ಗುಟ್ಟಾಗಿ ಮದುವೆಯಾಗಿದ್ದು ಏಕೆ? ಕೊನೆಗೂ ಮೌನ ಮುರಿದ ಅಮೃತವರ್ಷಿಣಿ ನಟಿ ರಜಿನಿ ಹೇಳಿದ್ದೇನು

Published : Jun 15, 2026, 07:35 PM IST

'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಅರುಣ್ ಗೌಡ ಅವರೊಂದಿಗಿನ ರಹಸ್ಯ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಒಳ್ಳೆಯ ವಿಷಯಗಳನ್ನು ಮೊದಲೇ ಹೇಳಿದರೆ ನಡೆಯುವುದಿಲ್ಲ ಎಂಬ ನಂಬಿಕೆಯಿಂದ ಮದುವೆಯನ್ನು ಸರಳವಾಗಿ ಮತ್ತು ಗುಟ್ಟಾಗಿ ಮಾಡಿಕೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

PREV
16
ರಜಿನಿ- ಅರುಣ್‌ ಜೋಡಿ

'ಅಮೃತವರ್ಷಿಣಿ', ಹಿಟ್ಲರ್‌ ಕಲ್ಯಾಣ, ‘ನೀ ಇರಲು ಜೊತೆಯಲಿ’ ಸೇರಿ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿ ಮನೆಮಾತಾಗಿರೋ ನಟಿ ರಜಿನಿ ಸದ್ದಿಲ್ಲದೇ ಮದುವೆಯಾಗಿದ್ದು ಏಕೆ ಎನ್ನುವುದು ಇಂದಿಗೂ ಹಲವರಲ್ಲಿ ಇರುವ ಸಂದೇಹ.

26
ತಿಂಗಳುಗಳೇ ಕಳೆದಿವೆ

ಇವರು ಮದುವೆಯಾಗಿ ಕೆಲವು ತಿಂಗಳುಗಳೇ ಕಳೆದಿವೆ. ಕಳೆದ ನವೆಂಬರ್‌ 10ರಂದು ಜಿಮ್‌ ಟ್ರೈನರ್‌ ಅರುಣ್‌ ಗೌಡ ಅವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರು ಮದುವೆಗೂ ಮುನ್ನ ಸುಮಾರು ಎರಡು ವರ್ಷಗಳಿಂದ ರೀಲ್ಸ್ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದರು. ಆಗಲೇ ಇವರಿಬ್ಬರು ಲವ್‌ನಲ್ಲಿದ್ದಾರೆ ಎಂಬ ಡೌಟ್‌ ಇತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ರಜಿನಿ ಅವರು “ನಾವು ಸ್ನೇಹಿತರು” ಎಂದು ಹೇಳಿದ್ದರು.

36
ಸಿಂಪಲ್‌ ಮದುವೆ

ಇಬ್ಬರೂ ಜೊತೆಯಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ನಾವಿಬ್ಬರು ಆ ರೀತಿ ಅಲ್ಲ, ಬರಿಯ ಸ್ನೇಹಿತರು ಎಂದು ಕೊನೆಯವರೆಗೂ ಮದುವೆಯ ಬಗ್ಗೆ ಮಾತನಾಡಲಿಲ್ಲ ರಜಿನಿ ಅಥವಾ ಅರುಣ್. ಈ ಜೋಡಿ ಬಗ್ಗೆ ಅವರ ಅಭಿಮಾನಿಗಳಿಗೆ ಅನುಮಾನ ಮೂಡಿದ್ದರೂ ಇಲ್ಲ ಇಲ್ಲ ಎನ್ನುತ್ತಲೇ ಕೊನೆಗೆ ಸಿಂಪಲ್‌ ಆಗಿ ಮದುವೆಯಾಗಿದ್ದರು.

46
ವಿಡಿಯೋ ಪಾರ್ಟನರ್‌

ಈ ಹಿಂದೆಯೇ ಇವರಿಬ್ಬರು ಮದುವೆ ಆಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿದ್ದ ರಜಿನಿ ಅವರು “ ನಾನು ಮದುವೆ ಆದರೆ ಮಾತ್ರ ಎಲ್ಲರನ್ನು ಕರೆದು ಮದುವೆ ಆಗುವೆ. ನನ್ನ ಜೊತೆ ವಿಡಿಯೋ ಮಾಡುವ ಅರುಣ್‌ ಗೌಡ ವಿಡಿಯೋ ಪಾರ್ಟನರ್‌, ನನ್ನ ಒಳ್ಳೆಯ ಸ್ನೇಹಿತ ಅಷ್ಟೇ. ಸ್ನೇಹಿತರಾಗಿದ್ದವರು ಮದುವೆ ಆದರೆ ತಪ್ಪಿಲ್ಲ. ಅದೆಲ್ಲ ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದರು.

56
ಸೈಲೆಂಟ್‌ ಮದ್ವೆ ಯಾಕೆ

ಇದೀಗ ತಾವು ಏಕೆ ಸೈಲೆಂಟ್‌ ಆಗಿ ಮದ್ವೆಯಾದ್ವಿ ಎನ್ನುವ ಬಗ್ಗೆ ನಟಿ ಮಾತನಾಡಿದ್ದಾರೆ. ಅಷ್ಟಕ್ಕೂ ಸೆಲೆಬ್ರಿಟಿಗಳ ಮದುವೆ ಎಂದರೆ ಒಂದು ವರ್ಷದಿಂದಲೇ ಭಾರಿ ಸುದ್ದಿ ಸದ್ದು ಮಾಡುತ್ತದೆ. ಆದರೆ ಇನ್ನೇನು ಮದುವೆಯ ಹತ್ತಿರ ಇದೆ ಎನ್ನುವಾಗ ರಜಿನಿ ಮತ್ತು ಅರುಣ್‌ ಅವರ ಮದ್ವೆ ವಿಷ್ಯ ಬಹಿರಂಗಗೊಂಡಿತ್ತು.

66
ಸಿಂಪಲ್‌ ಮದುವೆ

ಇದರ ಬಗ್ಗೆ ಈಗ ಹೇಳಿರುವ ನಟಿ, ತುಂಬಾ ಒಳ್ಳೆಯ ವಿಷ್ಯಗಳು ಮೊದಲೇ ಹೇಳಿದರೆ ಅದು ಆಗುವುದಿಲ್ಲ ಎನ್ನುತ್ತಾರೆ. ಹಾಗೆ ಆಗುವುದು ನಮಗೆ ಇಷ್ಟವಿರಲಿಲ್ಲ. ನಾವು ಜೊತೆಯಾಗಿ ಚೆನ್ನಾಗಿ ಇರಬೇಕು, ಆದ್ದರಿಂದ ಈ ಒಳ್ಳೆಯ ವಿಷ್ಯವನ್ನು ಮೊದಲೇ ಹೇಳಲು ಇಬ್ಬರಿಗೂ ಇಷ್ಟವಿಲ್ಲದೇ ಹೇಳಲಿಲ್ಲ ಎಂದಿದ್ದಾರೆ. ಅರುಣ್‌ಗೂ ಸಿಂಪಲ್‌ ಆಗಿ ರಿಜಿಸ್ಟರ್‌ ಮದುವೆಯಾಗುವ ಆಸೆ ಇತ್ತು. ನಾನೇ ಸ್ವಲ್ಪ ಒತ್ತಾಯ ಮಾಡಿದ್ದರಿಂದ ದೇವಾಲಯದಲ್ಲಿ ಮದುವೆ ಆದ್ವಿ. ಇದನ್ನು ಬಿಟ್ಟರೆ ಇನ್ನೇನು ಬೇರೆ ವಿಷ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ರಜಿನಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories