ಲವ್​ ಮಾಡ್ತಿದ್ರೂ Vijay-Trisha ಮದ್ವೆಯಾಕಾಗಿಲ್ಲ? ಇಬ್ಬರ ಸಂಬಂಧಕ್ಕೆ ತಡೆಯೊಡ್ಡಿದ ಆ ವ್ಯಕ್ತಿಯ ನೆನೆದ ಹಿರಿಯ ನಟಿ

Published : Aug 10, 2026, 02:09 PM IST

ಗಿಲ್ಲಿ ಸಿನಿಮಾ ಸಮಯದಲ್ಲಿ ನಟ ವಿಜಯ್ ಮತ್ತು ತ್ರಿಷಾ ಪ್ರೀತಿಸುತ್ತಿದ್ದರು. ಆದರೆ ವಿಜಯ್ ತಂದೆಯ ವಿರೋಧದಿಂದಾಗಿ ಇಬ್ಬರೂ ದೂರವಾದರು ಎಂದು ನಟಿ ಕುಟ್ಟಿ ಪದ್ಮಿನಿ ಬಹಿರಂಗಪಡಿಸಿದ್ದಾರೆ. ವಿಜಯ್ ದಾಂಪತ್ಯದಲ್ಲಿನ ಬಿರುಕಿಗೆ ತ್ರಿಷಾ ಕಾರಣ ಎಂಬ ಆರೋಪ ಸುಳ್ಳು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

PREV
16
ವಿಜಯ್​-ತ್ರಿಷಾ ಸಂಬಂಧ

ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ಜೋಸೆಫ್​ ವಿಜಯ್​ ಮತ್ತು ನಟಿ ತ್ರಿಷಾ ಕೃಷ್ಣನ್​ (Josheph Vijay and Trisha Krishnan) ಅವರ ವಿಷಯ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿದೆ. ವಿಜಯ್​ ಅವರು ತಮಿಳುನಾಡಿನ ಮುಖ್ಯಮಂತ್ರಿ ಆದ ಮೇಲೆ ಇವರಿಬ್ಬರ ಸಂಬಂಧ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೂ ಸ್ವಲ್ಪ ದಿನಗಳ ಮೊದಲು ವಿಜಯ್​ ಮತ್ತು ಪತ್ನಿ ಸಂಗೀತಾ ಅವರ ಡಿವೋರ್ಸ್​ ಸುದ್ದಿ ಸದ್ದು ಮಾಡಿತ್ತು. ಆಗಲೂ ಇದಕ್ಕೆ ಕಾರಣವಾಗಿದ್ದು ತ್ರಿಷಾ ಎನ್ನುವ ಗಂಭೀರ ಆರೋಪವೂ ಕೇಳಿಬಂದಿತ್ತು.

26
ಮದುವೆ ಯಾಕಾಗಿಲ್ಲ?

ಹಾಗಿದ್ದರೆ ತ್ರಿಷಾ ಕೃಷ್ಣನ್​ ಮತ್ತು ವಿಜಯ್​ ನಡುವೆ ಸ್ನೇಹ ಇದ್ದದ್ದು ನಿಜನಾ? ಅವರಿಬ್ಬರ ನಡುವೆ ಬ್ರೇಕಪ್​ ಆಗಿತ್ತಾ ಅಥ್ವಾ ಇನ್ನೇನು ಆಗಿತ್ತು? ಕ್ಲೋಸ್ ಆಗಿದ್ರೂ ಅವರಿಬ್ಬರೂ ಮದುವೆಯಾಕೆ ಆಗಲಿಲ್ಲ ಎನ್ನುವ ಸತ್ಯವನ್ನು ತ್ರಿಷಾ ಅವರನ್ನು ಅತ್ಯಂತ ಸಮೀಪದಿಂದ ಬಲ್ಲ, ಅವರನ್ನು ತಮ್ಮ ಮಗಳಂತೆಯೇ ನೋಡುತ್ತಿರುವ ಹಿರಿಯ ನಟಿ ಕುಟ್ಟಿ ಪದ್ಮಿನಿ ತಿಳಿಸಿದ್ದಾರೆ. ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಸತ್ಯವನ್ನು ನಟಿ ಹೊರಹಾಕಿದ್ದಾರೆ.

36
ತ್ರಿಷಾ ನನ್ನ ಮಗಳಿದ್ದಂತೆ

ವಿಜಯ್​ ಮತ್ತು ತ್ರಿಷಾ ನಡುವೆ ಸ್ನೇಹ ಇದ್ದದ್ದು ನಿಜ ಎನ್ನುತ್ತಲೇ ಕುಟ್ಟಿ ಪದ್ಮಿನಿ ಅವರು, 'ತ್ರಿಷಾ ನನಗೆ ಮಗಳಿದ್ದಂತೆ. ಆಕೆಯ ಚರಿತ್ರೆಯ ಬಗ್ಗೆ ವಿನಾಕಾರಣ ಇನ್ನಿಲ್ಲದ ಆರೋಪ ಮಾಡಲಾಗುತ್ತಿದೆ. ಇದು ತುಂಬಾ ಬೇಸರದ ಸಂಗತಿ. ವಿಜಯ್​ ಜೊತೆ ತ್ರಿಷಾ ಅವರ ಸ್ನೇಹ ಇದ್ದುದೇ ವಿಜಯ್​ ಬಾಳಲ್ಲಿ ಬಿರುಗಾಳಿ ಬಂತು ಎಂದೆಲ್ಲಾ ಹೇಳಲಾಗುತ್ತಿದೆ. ಇವೆಲ್ಲವೂ ಸತ್ಯಕ್ಕೆ ದೂರವಾದದ್ದು' ಎಂದಿದ್ದಾರೆ ಪದ್ಮಿನಿ ಅವರು.

46
ವಿಜಯ್​ ದಾಂಪತ್ಯದಲ್ಲಿ ಬಿರುಗಾಳಿ

ವಿಜಯ್​ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಈಗಿನ ಸುದ್ದಿಯಲ್ಲ. ಹಲವು ವರ್ಷಗಳಿಂದ ಅವರ ನಡುವೆ ಭಿನ್ನಾಭಿಪ್ರಾಯ ಇತ್ತು. ಗಂಡ- ಹೆಂಡತಿ ನಡುವೆ ಸಾವಿರ ಕಾರಣ ಇರುತ್ತವೆ. ಆದರೆ, ಪ್ರತಿಯೊಂದಕ್ಕೂ ಒಬ್ಬ ಹೆಣ್ಣುಮಗಳನ್ನ ಮಾತ್ರ ಹೊಣೆಗಾರರನ್ನಾಗಿ ಮಾಡೋದು ಸಂಪೂರ್ಣ ತಪ್ಪು. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನೋದನ್ನು ಎಲ್ಲರೂ ಗಮನಿಸಬೇಕು ಎಂದಿದ್ದಾರೆ ಪದ್ಮಿನಿ.

56
ಪ್ರೀತಿ ಇದ್ದದ್ದು ನಿಜ

ಇಬ್ಬರು ಸ್ನೇಹಿತರು ಸೌಹಾರ್ದತೆಯಿಂದ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸಿದರೆ ಅದನ್ನೇ ತಪ್ಪು ಎಂದು ನೋಡುವುದು ಸರಿಯಲ್ಲ ಎಂದಿರುವ ಅವರು, ತ್ರಿಷಾ ಮತ್ತು ವಿಜಯ್​ ಮದುವೆ ಏಕೆ ಆಗಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದಾರೆ. “2004ರಲ್ಲಿ ಬಿಡುಗಡೆಯಾದ ಗಿಲ್ಲಿ ಸಿನಿಮಾ ಮಾಡುವ ಸಮಯದಲ್ಲಿ ವಿಜಯ್ ಮತ್ತು ತ್ರಿಷಾ ನಡುವೆ ಪ್ರೀತಿ ಇತ್ತು ನಿಜ. ಆದರೆ ಅವರು ಒಂದಾಗದೇ ಇರಲು ಕಾರಣ, ವಿಜಯ್‌ ಅವರ ತಂದೆ ಎಸ್‌ಎ ಚಂದ್ರಶೇಖರ್‌. ಅವರಿಗೆ ಈ ಸಂಬಂಧ ಇಷ್ಟ ಇರಲಿಲ್ಲ. ಆದ್ದರಿಂದ ಇಬ್ಬರೂ ಬೇರೆ ಬೇರೆ ದಾರಿ ನೋಡಕೊಂಡರು ಎಂದಿದ್ದಾರೆ ಪದ್ಮಿನಿ.

66
ಯಾವುದೇ ಸಂಬಂಧವಿಲ್ಲ

ಅದಾದ ಬಳಿಕ ಹಲವು ವರ್ಷ ಇಬ್ಬರೂ ಭೇಟಿಯಾಗಿರಲಿಲ್ಲ. ಹಲವು ವರ್ಷಗಳ ಬಳಿಕ ಮತ್ತೆ ಒಟ್ಟಿಗೇ ನಟಿಸಿದರು. ಅದಕ್ಕೂ ವಿಜಯ್​ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಿರುವಾಗ ವಿಜಯ್‌ ಕುಟುಂಬದ ಸಮಸ್ಯೆಗೆ ತ್ರಿಷಾ ಕಾರಣ ಅನ್ನೋದು ಸಂಪೂರ್ಣ ಸುಳ್ಳು ಎಂದರು. ವಿಜಯ್‌ ಇಂದು ದೊಡ್ಡ ಹೆಸರು ಮಾಡಿದ್ದರೂ, ಅವರು ತಮ್ಮ ಸರಳ ಜೀವನವನ್ನ ಮುಂದುವರಿಸಿದ್ದಾರೆ. ಯಾರ ಬೆನ್ನ ಹಿಂದೆಯೂ ಕುತಂತ್ರ ಮಾಡದೆ ನೇರವಾಗಿ ಜೀವಿಸುತ್ತಿದ್ದಾರೆ. ವಿನಾಕಾರಣ ಅವರ ಹೆಸರನ್ನು ಹಾಳು ಮಾಡುವುದು ಸರಿಯಲ್ಲ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories