Chanakya Niti: ಸೋತಾಗ ಈ 4 ತಪ್ಪುಗಳನ್ನು ಮಾಡಿದರೆ ಶತ್ರುಗಳೇ ಬಲಾಢ್ಯರಾಗುತ್ತಾರೆ, ಎಚ್ಚರ!

Published : Mar 11, 2026, 11:33 AM IST

Chanakya life lessons: ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಸೋಲು ಎದುರಾಗುತ್ತದೆ. ಆದರೆ ಆ ಸೋಲನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ಮುಂದಿನ ಗೆಲುವು ನಿರ್ಧಾರವಾಗುತ್ತದೆ.  ಚಾಣಕ್ಯರ ಪ್ರಕಾರ, ಸೋತ ಸಮಯದಲ್ಲಿ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ನಮ್ಮ ಶತ್ರುಗಳಿಗೆ ಬಲ ನೀಡುತ್ತವೆ. 

PREV
16
ಮಾಡಬಾರದ ಕೆಲವು ತಪ್ಪುಗಳು

ಆಚಾರ್ಯ ಚಾಣಕ್ಯರು ತಮ್ಮ ಕಾಲದ ಅತ್ಯಂತ ಜ್ಞಾನಿ ಮತ್ತು ಮಹಾನ್ ರಾಜತಾಂತ್ರಿಕರಲ್ಲಿ ಒಬ್ಬರು. ಅವರು ಬರೆದ 'ಚಾಣಕ್ಯ ನೀತಿ' ಇಂದಿಗೂ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಜೀವನದಲ್ಲಿ ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರೂ ಯಾವಾಗಲೂ ಯಶಸ್ಸನ್ನೇ ಕಾಣಲು ಸಾಧ್ಯವಿಲ್ಲ, ಕೆಲವೊಮ್ಮೆ ಹಿನ್ನಡೆಗಳು ಉಂಟಾಗುವುದು ಸಾಮಾನ್ಯ. ಆದರೆ, ಅಂತಹ ಸಮಯದಲ್ಲಿ ನಾವು ನಡೆದುಕೊಳ್ಳುವ ರೀತಿ ನಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಸೋತ ನಂತರ ಮರೆತೂ ಮಾಡಬಾರದ ಕೆಲವು ತಪ್ಪುಗಳ ಬಗ್ಗೆ ಚಾಣಕ್ಯರು ಎಚ್ಚರಿಸಿದ್ದಾರೆ.

26
ಶತ್ರುಗಳಿಗೆ ಬಲ ನೀಡುತ್ತವೆಯಂತೆ

ಚಾಣಕ್ಯರ ಪ್ರಕಾರ, ಸೋತ ಸಮಯದಲ್ಲಿ ಈ ಕೆಳಗಿನ ತಪ್ಪುಗಳು ನಿಮ್ಮ ಶತ್ರುಗಳಿಗೆ ಬಲವನ್ನು ನೀಡುತ್ತವೆಯಂತೆ. ಹಾಗಾದರೆ ಅವು ಯಾವುವು?, ನೋಡೋಣ..

36
ನಿರಾಶೆ ಮತ್ತು ದೌರ್ಬಲ್ಯವನ್ನು ಪ್ರದರ್ಶಿಸಬೇಡಿ

ಸೋತ ನಂತರ ಅನೇಕರು ತಮ್ಮ ನಿರಾಶೆ ಮತ್ತು ದೌರ್ಬಲ್ಯವನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಾರೆ. ಇದು ನೀವು ಮಾಡುವ ಅತಿದೊಡ್ಡ ತಪ್ಪು. ನಿಮ್ಮ ಅಸಹಾಯಕತೆಯನ್ನು ಎಂದಿಗೂ ಇತರರ ಮುಂದೆ ಅಥವಾ ಸಾರ್ವಜನಿಕವಾಗಿ ಬಿಟ್ಟುಕೊಡಬೇಡಿ.

46
ದುಃಖವನ್ನು ಬಹಿರಂಗಪಡಿಸಬೇಡಿ

ನಿಮ್ಮ ಸೋಲಿನ ನೋವನ್ನು ಎಲ್ಲರ ಮುಂದೆ ವ್ಯಕ್ತಪಡಿಸುವುದು ನಿಮ್ಮ ಶತ್ರುಗಳಿಗೆ ಸಂತೋಷವನ್ನು ನೀಡುತ್ತದೆ. ಇದು ಅವರಿಗೆ ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಟ್ಟಂತೆ. ಅಂತಹ ಸಮಯದಲ್ಲಿ ತುಂಬಾ ಧೈರ್ಯದಿಂದ ಇರಬೇಕು.

56
ಕೋಪ ಅಥವಾ ದುಃಖದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ

ಸೋಲಿನ ಹತಾಶೆಯಲ್ಲಿ ಅಥವಾ ಕೋಪದ ಉದ್ವೇಗದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಉದ್ವೇಗದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತಷ್ಟು ಸಂಕಷ್ಟಕ್ಕೆ ಗುರಿಪಡಿಸುತ್ತವೆ.

66
ಆಲೋಚಿಸಲು ಸಮಯ ನೀಡಿ

ಸೋಲಿನ ನಂತರ ತಕ್ಷಣವೇ ಪ್ರತಿಕ್ರಿಯಿಸುವ ಬದಲು, ಆ ಪರಿಸ್ಥಿತಿಯಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಶಾಂತವಾಗಿ ಕುಳಿತು ಸೋಲಿಗೆ ಕಾರಣವೇನು ಎಂಬ ಬಗ್ಗೆ ಆಳವಾಗಿ ಯೋಚಿಸಿ, ನಂತರ ಮುಂದಿನ ಹೆಜ್ಜೆ ಇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories