ರೇಖಾ ಜೊತೆಗಿನ ಹಳೆ ಫೋಟೋ ಹಂಚಿಕೊಂಡ ಅಮಿತಾಬ್ ಬಚ್ಚನ್‌; ಬಾಲಿವುಡ್ ಗಲ್ಲಿಯಲ್ಲಿ ಗುಸುಗುಸು!

First Published | Jan 22, 2024, 4:27 PM IST

ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮಗ ಅಭಿಷೇಕ್ ಬಚ್ಚನ್‌ ಮತ್ತು ಸೊಸೆ ಐಶ್ವರ್ಯಾ ರೈ ಸಂಬಂಧ ಹದಗೆಟ್ಟಿದೆ ಅನ್ನೋ ವಿಚಾರ ಇತ್ತೀಚಿಗೆ ವೈರಲ್ ಆಗಿತ್ತು. ಹೀಗಿರುವಾಗ ಅಮಿತಾಬ್‌ ಪ್ರೇಯಸಿ ಎಂದೇ ಕರೆಸಿಕೊಳ್ಳೋ ರೇಖಾ ಜೊತೆ ಇರೋ ಹಳೆಯ ಫೋಟೋವನ್ನು ಶೇರ್ ಮಾಡಿದ್ದಾರೆ.

ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್ ಬಚ್ಚನ್‌ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೂರಾರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನರಂಜಿಸಿದ್ದಾರೆ. ಯಾವುದೇ ವಿವಾದಕ್ಕೆ ಸಿಲುಕದೆ ಸಿನಿಮಾ ಹಾಗೂ ವೈಯುಕ್ತಿಕ ಜೀವನವನ್ನು ನಿಭಾಯಿಸುವವರು ಬಚ್ಚನ್‌. ಹೀಗಿರುವಾಗ ಇತ್ತೀಚಿಗೆ ಒಂದು ಅಪರೂಪದ ಪೋಟೋವನ್ನು ಶೇರ್ ಮಾಡಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ. 

ಒಂದು ಕಾಲದಲ್ಲಿ ಅಮಿತಾಬ್ ಬಚ್ಚನ್ ಪ್ರೇಯಸಿ ಎಂದೇ ಕರೆಸಿಕೊಂಡಿರೋ ಎವರ್‌ಗ್ರೀನ್ ಹೀರೋಯಿನ್ ರೇಖಾ ಜೊತೆ ಇರೋ ಹಳೆಯ ಫೋಟೋವನ್ನು ಅಮಿತಾಬ್ ಬಚ್ಚನ್ ಶೇರ್ ಮಾಡಿದ್ದಾರೆ.

Tap to resize

ಅಮಿತಾಭ್ ಬಚ್ಚನ್, 80ರ ದಶಕದ ಇತರ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ತಮ್ಮ ಹಳೆಯ ಚಿತ್ರವನ್ನು ಭಾನುವಾರ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ದಿವಂಗತ ರಾಜ್ ಕಪೂರ್, ಶಮ್ಮಿ ಕಪೂರ್ ಮತ್ತು ರೇಖಾ, ಬಚ್ಚನ್ ಮತ್ತು ಇತರ ಸೆಲೆಬ್ರಿಟಿಗಳೊಂದಿಗೆ ವೇದಿಕೆಯ ಮೇಲೆ ನಿಂತಿದ್ದಾರೆ. ಚಿತ್ರದ ಹಿಂದೆ 'ದೊಡ್ಡ ಕಥೆ' ಇದೆ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.

ಅಮಿತಾಬ್ ಬಚ್ಚನ್ ತಮ್ಮ Tumblr ಬ್ಲಾಗ್‌ನಲ್ಲಿ ಆಗಾಗ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲಿ ಅವರು ತಮ್ಮ ಬಂಗಲೆ ಜಲ್ಸಾದ ಗೇಟ್‌ನಿಂದ ಜನರಿಗೆ ಕೈ ಬೀಸುತ್ತಿರುವುದನ್ನು ಕಾಣಬಹುದು. ಅದರ ಕೆಳಗೆ, ಅಮಿತಾಭ್ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. 

ಇದು ಹಳೆಯ ಫೋಟೋ ಆಗಿದ್ದು, ಅಮಿತಾಭ್ ತಮ್ಮ ಕೈಯಲ್ಲಿ ಮೈಕ್‌ ಹಿಡಿದುಕೊಂಡು ಜನರತ್ತ ಕೈ ಬೀಸುತ್ತಾರೆ. ರಾಜ್ ಕಪೂರ್ ಅವರ ಪಕ್ಕದಲ್ಲಿ ಮತ್ತು ರೇಖಾ ಮತ್ತು ಶಮ್ಮಿ ಕಪೂರ್ ಸ್ವಲ್ಪ ದೂರದಲ್ಲಿ ನಿಂತಿದ್ದಾರೆ, ಜೊತೆಗೆ ಚಿತ್ರರಂಗದ ಇತರ ಸದಸ್ಯರು ಫೋಟೋದಲ್ಲಿದ್ದಾರೆ..

ಆದರೆ ಫೋಟೋ ತೆಗೆದ ಸ್ಥಳ, ಸಂದರ್ಭವನ್ನು ಅವರು ಬಹಿರಂಗಪಡಿಸಿಲ್ಲ. ಚಿತ್ರವನ್ನು ಶೇರ್ ಮಾಡಿಕೊಂಡಿರುವ ಅಮಿತಾಬ್ ಬಚ್ಚನ್‌, ಇದಕ್ಕೆ ಶೀರ್ಷಿಕೆಯಾಗಿ, 'ಈ ಛಾಯಾಚಿತ್ರದ ಹಿಂದೆ ಒಂದು ದೊಡ್ಡ ಕಥೆಯಿದೆ. ಮುಂದೊಂದು ದಿನ ಅದನ್ನು ವಿವರಿಸಲಾಗುವುದು' ಎಂದು ಹೇಳಿದರು. 

ಅಮಿತಾಬ್ ಮತ್ತು ರೇಖಾ ಅವರ ಇತಿಹಾಸ
ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರು 70 ಮತ್ತು 80ರ ದಶಕಗಳಲ್ಲಿ ಶ್ರೀ ನಟವರ್‌ಲಾಲ್‌ನಿಂದ ಪ್ರಾರಂಭಿಸಿ ಸಿಲ್ಸಿಲಾ ವರೆಗೆ ಹಲವಾರು ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ಬಲವಾದ ವದಂತಿಗಳು ಇದ್ದವು.
 

ಆದರೆ ಇಬ್ಬರೂ ಅದಕ್ಕೆ ಸ್ಪಷ್ಟನೆ ನೀಡಲ್ಲಿಲ್ಲ. ಆದರೆ ಇವತ್ತಿಗೂ ರೇಖಾ ಮದುವೆಯಾಗದಿದ್ದರೂ ಸಿಂಧೂರ ಧರಿಸುತ್ತಾರೆ. ಅಮಿತಾಭ್ ಜಯಾ ಬಚ್ಚನ್ ಅವರನ್ನು ಮದುವೆಯಾಗಿ 50 ವರ್ಷಗಳು ಕಳೆದಿವೆ. ದಂಪತಿಗೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಎಂಬ ಇಬ್ಬರು ಮಕ್ಕಳಿದ್ದಾರೆ.

Latest Videos

click me!