Room 106 goa trip mystery ಗೋವಾ ಪ್ರವಾಸಕ್ಕೆ ತೆರಳಿದ್ದ ಆರು ಸ್ನೇಹಿತರು, ಹೋಟೆಲ್‌ನಲ್ಲಿ ನಡೆದ ನಿಗೂಢ ಘಟನೆಗಳು ಮತ್ತು ಸ್ನೇಹಿತನ ವಿಚಿತ್ರ ವರ್ತನೆಯಿಂದ ಜೀವನದ ಅತ್ಯಂತ ಭಯಾನಕ ಅನುಭವವನ್ನು ಎದುರಿಸಿದರು.
ಗೋವಾ ಟ್ರಿಪ್ ಎಂದರೆ ಮೋಜು, ಸಂಭ್ರಮ ಮತ್ತು ಸ್ನೇಹಿತರ ಜೊತೆ ಮರೆಯಲಾಗದ ಕ್ಷಣಗಳು. ಆದರೆ ಕರ್ನಾಟಕದ ವಿಜಯಪುರ ಮೂಲದ ಯುವಕರ ತಂಡಕ್ಕೆ ಈ ಟ್ರಿಪ್ ಜೀವನಪೂರ್ತಿ ಮರೆಯಲಾಗದ ಭಯಾನಕ ಅನುಭವವಾಗಿ ಪರಿಣಮಿಸಿತು.
ನರ್ಸಿಂಗ್ ವಿದ್ಯಾರ್ಥಿ ಸಚಿನ್ ಮತ್ತು ಆತನ ಐವರು ಸ್ನೇಹಿತರು ಡಿಸೆಂಬರ್ 2024ರಲ್ಲಿ ಗೋವಾ ಪ್ರವಾಸಕ್ಕೆ ಕಾರಿನಲ್ಲಿ ಹೊರಟಿದ್ದರು. ಕೊಲ್ಹಾಪುರ, ಗಗನಬಾವಡ ಘಾಟ್ ಮಾರ್ಗವಾಗಿ ಸಾಗುತ್ತಿದ್ದ ವೇಳೆ ಮಧ್ಯರಾತ್ರಿಯಲ್ಲಿ ಎರಡು ಬಾರಿ ಕಾರಿನ ಮುಂದೆ ಏಕಾಏಕಿ ಬಂಡೆಗಳು ಬಿದ್ದವು. ಆಗಲೇ ಎಲ್ಲರಲ್ಲೂ ಆತಂಕ ಶುರುವಾಯಿತು.
24
ನೀವು ಎಲ್ಲರೂ ಸಾಯುತ್ತೀರಿ
ಮುಂದೆ ಕಂಕಾವಳಿ ಬಳಿ ತಂಗಿದ್ದ ಹೋಟೆಲ್‌ನಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆಯಿತು. ಬೆಳಗ್ಗೆ ಎದ್ದಾಗ ಕಾರಿನ ಬಾನೆಟ್ ಮೇಲೆ ಕಪ್ಪು ಬಣ್ಣದಲ್ಲಿ ‘ನೀವು ಎಲ್ಲರೂ ಸಾಯುತ್ತೀರಿ’ ಎಂದು ಬರೆಯಲ್ಪಟ್ಟಿರುವುದು ಕಂಡುಬಂತು. ಇದನ್ನು ಮೊದಲಿಗೆ ತಮಾಷೆ ಎಂದುಕೊಂಡ ಸ್ನೇಹಿತರು ನಂತರ ಆತಂಕಕ್ಕೆ ಒಳಗಾದರು.
34
ಹೋಟೆಲ್ ರೂಂನಲ್ಲಿ ಇರುವ ಹಳೆಯ ಫೋಟೋ
ಅದೇ ರಾತ್ರಿ ತಂಡದ ಸದಸ್ಯ ಮೋಹನ್‌ನ ವರ್ತನೆ ಸಂಪೂರ್ಣ ಬದಲಾಗತೊಡಗಿತು. ಸಸ್ಯಾಹಾರಿಯಾಗಿದ್ದ ಆತ ಹಠಾತ್ ಚಿಕನ್ ತಿನ್ನಬೇಕೆಂದು ಒತ್ತಾಯಿಸಲು ಆರಂಭಿಸಿದ. ಸ್ನೇಹಿತರೊಂದಿಗೆ ಜಗಳ, ವಿಚಿತ್ರ ಮಾತುಗಳು, ಕೋಪದ ವರ್ತನೆ ಹಾಗೂ ಅಸಾಮಾನ್ಯ ಶಕ್ತಿಯ ಪ್ರದರ್ಶನ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತು.
ಮೋಹನ್ ತಂಗಿದ್ದ ಹೋಟೆಲ್ ರೂಂನಲ್ಲಿ ಇರುವ ಹಳೆಯ ಫೋಟೋವನ್ನು ನೋಡಿ ಗಂಟೆಗಟ್ಟಲೆ ಅತ್ತಿದ್ದು, ಮತ್ತೆ ಮತ್ತೆ ಅದೇ ರೂಂಗೆ ಹೋಗಬೇಕು ಎಂದು ಒತ್ತಾಯಿಸುತ್ತಿದ್ದ. ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸ್ನೇಹಿತರು ಸ್ಥಳೀಯ ಸೆಕ್ಯುರಿಟಿ ಗಾರ್ಡ್ ಸಹಾಯ ಕೋರಿದರು.
44
ಈ ಘಟನೆ ನಿಜವಾಗಿಯೂ ಅತೀಂದ್ರಿಯ ಶಕ್ತಿಯ ಪ್ರಭಾವವೇ?
ಅದಾಗಿಯೇ ಹೊರಬಂದ ರಹಸ್ಯ ಇನ್ನಷ್ಟು ನಡುಗಿಸಿತು. ಹಲವು ವರ್ಷಗಳ ಹಿಂದೆ ಅದೇ ರೂಂನಲ್ಲಿ ಹೋಟೆಲ್ ಮಾಲೀಕರ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ ಎಂದು ಗಾರ್ಡ್ ತಿಳಿಸಿದ್ದ. ಬಳಿಕ ಕರೆಸಿಕೊಂಡ ತಾಂತ್ರಿಕನ ಪೂಜೆ, ತಾಯಿತ ಹಾಗೂ ಧಾರ್ಮಿಕ ವಿಧಿವಿಧಾನಗಳ ನಂತರ ಮೋಹನ್ ಸಹಜ ಸ್ಥಿತಿಗೆ ಮರಳಿದನೆಂದು ಸ್ನೇಹಿತರು ಹೇಳಿಕೊಂಡಿದ್ದಾರೆ.
ಈ ಘಟನೆ ನಿಜವಾಗಿಯೂ ಅತೀಂದ್ರಿಯ ಶಕ್ತಿಯ ಪ್ರಭಾವವೇ? ಅಥವಾ ಮಾನಸಿಕ ಒತ್ತಡದಿಂದ ಉಂಟಾದ ವರ್ತನಾ ಬದಲಾವಣೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಗೋವಾ ಪ್ರವಾಸಕ್ಕೆ ಹೊರಟಿದ್ದ ಆರು ಯುವಕರಿಗೆ ಈ ಅನುಭವ ಮಾತ್ರ ಜೀವನದ ಅತ್ಯಂತ ಭಯಾನಕ ನೆನಪಾಗಿ ಉಳಿದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.