು ಎಂದು ನೀವು ಭಾವಿಸುತ್ತೀರಿ. ಆದರೆ, ಹಣದಿಂದ ಖರೀದಿಸಲಾಗದ ಅನೇಕ ಅಮೂಲ್ಯ ವಸ್ತುಗಳಿವೆ. ಇಂದು ನಾವು ಅಂತಹ ಕೆಲವು ವಸ್ತುಗಳ ಬಗ್ಗೆ ನಿಮಗೆ ಹೇಳಲಿದ್ದೇವೆ, ಅವುಗಳನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಆದರೆ ಅವು ನಮ್ಮ ಜೀವನದಲ್ಲಿ ತುಂಬಾನೆ ಇಂಪಾರ್ಟಂಟ್ ಆದ ವಿಷ್ಯಗಳಾಗಿವೆ. ಅವುಗಳ ಬಗ್ಗೆ ತಿಳಿಯೋಣ.
 

ಹಣದಿಂದ ಖರೀದಿಸಲು ಸಾಧ್ಯವಿಲ್ಲದ ಜೀವನದ 7 ದುಬಾರಿ ವಸ್ತುಗಳು

ಸ್ನೇಹಿತರು(friends)
ತಮ್ಮ ಹಣದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಜನರು ದೈನಂದಿನ ಜೀವನದಲ್ಲಿ ಪದೇ ಪದೇ ಒಂಟಿತನವನ್ನು ಅನುಭವಿಸುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ನಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ನಾವು ನಮ್ಮ ಹತ್ತಿರದವರನ್ನೇ ದೂರ ಮಾಡುತ್ತೇವೆ. ಮುಂದೆ ಹಣ ಗಳಿಸಿದಾಗ ನಾವು ಒಬ್ಬಂಟಿಯಾಗಿರುತ್ತೇವೆ. ಆದ್ರೆ ಎಷ್ಟೇ ಹಣ ಗಳಿಸಿದ್ರೂ ನಮ್ಮ ಹಿತೈಷಿಗಳು ಮತ್ತು ನಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವವರನ್ನು ನಾವು ಎಂದಿಗೂ ಮರೆಯಬಾರದು. ಉತ್ತಮ ಸ್ನೇಹಿತರು ಇದ್ರೇನೆ ನಾವು ಜೀವನದಲ್ಲಿ ಹ್ಯಾಪಿಯಾಗಿ, ಮುಂದೆ ಬರಲು ಸಾಧ್ಯ.

ಸಮಯ (time)
ಹಣವು ನಿಮ್ಮನ್ನು ದಿನದ 24 ಗಂಟೆಯೂ ಸಂತೋಷವಾಗಿರಿಸುತ್ತದೆ, ಆದರೆ ನಿಮಗೆ ದುಃಖದ ವಿಷಯವೆಂದರೆ ಹಣದಿಂದ ನಿಮಗಾಗಿ ದಿನದಲ್ಲಿ ಹೆಚ್ಚುವರಿ ಗಂಟೆಗಳನ್ನು ಖರೀದಿಸಲು ಸಾಧ್ಯವಿಲ್ಲ. ಸಮಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳೋದು ಮತ್ತು ಅದನ್ನು ಉತ್ತಮ ಉದ್ದೇಶಗಳಿಗಾಗಿ ಬಳಸುವುದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದುದರಿಂದ ಸಮಯವನ್ನು ವ್ಯರ್ಥ ಮಾಡದೇ ಬಳಸಿ.

ಮನೆ (home)
ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಹಣವು ನಿಮಗೆ ಸಹಾಯ ಮಾಡುತ್ತದೆ, ಆದರೆ ನಿಮಗೆ ನಿಜವಾದ ಮನೆಯನ್ನು ನೀಡಲು ಹಣದಿಂದ ಸಾಧ್ಯವಿಲ್ಲ. ಮನೆ ಎಂದರೆ ಜನರು ತಮ್ಮ ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ವಾಸಿಸುವ ಸ್ಥಳವಾಗಿದೆ ಮತ್ತು ಅವರ ನೆನಪುಗಳನ್ನು ಅಲ್ಲಿ ಜೋಡಿಸಲಾಗಿದೆ.  ಮನೆ ಕೇವಲ ವಿಶ್ರಾಂತಿ ಪಡೆಯುವ ಸ್ಥಳವಲ್ಲ, ಅದರೊಂದಿಗೆ ನಾವು ಇಮೋಷನಲಿ ಅಟ್ಯಾಚ್ ಆಗಿರುತ್ತೇವೆ. ನಿಮ್ಮ ಮನೆಯಲ್ಲಿ ಎಲ್ಲಾ ಸೌಕರ್ಯಗಳಿವೆ, ಆದರೆ ಸಂತೋಷ ಹಂಚಿಕೊಳ್ಳಲು ಯಾರೂ ಇಲ್ಲದೇ ಇದ್ದರೆ, ಅದರಿಂದ ಪ್ರಯೋಜನ ಏನು? 

ಆತ್ಮೀಯತೆ (intimacy)
ಆತ್ಮೀಯತೆ ಎಂದರೆ ಇನ್ನೊಬ್ಬ ವ್ಯಕ್ತಿಯೊಂದಿಗಿನ ವಾತ್ಸಲ್ಯದ ಭಾವನೆ ಮತ್ತು ಅವರೊಂದಿಗಿನ ಇಂಟಿಮೆಸಿ. ಆತ್ಮೀಯರಾದವರು ನಮ್ಮ ಜೀವನದಲ್ಲಿ ಇರಲೇಬೇಕು. ಇದು ನಮ್ಮನ್ನು ಆರೋಗ್ಯಕರ ಮತ್ತು ಉತ್ತಮವಾಗಿ ಜೀವನ ನಡೆಸಲು ಸಾಧ್ಯವಾಗಿಸುತ್ತೆ.  ಹಣವು ನಿಮ್ಮ ಕಷ್ಟವನ್ನು ಕಡಿಮೆ ಮಾಡುತ್ತದೆ, ಆದರೆ ನೀವು ಭಾವನಾತ್ಮಕವಾಗಿ ಬೆರೆಯಲು, ಸಂಪರ್ಕ ಹೊಂದಲು ಸಾಧ್ಯವಿಲ್ಲ.

ನೈತಿಕತೆ (morality)
ನೈತಿಕತೆಗೆ ನಿಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಸ್ಥಾನವಿದೆ, ಏಕೆಂದರೆ ಅದು ನಿಮ್ಮ ಜೀವನಕ್ಕೆ ದಿಕ್ಕು ಮತ್ತು ಸರಿ ಮತ್ತು ತಪ್ಪುಗಳ ಪ್ರಜ್ಞೆಯನ್ನು ನೀಡಲು ಸಹಾಯ ಮಾಡುತ್ತೆ. ಇದು ವ್ಯಕ್ತಿಯ ಆಲೋಚನೆ ಮತ್ತು ನಡವಳಿಕೆಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಅವರಿಗೆ ಗೌರವಾನ್ವಿತ ಜೀವನವನ್ನು ನೀಡುತ್ತದೆ. ಇದೇ ನೈತಿಕತೆಯನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ, ಅದನ್ನು ನೀವಾಗಿಯೇ ಹುಟ್ಟು ಹಾಕಬೇಕು, ಬೆಳೆಸಬೇಕು.

ನಿಷ್ಠೆ(loyalty)
ನಿಮ್ಮ ಜೀವನದಲ್ಲಿ ನಿಷ್ಠಾವಂತ ಮತ್ತು ವಿಶ್ವಾಸಾರ್ಹ ಜನರನ್ನು ಹುಡುಕುವುದು ಕಷ್ಟ. ಹಣದಿಂದ ಖರೀದಿಸಿದ ನಕಲಿ ನಿಷ್ಠೆಗಳು ಯಾವಾಗ ಬೇಕಾದರೂ ಕೊನೆಗೊಳ್ಳಬಹುದು. ಆದರೆ ಸಮಯ, ಪ್ರಾಮಾಣಿಕತೆ ಮತ್ತು ತಾಳ್ಮೆಯಿಂದ ಸಂಪಾದಿಸಿದ ನಿಜವಾದ ನಿಷ್ಠೆಯು ಜೀವನ ಪೂರ್ತಿ ಉಳಿಯುತ್ತದೆ ಮತ್ತು ಅದನ್ನು ಎಂದಿಗೂ ಕಳೆದುಕೊಳ್ಳಲಾಗುವುದಿಲ್ಲ.

ನೆಮ್ಮದಿ (inner peace )
ನೀವು ಎಷ್ಟೇ ದುಡ್ಡು ಕೊಟ್ಟರೂ ಸಹ ನಿಮಗೆ ಇನ್ನರ್ ಪೀಸ್ ಪಡೆಯಲು ಸಾಧ್ಯವೇ ಇಲ್ಲ. ಮನುಷ್ಯನಿಗೆ ಮುಖ್ಯವಾಗಿ ಬೇಕಾದುದು ನೆಮ್ಮದಿ. ನೀವು ದುಃಖದಲ್ಲಿರುವಾಗ ಹಣ ಇದ್ದು ಏನೂ ಪ್ರಯೋಜನ ಇರೋದಿಲ್ಲ. ಆವಾಗ ಬೇಕಾಗಿರೋದು ಮಾನಸಿಕ ನೆಮ್ಮದಿ. ನಿಮ್ಮ ಮಾನಸಿಕ ಶಾಂತಿಗಾಗಿ, ಸಮೃದ್ಧ ಜೀವನ ಮತ್ತು ಸಂತೋಷದ ಜೀವನವನ್ನು ನಿರ್ಮಿಸೋದು ತುಂಬಾನೆ ಮುಖ್ಯ.

ಇಷ್ಟೇಲ್ಲಾ ಹೇಳಿದ ಮೇಲೆ ನಾವು ನಿಮಗೆ ಹೇಳೋದು ಇನ್ನಿಷ್ಟೇ…. ಒಟ್ಟಾರೆಯಾಗಿ, ಹಣವು ನಿಮಗೆ ಎಲ್ಲವನ್ನೂ ನೀಡುತ್ತದೆ, ಆದರೆ ಹಣವು ಜೀವನದಲ್ಲಿ ಎಲ್ಲವೂ ಅಲ್ಲ ಎಂಬುದನ್ನು ನೆನಪಿಡಿ. ಹಣದ ಮುಂದೆ ಸಾಕಷ್ಟು ವಿಷಯಗಳಿವೆ, ಅದು ಖಂಡಿತವಾಗಿಯೂ ನಿಮಗೆ ಅಗತ್ಯವಿದೆ. ಹೌದು, ಈ ಅಮೂಲ್ಯ ವಿಷ್ಯಗಳು ಹಣಕ್ಕಿಂತಲೂ ಅಮೂಲ್ಯವಾಗಿದೆ ಅನ್ನೋದನ್ನು ನೆನಪಿನಲ್ಲಿಡಿ.

click me!