ಅಯ್ಯೋ, ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು, ಇನ್ನೂ ನಿಮ್ಮ ಪಾರ್ಟ್ನರ್‌ಗೆ ಗಿಫ್ಟ್ ತಗೊಂಡಿಲ್ವಾ? ಟೆನ್ಶನ್ ಬೇಡ. ಕೊನೆ ಕ್ಷಣದಲ್ಲೂ ನಿಮ್ಮ ಸಂಗಾತಿಯ ಮುಖದಲ್ಲಿ ದೊಡ್ಡ ನಗು ತರಿಸುವಂತಹ ಕೆಲವು ಐಡಿಯಾಗಳಿವೆ.
ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಕೊಡೋಕೆ ಮರೆತಿದ್ದೀರಾ? ಚಿಂತೆ ಬೇಡ, ನಿಮ್ಮ ಪ್ರೀತಿಪಾತ್ರರನ್ನು ಖುಷಿಪಡಿಸಲು ಇಲ್ಲಿವೆ ನೋಡಿ ಐದು ಸಿಂಪಲ್ ಐಡಿಯಾಗಳು.
26
ಒಂದು ಗುಲಾಬಿ ಮತ್ತು ಸರ್ಪ್ರೈಸ್ ಡೇಟ್
ಹೆಣ್ಣುಮಕ್ಕಳಿಗೆ ಸರ್ಪ್ರೈಸ್‌ಗಳು ಅಂದ್ರೆ ತುಂಬಾನೇ ಇಷ್ಟ. ಕೊನೆ ಕ್ಷಣದಲ್ಲಿ ನಿಮ್ಮ ಪಾರ್ಟ್ನರ್‌ಗೆ ಒಂದು ಕೆಂಪು ಗುಲಾಬಿ ಕೊಟ್ಟು ಸರ್ಪ್ರೈಸ್ ಡೇಟ್‌ಗೆ ಕರೆದೊಯ್ಯಿರಿ. ಇಲ್ಲವಾದರೆ ಮನೆಯಲ್ಲೇ ಅಂತಹ ವಾತಾವರಣ ಸೃಷ್ಟಿಸಬಹುದು.
36
ಫೋಟೋ ಕೊಲಾಜ್ ಅಥವಾ ವಿಡಿಯೋ
ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಫೋಟೋಗಳನ್ನು ಸೇರಿಸಿ ಒಂದು ಚಿಕ್ಕ ವಿಡಿಯೋ ಅಥವಾ ಫೋಟೋ ಕೊಲಾಜ್ ಮಾಡಿ. ಆನ್‌ಲೈನ್‌ನಲ್ಲಿ ಸಿಗುವ ಯಾವುದೇ ಫ್ರೀ ಆ್ಯಪ್ ಬಳಸಿ ಕೇವಲ 10-15 ನಿಮಿಷದಲ್ಲಿ ಈ ವಿಡಿಯೋ ಅಥವಾ ಫೋಟೋ ರೆಡಿ ಮಾಡಬಹುದು.
ಇದು ತುಂಬಾನೇ ಎಮೋಷನಲ್ ಗಿಫ್ಟ್. ಒಂದು ಸುಂದರ ಹಾಳೆಯಲ್ಲಿ ನಿಮ್ಮ ಮನಸ್ಸಿನ ಮಾತು ಬರೆಯಿರಿ. ಹಳೆಯ ನೆನಪುಗಳನ್ನು ಉಲ್ಲೇಖಿಸಿ. ಈ ಗಿಫ್ಟ್ ಸದಾ ನೆನಪಿನಲ್ಲಿ ಉಳಿಯುತ್ತೆ, ಕೊನೆ ಕ್ಷಣದಲ್ಲಿ ರೆಡಿಯೂ ಆಗುತ್ತೆ.
56
ಮೂವಿ ಡೇಟ್
ಪಾರ್ಟ್ನರ್ ಜೊತೆ ಒಂದು ರೊಮ್ಯಾಂಟಿಕ್ ಸಿನಿಮಾ ನೋಡುವುದಕ್ಕಿಂತ ಹೆಚ್ಚು ಖುಷಿ ಇನ್ನೇನಿದೆ? ನಿಮ್ಮ ಮನೆಯಲ್ಲೇ ಯಾವುದಾದರೂ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ ಥಿಯೇಟರ್‌ಗೆ ಹೋಗಿ ಪಾರ್ಟ್ನರ್ ಜೊತೆ ಮೂವಿ ಡೇಟ್ ಎಂಜಾಯ್ ಮಾಡಬಹುದು.
66
ಹಾರ್ಟ್‌ಶೇಪ್ ಚಾಕೊಲೇಟ್ ಗಿಫ್ಟ್ ಕೊಡಿ
ಚಾಕೊಲೇಟ್‌ಗಳನ್ನು ಕೇವಲ 15 ನಿಮಿಷದಲ್ಲಿ ಸುಲಭವಾಗಿ ಮಾಡಿ. ಕರಗಿದ ಚಾಕೊಲೇಟ್‌ನಲ್ಲಿ ನಿಮಗೆ ಇಷ್ಟವಾದ ನಟ್ಸ್ ಮತ್ತು ಡ್ರೈ ಫ್ರೂಟ್ಸ್ ಹಾಕಿ. ಇವನ್ನು ಹಾರ್ಟ್ ಶೇಪ್ ಮೋಲ್ಡ್‌ನಲ್ಲಿ ಹಾಕಿ 15 ನಿಮಿಷ ಫ್ರಿಡ್ಜ್‌ನಲ್ಲಿಟ್ಟರೆ ಚಾಕೊಲೇಟ್ ಸೆಟ್ ಆಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.