ನಟಿ ಹಿನಾ ಖಾನ್ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ತಮಗಿದ್ದ 3ನೇ ಹಂತದ ಸ್ತನ ಕ್ಯಾನ್ಸರ್ ಬಗ್ಗೆ ಬಹಿರಂಗಪಡಿಸಿದ್ದಾರೆ. ಆದ್ದರಿಂದ ಅವರು ಪತಿ ರಾಕಿ ಜೈಸ್ವಾಲ್ ಅವರನ್ನು ಬೇರೊಬ್ಬರನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರು. ಇವರ ಸ್ಟೋರಿಗೆ ಅಮೃತಧಾರೆ ಸೀರಿಯಲ್ ಲಿಂಕ್ ಆಗುತ್ತಿದೆ. ಏನದು?
ಖ್ಯಾತ ಸೀರಿಯಲ್ ನಟಿ ಹಿನಾ ಖಾನ್ ಕಳೆದ ಜೂನ್ನಲ್ಲಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. 13-14 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಕಳೆದ ವರ್ಷ ರಾಕಿ ಜೈಸ್ವಾಲ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದು ಹಿಂದೂ-ಮುಸ್ಲಿಂ ವಿವಾಹವಾಗಿದ್ದ ಕಾರಣದಿಂದಾಗಿ ಬಹಳ ಸದ್ದು ಕೂಡ ಆಗಿತ್ತು. ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಈ ಮದುವೆ ನಡೆದಿತ್ತು.
26
ಬೇರೊಂದು ಮದುವೆ
ಆದರೆ, ಆ ಸಮಯದಲ್ಲಿ ಅವರು, ಬೇರೊಬ್ಬಳನ್ನು ಮದುವೆಯಾಗುವಂತೆ ರಾಕಿ ಜೈಸ್ವಾಲ್ ಅವರಿಗೆ ಒತ್ತಾಯಿಸಿದ್ದನ್ನು ಈಗ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಇದೆ. ನಟಿ ಹಿನಾ ಖಾನ್ ಮದುವೆಯಾಗುವ ತಯಾರಿಯಲ್ಲಿ ಇದ್ದಾಗಲೇ ಅವರಿಗೆ ಕ್ಯಾನ್ಸರ್ ಬಂದು ಅಪ್ಪಳಿಸಿತ್ತು. 3 ನೇ ಹಂತದ ಬ್ರೆಸ್ಟ್ ಕ್ಯಾನ್ಸರ್‌ನಿಂದ ಅವರು ಬಳಲುತ್ತಿದ್ದರು.
36
ಕ್ಯಾನ್ಸರ್ ಕಾರಣ
ಇದೇ ಕಾರಣಕ್ಕೆ ಅವರು ಬೇರೊಬ್ಬಳನ್ನು ಮದುವೆಯಾಗುವಂತೆ ಭಾವಿ ಪತಿಗೆ ಒತ್ತಾಯಿಸಿದ್ದರು. ಆದರೆ ಇಷ್ಟು ಸುದೀರ್ಘ ಅವಧಿಯವರೆಗೆ ಸಂಬಂಧ ಹೊಂದಿದ್ದ ಬಳಿಕ, ತಾನು ಏನೇ ಆದರೂ ಬೇರೆ ಮದುವೆಯಾಗುವುದಿಲ್ಲ. ನಿನ್ನನ್ನೇ ಆಗುವುದು ಎಂದು ರಾಕಿ ಮದುವೆ ಮಾಡಿಕೊಂಡಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ. ಮದುವೆಯ ಸ್ವಲ್ಪ ಸಮಯದ ನಂತರ, ಅವರು ರಿಯಾಲಿಟಿ ಶೋ "ಪತಿ, ಪತ್ನಿ ಔರ್ ಪಂಗಾ"ದಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ, ಮದುವೆಯನ್ನು ಪ್ರಚಾರದ ವಸ್ತು ಎಂದು ಹಲವರು ಹಂಗಿಸಿದ್ದೂ ಇದೆ.ಆದರೆ, ಇದಕ್ಕೆ ಜೋಡಿ ತಲೆ ಕೆಡಿಸಿಕೊಳ್ಳಲಿಲ್ಲ.
ಹಿನಾ ಖಾನ್ ಮತ್ತು ರಾಕಿ ಜೈಸ್ವಾಲ್ "ಯೇ ರಿಷ್ಟಾ ಕ್ಯಾ ಕೆಹ್ಲತಾ ಹೈ" ಹಿಂದಿ ಸೀರಿಯಲ್ನ ಸೆಟ್‌ನಲ್ಲಿ ಭೇಟಿಯಾದರು, ಅಲ್ಲಿ ಅವರು ಪ್ರೀತಿಯಲ್ಲಿ ಸಿಲುಕಿದರು. ಸುಮಾರು 13-14 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಕಳೆದ ವರ್ಷ ವಿವಾಹವಾದರು. "ನಾವು 13-14 ವರ್ಷಗಳ ಕಾಲ ಬಹಳ ಕಾಲ ಡೇಟಿಂಗ್ ಮಾಡಿದ್ದರಿಂದ ಮದುವೆಯಾದೆವು. ನಿಜ ಹೇಳಬೇಕೆಂದರೆ, ಈಗಲಾದರೂ ಮದುವೆ ಆಗುತ್ತಿರಲಿಲ್ಲ. ಎಲ್ಲವನ್ನೂ ತಿಂಗಳುಗಳ ಮೊದಲೇ ನಿರ್ಧರಿಸಲಾಗಿತ್ತು. ಇದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿತ್ತು, ಆದ್ದರಿಂದ ನಾವು ಎಲ್ಲವನ್ನೂ ಸಂಪೂರ್ಣವಾಗಿ ಯೋಜಿಸಬೇಕಾಗಿತ್ತು. ಭವಿಷ್ಯ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲದ ಕಾರಣ ನಾವು ಮದುವೆಯಾದೆವು. ಮದುವೆಯ ದಿನಾಂಕವನ್ನು ಸಹ ಮೊದಲೇ ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.
56
ನನ್ನ ಬೆನ್ನೆಲುಬಾಗಿ ನಿಂತ
ತಮ್ಮ ಸಂಬಂಧದಲ್ಲಿನ ಕಠಿಣ ಹಂತದ ಬಗ್ಗೆ ಮಾತನಾಡುತ್ತಾ, ಹಿನಾ, ತಮ್ಮ ಕ್ಯಾನ್ಸರ್ ಹೋರಾಟದ ಸಮಯದಲ್ಲಿ, ರಾಕಿಯನ್ನು ಬೇರೊಬ್ಬರನ್ನು ಮದುವೆಯಾಗಲು ಪದೇ ಪದೇ ಕೇಳಿಕೊಂಡಿದ್ದಳು ಎಂದು ಬಹಿರಂಗಪಡಿಸಿದರು. ಆದರೆ ರಾಕಿ ಹಾಗೆ ಮಾಡಲಿಲ್ಲ. ಪ್ರತಿ ಹಂತದಲ್ಲಿಯೂ ನನ್ನ ಸಪೋರ್ಟ್ಗೆ ನಿಂತರು. ಇದೇ ಕಾರಣಕ್ಕೆ ನಾನು ಸಾವನ್ನು ಜಯಿಸಲು ಸಾಧ್ಯವಾಯಿತು ಎನ್ನುತ್ತಾರೆ ನಟಿ.
66
ಅಮೃತಧಾರೆ ಸೀರಿಯಲ್ ನೆನಪಿಸಿಕೊಂಡ ಕನ್ನಡಿಗರು
ನಟಿ ಹಿನಾ ಖಾನ್ ಮತ್ತು ರಾಕಿ ಅವರ ಲವ್ ಸ್ಟೋರಿ ಅಮೃತಧಾರೆಯ ಭೂಮಿಕಾ ಮತ್ತು ಗೌತಮ್ಗಿಂತ ಭಿನ್ನವಾಗಿರಬಹುದು. ಆದರೆ ಒಂದು ಸಾಮ್ಯತೆ ಎಂದರೆ, ಸೀರಿಯಲ್ನಲ್ಲಿ ಕೂಡ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭೂಮಿಕಾಗೆ ಗೌತಮ್ ಪ್ರೀತಿಯೇ ಆಸರೆಯಾಯಿತು. ಇಲ್ಲಿ ಹಿನಾ ಖಾನ್ ತಮ್ಮ ಕ್ಯಾನ್ಸರ್ ಗೆಲ್ಲಲು ಭಾವಿ ಪತಿಯ ಪ್ರೀತಿಯೇ ಕಾರಣ ಎಂದಿದ್ದಾರೆ. ಕ್ಯಾನ್ಸರ್ನಂಥ ಕಾಯಿಲೆಗೆ ಚಿಕಿತ್ಸೆಯ ಜೊತೆಜೊತೆಗೆ ಮನೆಯವರ ಸಹಕಾರ, ಪ್ರೀತಿ ಎಷ್ಟು ಮುಖ್ಯ ಎನ್ನುವುದು ಸಾಬೀತಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.