Love and Cheating : ನೀವು ಪ್ರೀತಿಸುತ್ತಿರುವ ವ್ಯಕ್ತಿ ನಂಬಿಕೆಗೆ ಅರ್ಹನೇ?

First Published | Nov 19, 2021, 5:03 PM IST

ಪ್ರೀತಿಯಲ್ಲಿ ಬಿದ್ದ ಮೇಲೆ ಜೀವನ ಪೂರ್ತಿ (life long) ಸಂಗಾತಿ ಜೊತೆಯಾಗಿ ಬಾಳುವ ಕನಸು ಕಾಣುತ್ತಾರೆ. ಆದರೆ ಎಲ್ಲರೂ ಪ್ರೀತಿ ಮಾಡಲು ಅರ್ಹರೇ? ಖಂಡಿತಾ ಇಲ್ಲ. ಕೆಲವರು ಮೋಸ ಮಾಡುತ್ತಾರೆ. ಸಂಗಾತಿಯ ಸನ್ನೆಗಳು ಮತ್ತು ಮಾತುಗಳನ್ನು ಕುರುಡಾಗಿ ನಂಬಬೇಡಿ, ಏಕೆಂದರೆ ನೀವು ತುಂಬಾ ನಂಬಿಕೆಯನ್ನು ತೋರಿಸುತ್ತಿರುವ ವ್ಯಕ್ತಿ ನಿಮ್ಮ ನಂಬಿಕೆಗೆ ಅರ್ಹರಾಗಿಲ್ಲದೆ ಇರಬಹುದು. .

ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿರುವಾಗ,  ಸಂಗಾತಿ ನಿಮಗೆ ಎಷ್ಟು ಪ್ರಾಮಾಣಿಕರಾಗಿದ್ದಾರೆ ಎಂಬುದನ್ನು ತೋರಿಸುವ ಅನೇಕ ಚಿಹ್ನೆಗಳಿವೆ. ಅವುಗಳ ಬಗ್ಗೆ ನೀವು ಅರ್ಥ ಮಾಡಿಕೊಳ್ಳಬೇಕು. ಯಾರನ್ನೂ ಕುರುಡಾಗಿ ನಂಬಬೇಡಿ, ಮತ್ತು ನಿಮ್ಮ ಭವಿಷ್ಯವನ್ನು ನಿರ್ಮಿಸಲು ನೀವು ಕನಸು ಕಾಣುತ್ತಿರುವ ಜನರು ನಿಮ್ಮಂತೆಯೇ ನಿಮ್ಮ ಬಗ್ಗೆ ಗಂಭೀರವಾಗಿರುತ್ತಾರೆ ಎಂದು ತಿಳಿಯಿರಿ. 

ನೀವು ಸುಳ್ಳುಗಾರನೊಂದಿಗೆ ಡೇಟಿಂಗ್ (dating) ಮಾಡುತ್ತಿದ್ದರೆ, ಅವರ ನಡವಳಿಕೆಯು ನೀವು ಎಂದಿಗೂ ಊಹಿಸದ ಚಿಹ್ನೆಗಳನ್ನು ತೋರಿಸಬಹುದು. ಆದ್ದರಿಂದ ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಪ್ರಾಮಾಣಿಕರಾಗಿದ್ದಾರೆಯೇ ಎಂದು ಕಂಡು ಹಿಡಿಯಲು ನೀವು ಅರ್ಥಮಾಡಿಕೊಳ್ಳಬಹುದಾದ ಕೆಲವು ಚಿಹ್ನೆಗಳನ್ನು ಅರಿಯೋಣ. ಮತ್ತು ಆದಷ್ಟು ಬೇಗ ಅವರಿಂದ ದೂರ ಆಗೋದು ಉತ್ತಮ. 

Tap to resize

ವಾಸ್ತವಾಂಶಗಳನ್ನು ಪರಿಶೀಲಿಸಿ
ಕೆಲವು ಜನ ಪ್ರೀತಿಸುತ್ತಿದ್ದಾಗ ಯಾವಾಗಲೂ ಸುಳ್ಳು ಹೇಳುವ ಮತ್ತು ಮೋಸ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ,  ಈ ಕುರಿತು ನಿಮಗೆ ಸೂಚನೆಯೂ ಸಿಗೋದಿಲ್ಲ. ಅವರು ಅಷ್ಟೊಂದು ನಾಜೂಕಾಗಿ ನಿಮ್ಮ ಜೊತೆ ವ್ಯವಹರಿಸುತ್ತಾರೆ. ಆದರೆ ಈ ನಡುವಲ್ಲೂ ಅವರು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು (mistakes of partner) ತಿಳಿಯುವ ಮೂಲಕ ಅವರು ಹೇಗೆಂದು ತಿಳಿದುಕೊಳ್ಳಿ. 

ಸಂಗಾತಿ ಹೇಳಿದ್ದೆಲ್ಲವೂ  ಸರಿಯೋ ತಪ್ಪೋ. ಈ ಸತ್ಯವನ್ನು ತಿಳಿಯಲು, ಅವರು ಅದನ್ನು ನಿರೀಕ್ಷಿಸದಿದ್ದಾಗ ಇದ್ದಕ್ಕಿದ್ದಂತೆ ಈ ವಿಷಯದ ಬಗ್ಗೆ ಮತ್ತೆ ಮಾತನಾಡಿ. ಅವರು ಹಿಂಜರಿದರೆ ಅಥವಾ ಒಂದೇ ರೀತಿಯ ಮಾತುಗಳು ಮತ್ತು ಸನ್ನೆಗಳನ್ನು ಹೊಂದಿಲ್ಲದಿದ್ದರೆ, ಅಥವಾ ಅವರು ಹೇಳುವ ಹಳೆಯ ಮಾತುಗಳಿಗೆ ಹೊಂದಿಕೆಯಾಗದಿದ್ದರೆ, ಅವರು ನಿಮಗೆ ಸತ್ಯವನ್ನು ಹೇಳಿಲ್ಲ ಎಂದು ಅರ್ಥಮಾಡಿಕೊಳ್ಳಿ.

ಹಿಂಜರಿಕೆ (Hesitation )
ಸಂಗಾತಿ ಹೇಳಿದ್ದನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅವರ ವಿವರಗಳ ಬಗ್ಗೆ ಗಮನ ಹರಿಸಿ. ಅವನು ಸತ್ಯವನ್ನು ಹೇಳುತ್ತಿಲ್ಲ ಎಂದು ನೀವು ಭಾವಿಸಿದರೆ, ಆ ವಿವರವನ್ನು ನೆನಪಿನಲ್ಲಿಡಿ. ಉದಾಹರಣೆಗೆ, ಅವನು ಸ್ನೇಹಿತ ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಉಲ್ಲೇಖಿಸಿದರೆ, ಕೆಲವು ದಿನಗಳ ನಂತರ ಅವನನ್ನು ಮತ್ತೆ ಅದೇ ವಿಷಯವಾಗಿ ಪ್ರಶ್ನಿಸಿ. ಅವನು ಅಸಮಾಧಾನಗೊಂಡರೆ ಅಥವಾ ಅದರ ಬಗ್ಗೆ ಮತ್ತೆ ಮಾತನಾಡಲು ಹಿಂಜರಿದರೆ, ಏನೋ ತಪ್ಪಾಗಿದೆ ಎಂದು ತಿಳಿದುಕೊಳ್ಳಿ.

ವಿಷಯಗಳನ್ನು ಮರೆಮಾಚುವುದು (Hiding things)
ನೀವು ಯಾರೊಂದಿಗಾದರೂ ಸಂಬಂಧದಲ್ಲಿರುವಾಗ ಗೌಪ್ಯತೆಯನ್ನು ಇಟ್ಟುಕೊಳ್ಳುವುದು ಅಥವಾ ಪರಸ್ಪರ ವಿಷಯಗಳನ್ನು ಮರೆಮಾಚುವುದು ಸರಿಯಲ್ಲ. ನಿಮ್ಮಿಬ್ಬರ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇಬ್ಬರೂ ಜೊತೆಯಾಗಿ ಹಂಚಿಕೊಳ್ಳಬೇಕು. ಆದರೆ ಒಂದು ವೇಳೆ ಅವರು ಎಲ್ಲವನ್ನು ಗುಟ್ಟು ಮಾಡುತ್ತಿದ್ದರೆ ಅದರ ಬಗ್ಗೆ ಗಮನ ಹರಿಸಿ. 

ಹೌದು, ಸ್ವಲ್ಪ ಗೌಪ್ಯತೆ ಅಗತ್ಯ, ಆದ್ದರಿಂದ ಇವೆರಡರ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ. ಆದರೆ ಮುಖ್ಯ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ಯಾರಾದರೂ ತಮ್ಮ ಸ್ನೇಹಿತರು, ಉದ್ಯೋಗ, ಕುಟುಂಬ ಮತ್ತು ಜೀವನಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡದಿದ್ದರೆ, ನೀವು ಸ್ವಲ್ಪ ಜಾಗರೂಕರಾಗಿರಬೇಕು.

ನೆಪಗಳನ್ನು ಹೇಳುವುದು (giving reasons)
ಒಂದಲ್ಲ ಎರಡು ಬಾರಿ ಯಾವುದಾದರೂ ನೆಪ ಹೇಳಿದರೆ ಸರಿ, ಆದರೆ ಪ್ರತಿಯೊಂದು ವಿಷಯಕ್ಕೂ ನೆಪ ಹೇಳುವುದು ಸರಿಯಲ್ಲ. ನಿಮ್ಮ ಸಂಗಾತಿ ಪ್ರತಿಯೊಂದು ವಿಷಯಕ್ಕೂ ನೆಪ ಹೇಳುತ್ತಿದ್ದರೆ, ಅವನು ಮೋಸಗಾರ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಇಂತವರಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಇದ್ದರೆ ಉತ್ತಮ. 

ಸುಳ್ಳುಗಾರರು ಅದಕ್ಕೆ ಒಗ್ಗಿಕೊಂಡಿದ್ದಾರೆ ಮತ್ತು ಅದನ್ನು ಮತ್ತೆ ಮತ್ತೆ ಬಳಸುತ್ತಾರೆ. ಏನೇ ವಿಷಯಗಳ ಬಗ್ಗೆ ಮಾತನಾಡಲಿ, ಅವರು ಅದರಲ್ಲಿ ನೆಪಗಳನ್ನು ಹಾಕುತ್ತಾರೆ, ಇದರಿಂದ ಅವರ ಮೇಲೆ ಆರೋಪ ಬರುವುದಿಲ್ಲ. ಅವರು ಮಾಡಿದ ಕೆಲಸದ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳುವುದಿಲ್ಲ ಅಥವಾ ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ.

Latest Videos

click me!