ಫಸ್ಟ್ ನೈಟ್ ದಿನ ಹುಡುಗರು ಈ ವಿಷ್ಯಗಳ ಬಗ್ಗೆ ಅಲರ್ಟ್ ಆಗಿರಬೇಕು…

Published : Sep 23, 2022, 05:01 PM IST

ಅಪ್ಪನ ರಾಜಕುಮಾರಿ, ಅಮ್ಮನ ಮುದ್ದಿನ ಮಗಳು ಮದುವೆಯಾಗಿ ತನ್ನ ಅತ್ತೆ-ಮಾವನ ಮನೆಗೆ ತನ್ನ ಪತಿಯೊಂದಿಗೆ ಬಂದಾಗ, ಅವಳ ಕಣ್ಣುಗಳಲ್ಲಿ ಸಾವಿರಾರು ಕನಸುಗಳಿರುತ್ತವೆ. ವಿಶೇಷವಾಗಿ ಗಂಡನ ಬಗ್ಗೆ ಅವಳು ಏನೇನೋ ಅಂದುಕೊಂಡಿರುತ್ತಾಳೆ. ಅವಳು ಪತಿಯಲ್ಲಿ ತನ್ನ ತಂದೆಯ ಒಂದು ಬಿಂಬವನ್ನು ಕಾಣುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಪತಿಯು ಮೊದಲ ರಾತ್ರಿ ಅವಳೊಂದಿಗೆ ಸಂಬಂಧ ಹೊಂದುವ ಮೊದಲು ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದ್ದರೆ. ಆತ ಆ ಸಮಯದಲ್ಲಿ ಏನೆಲ್ಲಾ ವಿಷಗಳನ್ನು ತಿಳಿದಿರಬೇಕು?  

PREV
16
ಫಸ್ಟ್ ನೈಟ್ ದಿನ ಹುಡುಗರು ಈ ವಿಷ್ಯಗಳ ಬಗ್ಗೆ ಅಲರ್ಟ್ ಆಗಿರಬೇಕು…

ಮದುವೆಯ ನಂತರ ಸಂಬಂಧವನ್ನು ಹೊಂದುವ ಒಂದು ಸಂಪ್ರದಾಯವನ್ನು ನಾವು ಹಿಂದೂ ಸಂಪ್ರದಾಯದಲ್ಲಿ ಕಾಣಬಹುದು. ಮದುವೆಯ ನಂತರ ಹುಡುಗಿಯೊಬ್ಬಳು ತನ್ನ ಗಂಡನ ಮನೆಗೆ ಬಂದಾಗ, ಅವಳು ಮೊದಲ ರಾತ್ರಿಯ ಬಗ್ಗೆ ಏನೇನೋ ಆಲೋಚನೆಗಳನ್ನು ಹೊಂದಿರುತ್ತಾಳೆ. ಮದುವೆಯ ನಂತರದ ಮೊದಲ ರಾತ್ರಿಯ ಬಗ್ಗೆ ಕುತೂಹಲವು ಇರುತ್ತದೆ, ಜೊತೆಗೆ ಭಯವೂ ಇರುತ್ತೆ. ಈ ಟೈಮ್ ನಲ್ಲಿ, ಪತಿಯು ಲೈಂಗಿಕ ಕ್ರಿಯೆಗೆ ಮೊದಲು ತನ್ನ ಹೆಂಡತಿಯನ್ನು ಯಾವ ರೀತಿ ಕಾಣಬೇಕು ಅನ್ನೋದು ತುಂಬಾನೆ ಮುಖ್ಯ.
 

26

ಪುರುಷರು ತಮ್ಮ ನವವಿವಾಹಿತ ವಧುವಿನ ಮನಸ್ಸನ್ನು ತಿಳಿದುಕೊಳ್ಳದೇ ಸೆಕ್ಸ್ ಮಾಡಲು ಪ್ರಾರಂಭಿಸುವುದನ್ನು ಅನೇಕ ಬಾರಿ ನೋಡಲಾಗಿದೆ. ಹೀಗಿರುವಾಗ, ಕೆಲವೊಮ್ಮೆ ಅವನು ಹೆಂಡತಿಗೆ ಜೀವನಪರ್ಯಂತ ನೋವನ್ನು ನೀಡುತ್ತಾನೆ. ಇಷ್ಟೇ ಅಲ್ಲ, ಇದರಿಂದಾಗಿ ಹೆಂಡತಿಯ ಮನಸ್ಸಿನಲ್ಲಿ ಗಂಡನ ಬಗ್ಗೆ ಗೌರವವೂ ಕಡಿಮೆಯಾಗುತ್ತದೆ. ಮಧುಚಂದ್ರವು (honeymoon) ಗಂಡ ಮತ್ತು ಹೆಂಡತಿ ಇಬ್ಬರ ಜೀವನಕ್ಕೂ ಒಂದು ಸುಂದರ ಕ್ಷಣವಾಗಿ ಉಳಿಯಲು ಮೂರು ವಿಷಯಗಳನ್ನು ಪುರುಷರು ನೆನಪಿಟ್ಟುಕೊಳ್ಳಬೇಕು.

36

ಫಸ್ಟ್ ನೈಟ್ ಸಮಯದಲ್ಲಿ ಪ್ರೈವೆಸಿ ಮುಖ್ಯ
ಮೊದಲನೆಯದಾಗಿ, ಫಸ್ಟ್ ನೈಟ್ (first night) ದಿನದಂದು ಪ್ರೈವೆಸಿಯನ್ನು ನೋಡಿಕೊಳ್ಳಬೇಕು. ಆದುದರಿಂದ ಪ್ರೈವೆಸಿಗೆ ಭಂಗವಾಗದ ಸ್ಥಳವನ್ನು ಆಯ್ಕೆ ಮಾಡಬೇಕು. ಈ ಸಮಯದಲ್ಲಿ ಸೇಫ್ ಮತ್ತು ಸ್ಟ್ರೆಸ್ ಫ್ರೀ ಆಗಿರೋದು ಮುಖ್ಯ. ಏಕೆಂದರೆ ವಧುವು ಮೊದಲ ರಾತ್ರಿಯಲ್ಲಿ ಸಾಕಷ್ಟು ಭಯಭೀತಳಾಗಿರುತ್ತಾಳೆ ಮತ್ತು ಏನೋ ಒಂಥರಾ ಹಿಂಜರಿಕೆ ಕಾಡುತ್ತದೆ. ಆದುದರಿಂದ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಲು ಆಕೆಗೆ ನೀವು ನೆರವಾಗಬೇಕು.

46

ವಧುವಿನೊಂದಿಗೆ ಆರಾಮವಾಗಿರಿ
ವರನು ವಧುವಿನೊಂದಿಗೆ ಮೊದಲ ರಾತ್ರಿ ಆರಾಮದಾಯಕವಾಗಿರಬೇಕು. ನೀವು ಅವರೊಂದಿಗೆ ಮಾತನಾಡಬೇಕು. ಈ ಮನೆಯೂ ತನಗೆ ಸೇರಿದ್ದು ಎಂದು ಅವರು ಭಾವಿಸುವಂತೆ ಮಾಡಬೇಕು. ಪ್ರತಿ ಕ್ಷಣವೂ ಅವರೊಂದಿಗೆ ನಿಲ್ಲಬೇಕು, ನೀವಿದ್ದೀರಿ ಎಂಬ ಧೈರ್ಯ ಅವರಲ್ಲಿ ಮೂಡಿಸಬೇಕು. ಹುಡುಗಿ ತನ್ನ ಗಂಡನಲ್ಲಿ ಅಪ್ಪನ ಒಂದು ಬಿಂಬವನ್ನು ಕಾಣುತ್ತಾಳೆ. ಈ ದಿನದಂದು, ಪತಿಯು ತನ್ನ ಹೆಂಡತಿಯ ವಿಶ್ವಾಸವನ್ನು ಗೆಲ್ಲಲು ಪ್ರಯತ್ನಿಸಬೇಕು.

56

ಲೈಂಗಿಕ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ. 
ಮದುವೆಯಾದ ಮೊದಲ ರಾತ್ರಿಯಲ್ಲಿ, ಪುರುಷರು ಎಷ್ಟು ಅನಿಯಂತ್ರಿತರಾಗುತ್ತಾರೆಂದರೆ ಅವರು ಲೈಂಗಿಕ ಸುರಕ್ಷತೆಯ (safe sex) ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ರಕ್ಷಣೆ ಅತ್ಯಗತ್ಯ. ಇದು ಯಾವುದೇ ರೀತಿಯ ಸಂಭಾವ್ಯ ಆತಂಕದಿಂದ ನಿಮ್ಮನ್ನು ದೂರವಿರಿಸುವುದಲ್ಲದೆ, ಅನೇಕ ರೀತಿಯ ಸಮಸ್ಯೆಗಳಿಂದ ರಕ್ಷಿಸುತ್ತದೆ. 

66

ಸಂಗಾತಿಯ ಭಾವನೆಗಳನ್ನು ತಿಳಿದುಕೊಳ್ಳಿ
ನಿಮ್ಮ ಹೆಂಡತಿಯು ಸಹ ಒಪ್ಪಿದರೆ ಮಾತ್ರ ಮೊದಲ ರಾತ್ರಿ ಅವರೊಂದಿಗೆ ಲೈಂಗಿಕ ಕ್ರಿಯೆ (sex) ನಡೆಸಿ. ಸಹಮತದ ಲೈಂಗಿಕತೆಯು ಉತ್ತಮವಾಗಿರುತ್ತೆ. ಇಲ್ಲದಿದ್ದರೆ, ಅದು ಬಲಾತ್ಕಾರವಾಗುತ್ತೆ. ನಿಮ್ಮ ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರು ಅದಕ್ಕೆ ಒಪ್ಪುತ್ತಾನೆಯೇ ಎಂದು ಕೇಳಿ. ಅವರು ಒಪ್ಪಿದರೆ, ನಂತರ ಮುಂದುವರಿಯಿರಿ, ಮೊದಲು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಿ ಮತ್ತು ನಂತರ ಹೊಸ ಸಂಬಂಧವನ್ನು ಪ್ರಾರಂಭಿಸಿ.
 

Read more Photos on
click me!

Recommended Stories