Parenting Tips : ಮಗುವಿನ ವರ್ತನೆಯ ಮೇಲೆ ಈ ವಿಷಯಗಳು ಪರಿಣಾಮ ಬೀಳಬಹುದು

First Published | Nov 19, 2021, 4:24 PM IST

ಮಕ್ಕಳನ್ನು ಬೆಳೆಸುವುದು ಸುಲಭದ ಕೆಲಸ ಅಲ್ಲ. ಹೆಚ್ಚಿನ ಗಮನ ಹರಿಸಬೇಕಾಗಿರೋದು ಮುಖ್ಯ. ಪೋಷಕರು (parents) ತಮ್ಮ ಮಗುವಿನ ಮನಸ್ಥಿತಿ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರಲು ಅನೇಕ ಮಾರ್ಗಗಳಿವೆ. ಕೆಲವೊಂದು ವಿಷಯಗಳು ಮಕ್ಕಳ ಮೇಲೆ ನೀವು ಊಹಿಸಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಮಾಡಬಹುದು. ಆ ಬಗ್ಗೆ ಎಚ್ಚರ ಇರಲಿ. 

ಈ ಕೆಲವು ವಿಷಯಗಳು ಮಕ್ಕಳಲ್ಲಿ ದುರ್ನಡತೆಯನ್ನು ಪ್ರಚೋದಿಸಬಹುದು
ಪೋಷಕರು ತಮ್ಮ ಮಗುವಿನ ಮನಸ್ಥಿತಿ ಮತ್ತು ನಡವಳಿಕೆಯ (character) ಮೇಲೆ ಪರಿಣಾಮ ಬೀರಲು ಅನೇಕ ಮಾರ್ಗಗಳಿವೆ. ವಿಷಕಾರಿ ಪಾಲನೆಯು ಅಥವಾ ತುಂಬಾ ಸ್ಟ್ರಿಕ್ಟ್ ಆಗಿ ಮಕ್ಕಳ ಜೊತೆ ನಡೆದುಕೊಳ್ಳುವುದುನೀವು ಊಹಿಸಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಮಾಡಬಹುದು.

ಮಕ್ಕಳ ಮನಸ್ಥಿತಿಯು ಇತರ ಅಂಶಗಳಿಂದ ಬೇಗನೆ ಪ್ರಭಾವಿತವಾಗಬಹುದು. ಪೋಷಕರ ನೇರ ಪಾಲ್ಗೊಳ್ಳುವಿಕೆಯ ಹೊರತಾಗಿ, ಮಗುವಿನ ಅನುಚಿತ ವ್ಯಕ್ತಿತ್ವಕ್ಕೆ ಕಾರಣವಾಗುವ ಇತರ ಅಂಶಗಳಿವೆ.

ಸಾಕಷ್ಟು ನಿದ್ರೆ ಇಲ್ಲ (less sleep)
ಮಕ್ಕಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ನಿದ್ರೆ ಬೇಕು, ಇಲ್ಲದಿದ್ದರೆ ಅವರು ಕಿರಿಕಿರಿಯ ಚಿಹ್ನೆಗಳನ್ನು ತೋರಿಸುತ್ತಾರೆ, ಇದು ಕೋಪದ ಹಲವಾರು ಘಟನೆಗಳನ್ನು ಪ್ರಚೋದಿಸುತ್ತದೆ.

Tap to resize

ಅನಾರೋಗ್ಯಕರ ಆಹಾರ ಸೇವನೆ (unhealthy food)
ನಿಮ್ಮ ಮಗುವಿನ ಆಹಾರವು ಅವರ ನಡವಳಿಕೆಯನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಸಿವು ಹೆಚ್ಚಾಗಿ ಮಕ್ಕಳಲ್ಲಿ ಮಾತ್ರವಲ್ಲ, ವಯಸ್ಕರಲ್ಲೂ ಸಹ ಸಮಸ್ಯೆಗೆ ಕಾರಣವಾಗುತ್ತದೆ. ಆದುದರಿಂದ ಮಕ್ಕಳಿಗೆ ಸರಿಯಾದ ಸಮಯಕ್ಕೆ ಉತ್ತಮ ಆಹಾರಗಳನ್ನು ನೀಡಬೇಕು. ಹೆಚ್ಚು ಹಸಿವಾದರೆ ಮಕ್ಕಳು ಕೋಪಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ನಿರ್ಜಲೀಕರಣ (dehydration)
ನಿಮ್ಮ ಮಗು ಸಾಕಷ್ಟು ನೀರು ಕುಡಿಯುತ್ತದೆ ಮತ್ತು ಹೈಡ್ರೇಟ್ ಆಗಿರುತ್ತವೆ ಎಂದು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ಅವರು ಸಕ್ರಿಯರಾಗುತ್ತಾರೆ ಮತ್ತು ಅವರ ಮನಸ್ಥಿತಿಯನ್ನು ಚೆನ್ನಾಗಿರುತ್ತದೆ. ಆದುದರಿಂದ ಮಕ್ಕಳಿಗೆ ಬಾಯಾರಿಕೆ ಆಗದೆ ಇದ್ದರೂ ಸಹ ಪದೇ ಪದೇ ನೀರು ನೀಡುತ್ತಿದ್ದರೆ ಅರೋಗ್ಯ ಉತ್ತಮವಾಗಿರುತ್ತದೆ.  

ದೈಹಿಕ ನಿಷ್ಕ್ರಿಯತೆ (no physical exercise)
ಮಕ್ಕಳು ಹೊರಾಂಗಣ ಚಟುವಟಿಕೆಗಳು ಮತ್ತು ಆಟಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ಇದು ಅವರನ್ನು ಸಕ್ರಿಯರಾಗಿರುವಂತೆ ಮಾಡುತ್ತದೆ ಮತ್ತು ಇದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ಅದರ ಬದಲು ಮಕ್ಕಳನ್ನು ಮನೆಯಲ್ಲೇ ಇಟ್ಟು, ಮೊಬೈಲ್ ಕೊಟ್ಟರೆ ಮಕ್ಕಳು ಹೆಚ್ಚು ಸಕ್ರಿಯರಾಗಿರದೆ ಅನಾರೋಗ್ಯ ಉಂಟಾಗುತ್ತದೆ. 

ಸ್ಕ್ರೀನ್ ಸಮಯ ಹೆಚ್ಚಳವನ್ನು ತಪ್ಪಿಸಿ  (screen timing)
ಮಗುವನ್ನು ಫೋನ್ ಗಳು ಮತ್ತು ದೂರದರ್ಶನಕ್ಕೆ ಒಗ್ಗಿಸಿಕೊಳ್ಳುವುದು ಅವರ ನಡವಳಿಕೆಯ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಯಾವಾಗ ನಿರ್ಬಂಧಮಾಡಬೇಕೆಂದು ತಿಳಿಯಿರಿ. ಸ್ವಲ್ಪ ಸಮಯ ಮಾತ್ರ ಮೊಬೈಲ್ ಹಿಡಿಯುವಂತೆ ಮಾಡಿ, ಅದಕ್ಕೆ ಹೆಚ್ಚು ಅಡಿಕ್ಟ್ ಆಗುವುದನ್ನು ತಪ್ಪಿಸಿ. 

ಭಯ - ಅಭದ್ರತೆಯ ಭಾವನೆ (insecure)
ಯಾವಾಗಲೂ ಮಕ್ಕಳಿಗೆ ಸುರಕ್ಷಿತ ಸ್ಥಳವನ್ನು ರಚಿಸಿ. ಅವರ ಭಯಗಳು ಅಭದ್ರತೆಯ ಭಾವನೆಗೆ ಕಾರಣವಾಗಬಹುದು, ಅವರ ನಡವಳಿಕೆಯನ್ನು ಅನೇಕ ರೀತಿಯಲ್ಲಿ ಬದಲಾಯಿಸಬಹುದು. ಅವರ ಭಯವನ್ನು ದೂರ ಮಾಡುವ ಕ್ರಮವನ್ನು ಅನುಸರಿಸಿ. ನೀವು ಅವರೊಂದಿಗೆ ಇದ್ದೀರಿ ಎನ್ನುವುದನ್ನು ಅವರಿಗೆ ತಿಳಿಯುವಂತೆ ಮಾಡಿ.            

Latest Videos

click me!